ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆದ ಹುಬ್ಬಳ್ಳಿಯ ಯುವತಿ!

Twitter
Facebook
LinkedIn
WhatsApp
ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆದ ಹುಬ್ಬಳ್ಳಿಯ ಯುವತಿ!

ಬೆಂಗಳೂರು: ಉತ್ತರ ಕರ್ನಾಟಕದ ಹುಬ್ಬಳ್ಳಿಯ ಸಂಜನಾ ಹಿರೇಮಠ್ (23) ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗುವ ಮೂಲಕ ರಾಜತಾಂತ್ರಿಕರ ಕಾರ್ಯವೈಖರಿಯನ್ನು ಕಂಡುಕೊಂಡರು. ಅಲ್ಲದೇ, ಯುಕೆ-ಭಾರತದ ಪಾಲುದಾರಿಕೆಯನ್ನು ಕಾರ್ಯರೂಪಕ್ಕೆ ತರಲು ಬಯಸಿದರು.

ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲು (ಅಕ್ಟೋಬರ್ 11) 2017 ರಿಂದ ಪ್ರತಿ ವರ್ಷ ‘ಹೈ ಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. 

ಈ ವರ್ಷ ದೇಶಾದ್ಯಂತ ಯುವತಿಯರಿಂದ 180ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಹಿರೇಮಠ್ ವಿಜೇತರಾಗಿ ಆಯ್ಕೆಯಾಗಿದ್ದರು. ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಿರೇಮಠ್, ಪ್ರಸ್ತುತ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ (LSEG) ನಲ್ಲಿ ಉದ್ಯೋಗಿಯಾಗಿದ್ದಾರೆ.

 “ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ಬೆಂಗಳೂರಿನಲ್ಲಿ ಒಂದು ದಿನ ಕಳೆಯುವ ನನ್ನ ಕನಸು ನನಸಾಗಿದೆ. ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ತಂಡದ ನಾಯಕತ್ವ ತಿಳಿಯಲು ಮತ್ತು ಅವರೊಂದಿಗೆ ಸಂವಾದ ನಡೆಸಲು ನನಗೆ ಅವಕಾಶ ದೊರೆಯಿತು. ನನ್ನ ಸ್ಪರ್ಧೆಯ ಪ್ರವೇಶದಲ್ಲಿ ಹೇಳಿದಂತೆ, ಮಹಿಳಾ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು, ಬದಲಾವಣೆ ತರುತ್ತೇನೆ ಎಂದು ಹೇಳಿದರು.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ‘ಹೈ ಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯು ಯುವತಿಯರಿಗೆ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ವೇದಿಕೆ ಒದಗಿಸುತ್ತದೆ. ಬೆಂಗಳೂರಿನಲ್ಲಿ ಯುಕೆಯ ಉನ್ನತ ರಾಜತಾಂತ್ರಿಕರಾಗಿ ಹಿರೇಮಠ್ ಒಂದು ದಿನದ ಅವಧಿಯಲ್ಲಿ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡರು ಎಂದು ತಿಳಿಸಿದರು. 

ಬೆಂಗಳೂರಿನ ಡಿಹೆಚ್‌ಸಿಯ ನಿವಾಸದಲ್ಲಿ ಅಯ್ಯರ್ ಅವರೊಂದಿಗೆ ಬೆಳಗಿನ ಉಪಾಹಾರದೊಂದಿಗೆ ಆಕೆಯ ದಿನಚರಿ ಪ್ರಾರಂಭವಾಯಿತು. ನಂತರ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಮುನ್ನಡೆಸಲು ತಮ್ಮ ಆಲೋಚನೆಗಳ ಬಗ್ಗೆ ಮಾತನಾಡಿದರು. ಊಟದ ಸಮಯದಲ್ಲಿ, ಅವರು ಬಸವೇಶ್ವರ ಖಾನಾವಳಿಯಲ್ಲಿ ಆಸ್ಟ್ರೇಲಿಯಾದ ಕಾನ್ಸುಲ್-ಜನರಲ್ ಹಿಲರಿ ಮೆಕ್‌ಗೆಚಿ ಅವರನ್ನು ಭೇಟಿಯಾಗಿ ಜೋಳದ ರೊಟ್ಟಿ ಊಟ ಸವಿದರು ಮತ್ತು ಮಹಿಳೆಯರ ನಾಯಕತ್ವ  ಮತ್ತು ಉತ್ತರ ಕರ್ನಾಟಕದ ವಿಶಿಷ್ಟ ಪಾಕಪದ್ಧತಿಯ ಬಗ್ಗೆ ಮಾತನಾಡಿದರು.

ಗ್ರಂಥಾಲಯಗಳು, ಕೌಶಲ್ಯ ತರಬೇತಿ, ಎಸ್‌ಡಿಜಿಗಳು, ಚೆವೆನಿಂಗ್ ಸ್ಕಾಲರ್‌ಶಿಪ್‌ಗಳು ಮತ್ತು ನಾಯಕತ್ವದ ಮಹಿಳೆಯರ ಪ್ರವೇಶದ ಮೂಲಕ ಶಿಕ್ಷಣವನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಕುರಿತು ಚೆವೆನಿಂಗ್ ಗುರುಕುಲ ಫೆಲೋ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ (ಐಎಎಸ್) ಅವರೊಂದಿಗಿನ ಸಭೆಯೊಂದಿಗೆ ಹಿರೇಮಠ್ ಅವರ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ದಿನವೂ ಮುಕ್ತಾಯವಾಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ