ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!

Twitter
Facebook
LinkedIn
WhatsApp
ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!
ಬೆಂಗಳೂರು: ಸ್ನೇಹಿತರ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಏರ್‌ ಪ್ರೆಶರ್‌ ಪೈಪ್‌ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃತಪಟ್ಟಿದ್ದಾನೆ. ಸ್ನೇಹಿತರ ಹುಡುಗಾಟದಲ್ಲಿ ಘನಘೋರ ಘಟನೆ ಬೆಂಗಳೂರಲ್ಲಿ ನಡೆದಿದೆ.
ಯೋಗಿಶ್ (28) ಮೃತ ದುರ್ದೈವಿ. ಕಳೆದ ಮಾರ್ಚ್ 25ರಂದು ಬೈಕ್‌ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್‌ಸಿ (CNS) ಬೈಕ್ ಸರ್ವೀಸ್ ಸೆಂಟರ್‌ಗೆ ಯೋಗಿಶ್‌ ತೆರಳಿದ್ದ. ಅದೇ ಸರ್ವೀಸ್‌ ಸೆಂಟರ್‌ನಲ್ಲಿ ಯೋಗಿಶ್‌ ಸ್ನೇಹಿತ ಮುರುಳಿ ಎಂಬಾತ ಕೆಲಸ ಮಾಡುತ್ತಿದ್ದ.
ಇವರಿಬ್ಬರು ಒಬ್ಬರಿಗೊಬ್ಬರು ತರ್ಲೆ, ತಂಟೆ ಮಾಡಿಕೊಂಡು ಆಟವಾಡುತ್ತಿದ್ದರು. ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್ ಪ್ಲೇಶರ್ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಮುರುಳಿ, ಯೋಗೀಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗಿಶ್ ಗುದದ್ವಾರಕ್ಕೆ ಏರ್‌ ಪ್ಲೇಶರ್‌ನಿಂದ ಗಾಳಿ ಬಿಟ್ಟಿದ್ದಾನೆ.
ಈ ವೇಳೆ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರುಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್‌ ಮೃತಪಟ್ಟಿದ್ದಾನೆ.
ಸದ್ಯ ಮೃತ ಯೋಗೇಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ಬಂಧಿಸಿದ್ದಾರೆ.
ಘಟನೆ ಸಂಬಂಧ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ. ಮೃತ ಯೋಗೇಶ್ ಮೂಲತಃ ವಿಜಯಪುರದವನು. ಡೆಲವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಥಣಿಸಂದ್ರದಲ್ಲಿ ವಾಸವಿದ್ದ. ಮೊನ್ನೆ ಸಂಜೆ ಬೈಕ್ ಸರ್ವೀಸ್ ಮಾಡಿಸಲು ಹೋಗಿದ್ದ. ಮುರುಳಿ ಕೂಡ ಅದೇ ಬೈಕ್‌ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ.
ಇಬ್ಬರು ಸ್ನೇಹಿತರಾಗಿದ್ದ ಕಾರಣ ಆಟ ಆಡಲು ಹೋಗಿ ಘಟನೆ ಸಂಭವಿಸಿದೆ. ಮೊದಲಿಗೆ ಮುರುಳಿ ಮುಖ ಹಾಗೂ ಎದೆಗೆ ಗಾಳಿ ಬಿಟ್ಟಿದ್ದಾನೆ. ಬಳಿಕ ಹಿಂಬದಿಯಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಈ ವೇಳೆ ಹೊಟ್ಟೆ ಒಮ್ಮೆಲೆ ಊದಿಕೊಂಡು ಯೋಗೇಶ್‌ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ