ಸೋಮವಾರ, ಏಪ್ರಿಲ್ 29, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಬರ್ಬರ ಕೊಲೆ

Twitter
Facebook
LinkedIn
WhatsApp
ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಬರ್ಬರ ಕೊಲೆ

ಡ್ಯಾನ್ಸ್ ಮಾಡುವವಾಗ ಜಸ್ಟ್‌ ಟಚ್ ಆಗಿದ್ದಕ್ಕೆ ಯುವಕನೊಬ್ಬನ ಕೊಲೆ (Murder Case) ನಡೆದಿದೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯೋಗೇಶ್ (23) ಹತ್ಯೆಯಾದವನು.

ಯೋಗೇಶ್‌ ಬೈಕ್ ಸರ್ವೀಸ್ ಸೆಂಟರ್‌ನಲ್ಲಿ ವಾಷಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ದೇವಸ್ಥಾನದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಟಚ್‌ ಆಗಿದ್ದಕ್ಕೆ ಸಣ್ಣದಾಗಿ ಗಲಾಟೆಯಾಗಿತ್ತು. ಅನಂತರ ಸ್ಥಳೀಯರ ಮಧ್ಯಸ್ಥಿಕೆಯಿಂದ ಗಲಾಟೆ ತಣ್ಣಾಗಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಯೋಗೇಶ್‌ನನ್ನು ನಾಲ್ವರು ಹಿಂಬಾಲಿಸಿಕೊಂಡು ಬಂದಿದ್ದರು.

ಈ ವೇಳೆ ನಾಲ್ವರು ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಯೋಗೀಶ್‌ಗೆ ಚುಚ್ಚಿದ್ದರು. ಆದರೂ ಯೋಗೇಶ್‌ ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದರ ಕಾಂಪೌಂಡ್ ಹಾರಿದ್ದ. ಆದರೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದ. ಮೊದಮೊದಲು ಕಾಂಪೌಂಡ್‌ನಲ್ಲಿಟ್ಟಿದ್ದ ಗ್ಲಾಸ್ ಚುರು ಚುಚ್ಚಿದ್ದರಿಂದಲೇ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದರು.

ಆದರೆ ಸ್ಥಳಕ್ಕಾಗಮಿಸಿ ಪೊಲೀಸರು ತನಿಖೆ ನಡೆಸಿದಾಗ ಇದು ಆಕಸ್ಮಿಕ ಸಾವು ಅಲ್ಲ, ಬದಲಿಗೆ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿಲ್ಲ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಗೆ ಯಾವುದೇ ಹಳೆ ದ್ವೇಷ ಕಂಡು ಬಂದಿಲ್ಲ. ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಈ ನಡುವೆ, ಶುಕ್ರವಾರ ರಾತ್ರಿ ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತದ ಸಮೀಪ ನಿಂತಿದ್ದ ಮೌಲಾನಾ ಅಕ್ಮಲ್‌ನ ಕೊಲೆಯಾಗಿದೆ. ಮೂರು ಬೈಕ್‌ನಲ್ಲಿ ಬಂದ 6 ಜನರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಹಂತಕರು ಬೆಂಗಳೂರಿನಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈಗ ಎಫ್‌ಐಆರ್‌ ಆಗಿರುವವರ ಬಂಧನ ನಡೆದು ವಿಚಾರಣೆ ವೇಳೆ ಎಲ್ಲ ವಿವರ ಬಹಿರಂಗವಾಗಲಿದೆ. ಈ ನಡುವೆ ಅಕ್ಮಲ್‌ ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದು, ಆ ಕಾರಣಕ್ಕಾಗಿ ಕೊಲೆ ನಡೆದಿರಬಹುದು ಎಂಬ ಶಂಕೆಯೂ ಇತ್ತು.

ಪತ್ನಿಗೆ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ನೀಚ

ಶಿವರಾತ್ರಿ ಜಾಗರಣೆ ವೇಳೆ ಹುಲ್ಲು ತರಲು ಪತ್ನಿಯನ್ನು ಕರೆದೊಯ್ದ ಪತಿಗೆ ಅದ್ಯಾವ ಭೂತ ಒಳಹೊಕ್ಕಿತ್ತೋ ಏನೋ ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ.

ನರಸಮ್ಮ (45) ಎಂಬಾಕೆ ಪತಿಯಿಂದಲೇ ಕೊಲೆಯಾದ ದುರ್ದೈವಿ. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರಸಮ್ಮ ಪತಿ ಗಂಗುಲಪ್ಪ ಎಂಬಾತ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ದಾನೆ.

ಕೊಲೆಯಾದ ಸ್ಥಿತಿಯಲ್ಲಿ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಾತಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದಿಲ್ಲ. ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ