ಶನಿವಾರ, ಜುಲೈ 13, 2024
13 ರಲ್ಲಿ 10 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ INDIA ಮೈತ್ರಿಕೂಟ; ಬಿಜೆಪಿಗೆ 2 ಸ್ಥಾನ-ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?-ವಾಲ್ಮೀಕಿ ನಿಗಮ, ಮುಡಾ ಹಗರಣ ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು: ಸಂಸದ ಯದುವೀರ್ ಒಡೆಯರ್-ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಗೌಡ; ಉಪಾಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ!-ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುವ ವಿಡಿಯೋ ವೈರಲ್; ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ವಿರುದ್ಧ ಎಫ್ಐಆರ್!-WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!-ಬಿಜೆಪಿ ಮೈತ್ರಿಕೂಟಕ್ಕೆ ಪರಿಷತ್ತಿನ ಚುನಾವಣೆಯಲ್ಲಿ 11ರ ಪೈಕಿ 9 ಸ್ಥಾನಗಳಲ್ಲಿ ಜಯ!-Aparna: ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ-ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!-ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್​ ಗಂಭೀರ್ ನೇಮಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕುಡಿದ ಮತ್ತಿನಲ್ಲಿ ಹಾವಿಗೆ ಮುತ್ತಿಟ್ಟು ವಿಡಿಯೋ ಮಾಡಲು ಹೋಗಿ ಯುವಕ ಸಾವು!

Twitter
Facebook
LinkedIn
WhatsApp
ಕುಡಿದ ಮತ್ತಿನಲ್ಲಿ ಹಾವಿಗೆ ಮುತ್ತಿಟ್ಟು ವಿಡಿಯೋ ಮಾಡಲು ಹೋಗಿ ಯುವಕ ಸಾವು!

ಉತ್ತರ ಪ್ರದೇಶದ (Uttar Pradesh) ರೋಹಿತ್ ಜೈಸ್ವಾಲ್ ಎಂಬಾತ ಕುಡಿದ ಮತ್ತಿನಲ್ಲಿ  ಹಾವಿಗೆ ಮುತ್ತು ಕೊಡಲು ಹೋಗಿ ಸಾವನ್ನಪ್ಪಿದ್ದಾನೆ. 22 ವರ್ಷದ ರೋಹಿತ್ ಜೈಸ್ವಾಲ್ ಈತ ಅಹಿರೌಲಿ ಗ್ರಾಮದ ನಿವಾಸಿಯಾಗಿದ್ದಾನೆ. ಕೂಡ ಕುಟುಂಬದಲ್ಲಿ ಹುಟ್ಟಿದ ರೋಹಿತ್ ಪೋಷಕರಿಗೆ 6 ಮಂದಿ ಮಕ್ಕಳಿದ್ದಾರೆ. ಈತನೇ ಕೊನೆಯ ಮಗನಾಗಿದ್ದ. ಕುಡಿದ ಅಮಲಿನಲ್ಲಿ ಹಾವಿನ ಜೊತೆ ವಿಡಿಯೋ ಮಾಡಲು ಹೋಗಿ ರೋಹಿತ್​ ಜೈಸ್ವಾಲ್ ಸಾವನ್ನಪ್ಪಿದ್ದಾನೆ.

 

ರೀಲ್​ ಹುಚ್ಚು ಈತನನ್ನು ಬಿಟ್ಟಿರಲಿಲ್ಲ. ಜೈಸ್ವಾಲ್ ಶಿವನ ರೂಪವಾದ ಮಹಾಕಾಲ್ ಆಗಿ ನಟಿಸುತಿದ್ದ. ಕುಡಿದು ಹಾವನ್ನು ಹಿಡಿದುಕೊಂಡು  ತನಗೆ ಕಚ್ಚುವಂತೆ ಸವಾಲು ಹಾಕಿದ್ದ. ಹಾವನ್ನು ಕೈಗೆ ಸುತ್ತಿಕೊಂಡಿದ್ದಾನೆ, ಬಳಿಕ ನಾಲಿಕೆ ತೆರೆದು ನಾಲಿಗೆಗೆ ಕಚ್ಚುವಂತೆ ಹಾವಿಗೆ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದೆ. ಹಾವನ್ನು ಹಿಡಿದುಕೊಂಡು ಸಿಗರೇಟ್​ ಸೇದುವುದು ಹಾಗೂ ಹಾವಿಗೆ ಹೊಡೆಯುವುದು ಹೀಗೆ ಹುಚ್ಚನಂತೆ ಆಡಿದ್ದಾನೆ. ಈ ವೇಳೆ ಹಾವು ಜೈಸ್ವಾಲ್​ಗೆ ಕಚ್ಚಿದೆ ಸ್ಥಳದಲ್ಲೇ ರೋಹಿತ್ ಜೈಸ್ವಾಲ್ ಸಾವನ್ನಪ್ಪಿದ್ದಾನೆ.

ಹಾವಿನ ಜೊತೆ ಆಟವಾಡಲು ಹೋಗಿ ಪ್ರಾಣ ಬಿಟ್ಟ ರೋಹಿತ್ 

ರೋಹಿತ್ ಜೈಸ್ವಾಲ್ ಹಾವಿನ ಜೊತೆ ಹುಚ್ಚಾಟವಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೈಸ್ವಾಲ್ ಸಾವಿನ ನಂತರ ಸ್ಥಳಕ್ಕೆ ಬಂದ ಪೊಲೀಸರು ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾವು ಕಡಿತದಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ