ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!
ಮಾರ್ಗಮಧ್ಯೆ ರೈತರೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆ(Farmers Protest)ಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಪಂಜಾಬ್-ಹರ್ಯಾಣದ ಎರಡು ಪ್ರತಿಭಟನಾ ಸ್ಥಳಗಳಲ್ಲಿ ಒಂದಾದ ಖಾನೌರಿ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರರೊಬ್ಬರು ಸಾವನ್ನಪ್ಪಿದ್ದಾರೆ. ಶುಭ್ ಕರಣ್ ಸಿಂಗ್ ಅವರನ್ನು ಪಟಿಯಾಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅವರಿಗೆ ಬುಲೆಟ್ಗಳು ತಗುಲಿತ್ತು ಎಂದು ವೈದ್ಯರು ಹೇಳಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಖಾನೌರಿಯಿಂದ ನಮ್ಮ ಬಳಿಗೆ ಮೂವರು ರೋಗಿಗಳು ಬಂದಿದ್ದರು. ಅವರಲ್ಲಿ ಒಬ್ಬರು ಬರುವಾಗಲೇ ಮೃತಪಟ್ಟಿದ್ದರು, ಇನ್ನಿಬ್ಬರ ಆರೋಗ್ಯ ಸ್ಥಿರವಾಗಿದೆ ಬುಲೆಟ್ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ಮಾತನಾಡಿ, ಮೃತರನ್ನು ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಶುಭಕರಣ್ ಸಿಂಗ್ (24) ಎಂದು ಗುರುತಿಸಲಾಗಿದೆ.
ಪಟಿಯಾಲ ಮೂಲದ ರಾಜಿಂದರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌ಎಸ್ ರೇಖಿ ಮಾತನಾಡಿ, ಖಾನೌರಿಯಿಂದ ಮೂವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರ ತಲೆಗೆ ಗಾಯವಾಗಿದ್ದು, ಉಳಿದ ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
My heartfelt condolences to the family of deceased farmer Shubkaran son of Charanjit Singh of V.Ballo District Bathinda who was shot by Haryana police today at Khannauri border during #FarmerProtest2024. This is matter of grave concern and at the same time shame for @BhagwantMann… pic.twitter.com/WgXiLxMd4i
— Sukhpal Singh Khaira (@SukhpalKhaira) February 21, 2024
ಹರ್ಯಾಣ ಪೊಲೀಸರು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಭೇದಿಸುವ ಪ್ರಯತ್ನವನ್ನು ವಿಫಲಗೊಳಿಸಲು ಮುಂದಾದ ರೈತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ ಎಂದು ರೈತರು ತಿಳಿಸಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.
ಕೃಷಿ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಪ್ರತಿಭಟನಾ ನಿರತ ರೈತರನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಐದನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದ್ದಾರೆ. ಎಂಎಸ್‌ಪಿಯಾಗಲಿ, ಬೆಳೆ ವೈವಿಧ್ಯತೆಯಾಗಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದರು. ಸಂವಾದದ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಅವರನ್ನು ಚರ್ಚೆಗೆ ಆಹ್ವಾನಿಸಿದ್ದೇನೆ ಎಂದರು.
24-year-old farmer Subh Karan dies in police firing at Khanauri border.
— Sunil rahar (@Sunilrahar10) February 21, 2024
@htTweets @HTPunjab @ramanmann1974 @RakeshTikaitBKU @priyankagandhi @deependerdeswal pic.twitter.com/5yWKCtOVZ0
ರೈತರ ಪ್ರತಿಭಟನೆಯ ಉದ್ದೇಶವೇನು?
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವುದು ರೈತರ ಬಹುಮುಖ್ಯ ಬೇಡಿಕೆಯಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ -ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು
-ಭಾರತವನ್ನು ಡಬ್ಲ್ಯೂಟಿಒದಿಂದ ಹೊರತೆಗೆಯಬೇಕು
-ಕೃಷಿ ಸರಕುಗಳು, ಹಾಲು ಉತ್ಪನ್ನಗಳು, ಹಣ್ಣುಗಳು,ತರಕಾರಿಗಳು ಮತ್ತು ಮಾಂಸದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭತ್ಯೆ ಹೆಚ್ಚಿಸಬೇಕು.
-58 ವರ್ಷ ಮೇಲ್ಪಟ್ಟ ರೈತರು ಮತ್ತು ಕೃಷಿ ಕೂಲಿಕಾರರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಿ ಮಾಸಿಕ 10 ಸಾವಿರದವರೆಗೆ ಪಿಂಚಣಿ ನೀಡಬೇಕು. -ಕೀಟನಾಶಕಗಳು, ಬೀಜಗಳು ಮತ್ತು ರಸಗೊಬ್ಬರ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹತ್ತಿ ಸೇರಿದಂತೆ ಎಲ್ಲಾ ಬೆಳಗಳ ಬೀಜಗಳ ಗುಣಮಟ್ಟ ಸುಧಾರಿಸಬೇಕು