ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಯುವ ನಟಿ ಅರೆಸ್ಟ್..!
ಸಲ್ಲದ ಕಾರಣಗಳಿಂದಾಗಿ ಇತ್ತೀಚೆಗೆ ನಟಿಯರು ಸುದ್ದಿ ಆಗುತ್ತಿದ್ದಾರೆ. ಜೊತೆಗೆ ಜೈಲು ಸೇರುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಒರಿಯಾ ನಟಿ ಮೌಶುಮಿ ನಾಯಕ್ (Moushumi Naik). ಲೇಖಕಿಯೊಬ್ಬರಿಗೆ ಬ್ಲ್ಯಾಕ್ ಮೇಲ್ (Black mail) ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತಂದಿದ್ದನ್ನು ಸ್ವತಃ ನಟಿ ಒಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಒರಿಯಾ ಸಿನಿಮಾ ರಂಗದಲ್ಲಿ ಅತ್ಯಂತ ಜನಪ್ರಿಯ ನಟಿ ಮೌಶುಮಿ ನಾಯಕ್, ದುಡ್ಡಿನ ವಿಚಾರದಲ್ಲಿ ಲೇಖಕಿ ಬನಸ್ಮಿತಾ (Banasmita) ಅವರ ಮಾನಹಾನಿ ಮಾಡಿದ್ದರಂತೆ. ಜೊತೆಗೆ ಲೇಖಕಿ ಪತಿಯ ವಿರುದ್ಧ ಚಂದಕಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೂಡ ನೀಡಿದ್ದರಂತೆ. ಆನಂತರ ಲೇಖಕಿ ಹಾಗೂ ನಟಿ ರಾಜಿ ಮಾಡಿಕೊಂಡಿದ್ದಾರೆ. ಇದಾದ ನಂತರವೂ ನಿರಂತರವಾಗಿ ನಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಲೇಖಕಿ ದೂರು ನೀಡಿದ್ದರು.
ಲೇಖಕಿ ನೀಡಿದ ದೂರಿನ ಆಧಾರದಲ್ಲಿ ಭುವನೇಶ್ವರದ ಇನ್ಫೋಸಿಟಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಸೆಕ್ಸನ್ 385, 294, 506 ಹಾಗೂ 507ರ ಅಡಿಯಲ್ಲಿ ನಟಿಯ ಬಂಧಿಸಲಾಗಿದೆ ಎಂದು ಡಿಸಿಪಿ ಕಚೇರಿಯು ತಿಳಿಸಿದೆ.
ರ‍್ಯಾಪರ್ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್?
ಸೌತ್ ಬ್ಯೂಟಿ ಮೃಣಾಲ್ ಠಾಕೂರ್ (Mrunal Thakur) ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ರ‍್ಯಾಪರ್ ಬಾದಶಾ (Rapper Badshash) ಜೊತೆ ಮೃಣಾಲ್ ಕದ್ದು ಮುಚ್ಚಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಇದೀಗ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ.
ದೀಪಾವಳಿ ಹಬ್ಬದಂದು ಫ್ಯಾನ್ಸ್‌ಗೆ ಮೃಣಾಲ್ ಬಗ್ಗೆ ಸಿಹಿಸುದ್ದಿ ಸಿಕ್ಕಿದೆ. ಬಾಲಿವುಡ್ ಕಾರ್ಯಕ್ರಮವೊಂದರಲ್ಲಿ ಗೆಳೆಯನ ಜೊತೆ ಕೈ ಕೈ ಹಿಡಿದು ಮೃಣಾಲ್ ಕಾಣಿಸಿಕೊಂಡಿದ್ದಾರೆ. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ, ತಮ್ಮ ನಿವಾಸದಲ್ಲಿ ದೀಪಾವಳಿ ಹಬ್ಬಕ್ಕೆ ನಟ-ನಟಿಯರಿಗೆ ಆಹ್ವಾನ ನೀಡಿದ್ದರು.
ಆಗ ಮೃಣಾಲ್ ಜೊತೆ ರ‍್ಯಾಪರ್ ಬಾದಶಾ ಕೂಡ ಆಗಮಿಸಿದ್ದರು. ಶಿಲ್ಪಾ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ನಂತರ ಪಾರ್ಟಿ ಮುಗಿಸಿ ತೆರಳುವಾಗ ಇಬ್ಬರು ಪರಸ್ಪರ ಕೈ ಹಿಡಿದುಕೊಂಡು ಓಡಾಡಿದ್ದಾರೆ. ಈ ಬೆನ್ನಲ್ಲೇ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂದೇ ಸುದ್ದಿ ಹಬ್ಬಿದೆ.
ಶಿಲ್ಪಾ ಶೆಟ್ಟಿ (Shilpa Shetty) ಜೊತೆಯಿರುವ ಬಾದಶಾ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೃಣಾಲ್ ಶೇರ್ ಮಾಡಿದ್ದಾರೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.