ಆಕ್ಸಿಡೆಂಟ್ ಬಳಿಕ ಈ ಸುಂದರಿಗೆ ಸಿಗದ ಅವಕಾಶ..!
‘ವಜ್ರಕಾಯ’ (Vajrakaya) ಸಿನಿಮಾ ಮೂಲಕ ನಭಾ ನಟೇಶ್ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಬಳಿಕ ಟಾಲಿವುಡ್‌ನತ್ತ ನಭಾ ಮುಖ ಮಾಡಿದ್ದರು. ಆಕ್ಸಿಡೆಂಟ್ ಬಳಿಕ ವಜ್ರಕಾಯ ಸುಂದರಿಗೆ ಅವಕಾಶ ಕಮ್ಮಿಯಾಗಿದೆ. ಸದ್ಯ ನಯಾ ಫೋಟೋಶೂಟ್‌ನಿಂದ ನಭಾ ಮಿಂಚ್ತಿದ್ದಾರೆ.
ಇಂಡಸ್ಟಿçಯಲ್ಲಿ ಶ್ರೀಲೀಲಾ (Sreeleela), ರಶ್ಮಿಕಾ ಮಂದಣ್ಣ(Rashmika Mandanna), ಮೃಣಾಲ್ ಜಮಾನ ನಡೆಯುತ್ತಿದೆ. ಇದರ ಮಧ್ಯೆ ‘ಇಸ್ಮಾರ್ಟ್ ಶಂಕರ್’ (Ismart Shankar) ಬ್ಯೂಟಿ ನಭಾ ಕಡೆ ನಿರ್ಮಾಪಕರು ಕ್ಯಾರೇ ಅನ್ನುತ್ತಿಲ್ಲ. ಕನ್ನಡದ ವಜ್ರಕಾಯ ಚಿತ್ರ ಶಿವಣ್ಣಗೆ ನಾಯಕಿಯಾಗಿ ಅದ್ದೂರಿಯಾಗಿ ನಭಾ ನಟೇಶ್ (Nabha Natesh) ಎಂಟ್ರಿ ಕೊಟ್ಟರು. ಬಳಿಕ ರಾಮ್ ಪೋತಿನೇನಿ, ರವಿತೇಜಾಗೆ ನಾಯಕಿಯಾಗಿ ನಭಾ ಮಿಂಚಿದ್ದರು.
ಕಳೆದ ವರ್ಷ ತಮಗೆ ಆದ ಆಕ್ಸಿಡೆಂಟ್‌ನಿಂದ ಈಗ ಚೇತರಿಕೊಂಡಿದ್ದೇನೆ ಎಂದು ನಟಿ ನಭಾ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಈ ಮೂಲಕ ಮತ್ತೆ ಸಿನಿಮಾ ಮಾಡೋದಾಗಿ ಹೇಳಿದ್ದರು. ಸಾಲು ಸಾಲು ಫೋಟೋಶೂಟ್‌ನಿಂದ ನಭಾ ಹಾಟ್ ಪೋಸ್ ಕೊಡ್ತಿದ್ದಾರೆ. ಆದರೆ ಅವರಿಗೆ ಯಾವುದೇ ಸಿನಿಮಾ ಚಾನ್ಸ್ ಸಿಗುತ್ತಿಲ್ಲ.
ಸದ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಹಾಟ್ ಲುಕ್‌ನಿಂದ ಪಡ್ಡೆಹುಡುಗರ ದಿಲ್ ಕದ್ದಿದ್ದಾರೆ. ಇನ್ನಾದರೂ ನಭಾಗೆ ಸಿನಿಮಾ ಚಾನ್ಸ್ ಸಿಗುತ್ತಾ? ಶ್ರೀಲೀಲಾ, ರಶ್ಮಿಕಾ, ಮೃಣಾಲ್‌ಗೆ ನಭಾ ಸಿನಿಮಾ ಚಾನ್ಸ್ ಗಿಟ್ಟಿಸಿಕೊಂಡು ಠಕ್ಕರ್ ಕೊಡ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
2021ರಲ್ಲಿ ಕಡೆಯದಾಗಿ ನಿತಿನ್ ನಾಯಕಿಯಾಗಿ ‘ಮೇಸ್ಟೋ’ ಸಿನಿಮಾದಲ್ಲಿ ನಟಿಸಿದ್ದರು. ನಿತಿನ್, ತಮನ್ನಾ ಜೊತೆ ನಭಾ ನಟೇಶ್ ಕೂಡ ಸಾಥ್ ನೀಡಿದ್ದರು. 2 ವರ್ಷಗಳಿಂದ ನಭಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹೀಗಿರುವಾಗ ಮತ್ತೆ ಕನ್ನಡ ಸಿನಿಮಾಗೆ ಕಮ್ ಬ್ಯಾಕ್ ಆಗ್ತಾರಾ ಕಾಯಬೇಕಿದೆ.
ರೋಮ್‌ನಲ್ಲಿ ರೊಮ್ಯಾನ್ಸ್ ಮಾಡಿದ ’ಕಬ್ಜ’ ಬ್ಯೂಟಿಗೆ ನೆಟ್ಟಿಗರಿಂದ ಕ್ಲಾಸ್
ಚಂದನವನದ ಕಬ್ಜ ಸುಂದರಿ ಶ್ರೀಯಾ ಶರಣ್ (Shriya Saran) ಇದೀಗ ರೋಮ್‌ಗೆ ಹಾರಿದ್ದಾರೆ. ಪತಿ ಜೊತೆ ರೋಮ್ ಬೀದಿಗಳಲ್ಲಿ ರೊಮ್ಯಾನ್ಸ್ ಮಾಡ್ತಿದ್ದಾರೆ. ನಟಿಯ ಲಿಪ್‌ಲಾಕ್, ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರೂಪಾ ಅಯ್ಯರ್ (Roopa Iyer) ನಿರ್ದೇಶನದ ಚಂದ್ರ (Chandra) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ಸುಂದರಿ ಶ್ರೀಯಾ ಅವರು ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಇತ್ತೀಚಿನ ಆರ್‌ಆರ್‌ಆರ್, ಪೊನ್ನಿಯನ್ ಸೆಲ್ವನ್, ಕಬ್ಜ (Kabzaa) ಸಿನಿಮಾದ ಸಕ್ಸಸ್‌ನಿಂದ ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ.
ಬಹುಭಾಷೆಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ಶ್ರೀಯಾ ಅವರು ಡಿಮ್ಯಾಂಡ್ ಇರುವಾಗಲೇ ೨೦೧೮ರಲ್ಲಿ ರಷ್ಯಾದ ಗೆಳೆಯ ಆಂಡ್ರೆ ಅವರನ್ನು ವಿವಾಹವಾದರು. ಇದೀಗ ರಾಧೆ ಎಂಬ ಮುದ್ದಾದ ಮಗಳಿದ್ದಾಳೆ. ಮಗಳ ಪಾಲನೆ ಜೊತೆಗೆ ಸಿನಿಮಾ ರಂಗದಲ್ಲೂ ಆಕ್ಟೀವ್ ಆಗಿದ್ದಾರೆ.
ಇದೀಗ ಶ್ರೀಯಾ ದಂಪತಿ ರೋಮ್‌ನಲ್ಲಿ ಬೀಡು ಬಿಟ್ಟಿದ್ದಾರೆ. ರೋಮ್‌ನ (Rome) ಬೀದಿಯಲ್ಲಿ ಲಿಪ್ ಲಾಕ್ ಮಾಡಿರುವ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ? ಸಾರ್ವಜನಿಕ ಜಾಗದಲ್ಲಿ ಹೇಗಿರಬೇಕು ಎಂದು ತಿಳಿದಿಲ್ವಾ ಎಂದು ನೆಟ್ಟಿಗರು ಶ್ರೀಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ನಲ್ಲಿ ನಟಿಯ ರೊಮ್ಯಾಂಟಿಕ್ ಭಾವಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಶ್ರೀಯಾ ಶರಣ್ ಅವರು ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪ್ಪಿಗೆ (Upendra) ನಾಯಕಿಯಾಗಿ ಗಮನ ಸೆಳೆದಿದ್ದರು. ಈ ಸಿನಿಮಾದ ಪಾರ್ಟ್ 2 ಜೊತೆ ಮತ್ತೆ ಹಲವು ಪರಭಾಷಾ ಸಿನಿಮಾಗಳಲ್ಲಿ ನಟಿ ಬ್ಯುಸಿಯಿದ್ದಾರೆ.