ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿಸಿ ಅಪ್ರಾಪ್ತೆಯ ಗರ್ಭಿಣಿ ಮಾಡಿದ ಆರೋಪಿ; ಪೋಕ್ಸೋ ಪ್ರಕರಣ ದಾಖಲು

Twitter
Facebook
LinkedIn
WhatsApp
ಪ್ರೀತಿಸಿ ಅಪ್ರಾಪ್ತೆಯ ಗರ್ಭಿಣಿ ಮಾಡಿದ ಆರೋಪಿ; ಪೋಕ್ಸೋ ಪ್ರಕರಣ ದಾಖಲು

ಹಾಸನ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜೀವನ್ (21) ಎಂದು ಗುರುತಿಸಲಾಗಿದೆ. ಆರೋಪಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಒಬ್ಬಳ ಜೊತೆ ಸಲುಗೆಯಿಂದ ಇದ್ದ. ಈ ವೇಳೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈಗ ವಿದ್ಯಾರ್ಥಿನಿ ಐದು ತಿಂಗಳ ಗರ್ಭಿಣಿಯಾದ ಬಳಿಕ ವಿಚಾರ ಬೆಳಕಿಗೆ ಬಂದಿದೆ.

ಸಮಾಜಕ್ಕೆ ಹೆದರಿ ವಿದ್ಯಾರ್ಥಿನಿ ತನ್ನ ಮೇಲಾಗಿರುವ ದೌರ್ಜನ್ಯವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಈಗ ಆಕೆಯ ದೇಹದಲ್ಲಾದ ಬದಲಾವಣೆಯ ಬಳಿಕ ಆತಂಕಗೊಂಡ ವಿದ್ಯಾರ್ಥಿನಿ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ನಂತರ ಬಾಲಕಿಯ ಪೋಷಕರು ಹಾಸನ (Hassan) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಾಸನಾಂಬೆ ದರ್ಶನ ಪಡೆದ ಹರಿಪ್ರಿಯಾ-ವಸಿಷ್ಠ ಜೋಡಿ

ನ್ನಡ ಸಿನಿಮಾ ರಂಗದ ಹೆಸರಾಂತ ನಟ ವಸಿಷ್ಠ ಸಿಂಹ (Vasishtha Simha) ಹಾಗೂ ನಟಿ ಹರಿಪ್ರಿಯಾ (Haripriya) ಇಂದು ಹಾಸನಕ್ಕೆ ತೆರಳಿ ಹಾಸನಾಂಬೆ (Hassanambe) ದೇವಿ ದರ್ಶನ ಪಡೆದರು. ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದ ಹಿನ್ನಲೆಯಲ್ಲಿ, ಕಳೆದ ಮೂರು ಗಂಟೆಯಿಂದ ಪ್ರವಾಸಿ ಮಂದಿರದಲ್ಲಿದ್ದ ವಶಿಷ್ಠ ಸಿಂಹ ದಂಪತಿ ಕಾಯ್ದರು. ಮಧ್ಯಾಹ್ನ 2.30 ರಿಂದ ನೈವೇದ್ಯ ಕಾರಣ ಗರ್ಭಗುಡಿ ಬಂದ್ ಮಾಡಿದ್ದರು ಅರ್ಚಕರು. ಗರ್ಭಗುಡಿ ಬಾಗಿಲು ತೆರೆಯುತ್ತಲೆ ಪ್ರವಾಸಿ ಮಂದಿರದಿಂದ ದೇವಿ ದರ್ಶನಕ್ಕೆ ಪತ್ನಿಯೊಂದಿಗೆ ಬಂದು ಹಾಸನಾಂಬೆಯ ದರ್ಶನ ಪಡೆದರು ವಸಿಷ್ಠ ಸಿಂಹ.

ಮೊದಲನೆ ಸರಿ ಬಂದಿರುವುದು ತುಂಬಾ ಖುಷಿಯಾಗಿದೆ. ಮದುವೆಯಾದ ಮೇಲೆ ಇವರ ಜೊತೆ ಬಂದಿದ್ದೇನೆ. ಎರಡು ವರ್ಷದ ಹಿಂದೆ ಇರುವ ಬಂದಾಗ ಹೇಗಾಯ್ತ ದೇವಿ ದರ್ಶನ ಅಂಥ ಕೇಳಿದ್ದೆ. ಈಗ ಒಟ್ಟಿಗೆ ಬಂದಿದ್ದೇವೆ, ತುಂಬಾ ಖುಷಿಯಾಯ್ತು. ಪುನಃ ಪುನಃ ದರ್ಶನ ಭಾಗ್ಯ ಕೊಡಮ್ಮ ಅಂತ ದೇವರ ಬಳಿ ಬೇಡ್ಕಂಡೆ. ಪ್ರತಿವರ್ಷ ಬರೋಣ ಅಂತ ಅಂದುಕೊಂಡಿದ್ದೇವೆ. ತಾಯಿ ಕರೆಸಿಕೊಳ್ಳಬೇಕು ಅಷ್ಟೇ ಎಂದರು ಹರಿಪ್ರಿಯಾ.

ಹಾಸನಾಂಬೆ ದರ್ಶನಕ್ಕೆ ಪ್ರತಿ ವರ್ಷ ಬರುವುದು ನನಗೆ ಪ್ರತೀತಿ. ಇಷ್ಟು ವರ್ಷ ಒಬ್ಬನೇ ಬರ್ತಿದ್ದೆ, ಈ ವರ್ಷ ಹೆಂಡತಿ ಜೊತೆ ಬರುವಂತಹ ಸೌಭಾಗ್ಯ ಸಿಕ್ಕಿದೆ. ಪ್ರೀತ್ಸೋ ದಿನಗಳಲ್ಲಿ ಬೇಡಿಕೆ, ಹರಿಕೆ ಎಲ್ಲಾ ಇರುತ್ತಲ್ಲ, ಎಲ್ಲಾ ಸುಗಮವಾಗಿ ಆಗಲಿ, ಬೇಗ ಮದುವೆಯಾಗಲಿ ಎಂದು ತಾಯಿಯಲ್ಲಿ ಬೇಡಿಕೊಂಡಿದ್ದೆ. ಆ ಬೇಡಿಕೆ ಈಡೇರಿದೆ ಈಗ ಜೊತೆಯಲ್ಲಿ ಬಂದಿದ್ದೀವಿ. ಆ ತಾಯಿಯ ದರ್ಶನ ಪಡೆದಿದ್ದೆ ಒಂದು ಪುಣ್ಯ. ದರ್ಶನ ಸಿಗಲಿ ಎನ್ನುವುದೇ ನನ್ನ ಪ್ರಾರ್ಥನೆ. ಈ‌ ಬಾರಿ ಒಟ್ಟಿಗೆ ದರ್ಶನ ಮಾಡಿದ್ದೇವೆ ಎಂದಿದ್ದಾರೆ ವಸಿಷ್ಠ.

ಹರಿಪ್ರಿಯಾ ಮತ್ತು ವಸಿಷ್ಠ ಇತ್ತೀಚಿನ ದಿನಗಳಲ್ಲಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಕೇವಲ ಕರ್ನಾಟಕದ ದೇವಸ್ಥಾನಗಳಿಗೆ ಮಾತ್ರವಲ್ಲ, ನೆರೆ ರಾಜ್ಯಗಳ ದೇವಸ್ಥಾನಕ್ಕೂ ಈ ಜೋಡಿ ಭೇಟಿ ನೀಡಿದೆ. ಮದುವೆ ನಂತರ ಸಾಕಷ್ಟು ದೇವಸ್ಥಾನಗಳಿಗೆ ಹರಿಪ್ರಿಯಾ ಮತ್ತು ವಸಿಷ್ಠ ಹೋಗಿದ್ದಾರೆ. ಇದೀಗ ಹಾಸನಕ್ಕೆ ತೆರಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ