ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಗೆಳತಿಯನ್ನು ವರಿಸಲು ಲಿಂಗವನ್ನೇ ಪರಿವರ್ತಿಸಿ ಪುರುಷನಾದ ಮಹಿಳೆ!

Twitter
Facebook
LinkedIn
WhatsApp
ಗೆಳತಿಯನ್ನು ವರಿಸಲು ಲಿಂಗವನ್ನೇ ಪರಿವರ್ತಿಸಿ ಪುರುಷನಾದ ಮಹಿಳೆ!

ಭೋಪಾಲ್‌: ಮಧ್ಯಪ್ರದೇಶದ ಇಂದೋರ್ (Indore) ಇತ್ತೀಚೆಗೆ ಅಪರೂಪದ ವಿವಾಹವೊಂದಕ್ಕೆ ಸಾಕ್ಷಿಯಾಯಿತು. ಇಂದೋರ್‌ನ ಅಲ್ಕಾ ಎಂಬ ಮಹಿಳೆ ಪುರಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ತನ್ನ ದೀರ್ಘಕಾಲದ ಗೆಳತಿ ಆಸ್ತಾಳನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ರೀತಿಯ ವಿವಾಹವು ಇಂದೋರ್‌ನಲ್ಲಿ ಮೊದಲನೆಯದು ಎನ್ನಲಾಗಿದೆ. ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಡಿಸೆಂಬರ್ 7ರಂದು ಮದುವೆ ನೆರವೇರಿದೆ. ಸದ್ಯ ಈ ವಿಶೇಷ ಮದುವೆ ಸುದ್ದಿ ವೈರಲ್‌ ಆಗಿದೆ 

ಅಲ್ಕಾ ಎನ್ನುವ ಮಹಿಳೆ ತನ್ನ 47ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಅಸ್ತಿತ್ವ ಎಂಬ ಹೆಸರಿನಲ್ಲಿ ಪುರುಷನಾಗಿ ಬದಲಾಗಿದ್ದಾರೆ. ಬಳಿಕ ಅವರು ಕುಟುಂಬ ನ್ಯಾಯಾಲಯದಲ್ಲಿ ತಮ್ಮ ಗೆಳತಿ ಆಸ್ತಾ ಅವರನ್ನು ವಿವಾಹವಾದರು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಆಸ್ತಾ ಏನು ಹೇಳುತ್ತಾರೆ?

ಅಸ್ತಿತ್ವ ಅವರನ್ನು ಅವರ ಮನೆಯಲ್ಲಿ ಆಸ್ತಾ ಮೊದಲು ಭೇಟಿಯಾಗಿದ್ದರು. ಅಸ್ತಿತ್ವ ಮತ್ತು ಆಸ್ತಾ ಅವರ ಸಹೋದರಿ ಸ್ನೇಹಿತರಾಗಿದ್ದರು. ಪರಸ್ಪರ ಭೇಟಿ ಮುಂದೊಂದು ದಿನ ಇಬ್ಬರ ಮಧ್ಯೆ ಪ್ರೀತಿಯಾಗಿ ಅರಳಿತು. ಅಂತಿವಾಗಿ ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಡೆಸಲಾಯಿತು ಎಂದು ಆಸ್ತಾ ತಿಳಿಸಿದ್ದಾರೆ. ಡಿಸೆಂಬರ್ 11ರಂದು ‘ಸಾತ್ ಫೆರಾಸ್’ (ಸಪ್ತಪದಿ) ಸಂಪ್ರದಾಯ ನೆರವೇರಿಸುವುದಾಗಿಯೂ ಅವರು ಹೇಳಿದ್ದಾರೆ.

ಖುಷಿ ವ್ಯಕ್ತಪಡಿಸಿದ ದಂಪತಿ

ಮದುವೆಗೂ ಮುನ್ನ ದಂಪತಿ ಇಂದೋರ್ ಜಿಲ್ಲಾಧಿಕಾರಿ ರೋಶನ್ ರಾಯ್ ಅವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಮದುವೆಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಎರಡೂ ಕಡೆಯ ಕಟುಂಬಸ್ಥರಿಗೆ ತಿಳಿಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್‌ 7ರಂದು ಅಸ್ತಿತ್ವ ಮತ್ತು ಆಸ್ತಾ ಎರಡೂ ಕಡೆಯ ಇಬ್ಬರು ಸಾಕ್ಷಿಗಳು ಮತ್ತು ಜಂಟಿ ಸಾಕ್ಷಿಯ ಸಮ್ಮುಖದಲ್ಲಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದುಕೊಂಡರು. ಮದುವೆಯ ನಂತರ ಅಸ್ತಿತ್ವ ಮತ್ತು ಆಸ್ತಾ ಇಬ್ಬರೂ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮದುವೆಯಾಗುವ ನಿರ್ಧಾರಕ್ಕೆ ಬರಲು ಹಲವು ತಿಂಗಳು ಸಮಾಲೋಚನೆ ನಡೆಸಿದ್ದೆವು. ಅಂತಿಮವಾಗಿ ಕುಟುಂಬದ ಒಪ್ಪಿಗೆ ಪಡೆದು ಲಿಂಗ ಪರಿವರ್ತನೆಗೆ ಮುಂದಾಗಿದ್ದೆವು ಎಂದು ದಂಪತಿ ತಿಳಿಸಿದ್ದಾರೆ.

ಹಿಂದೆಯೂ ನಡೆದಿತ್ತು

ಈ ಮಾದರಿಯ ಘಟನೆ ಹಿಂದೆಯೂ ದೇಶದಲ್ಲಿ ನಡೆದಿತ್ತು. ಕಳೆದ ವರ್ಷ ರಾಜಸ್ಥಾನದ ಭರತ್‌ಪುರದಲ್ಲಿ, ಮೀರಾ ಎಂಬ ಶಿಕ್ಷಕಿ ಆರವ್ ಆಗಿ ಲಿಂಗ ಪರಿವರ್ತನೆಗೆ ಒಳಗಾಗಿ ಕಲ್ಪನಾ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಮದುವೆಯ ವೇಳೆ ಎಲ್ಲ ಸಾಂಪ್ರದಾಯಿಕ ವಿವಾಹ ಆಚರಣೆಗಳನ್ನು ನಡೆಸಿತ್ತು. ಹಲವು ತಿಂಗಳ ಶ್ರಮದ ಬಳಿಕ ಮೀರಾ ಅಂತಿಮವಾಗಿ 2022ರ ನವೆಂಬರ್‌ನಲ್ಲಿ ಆರವ್ ಆಗಿ ಬದಲಾಗಿದ್ದರು.

ಈ ಅಸಾಂಪ್ರದಾಯಿಕ ವಿವಾಹಗಳು ಭಾರತದಲ್ಲಿ ತೃತೀಯ ಲಿಂಗಿಗಳ ವಿವಾಹದ ಹಕ್ಕುಗಳನ್ನು ಸಮಾಜ ನಿಧಾನವಾಗಿ ಒಪ್ಪಿಕೊಳ್ಳುತ್ತಿದೆ ಎನ್ನುವುದಕ್ಕೆ ಉದಾಹರಣೆ. ಇದು ಎಲ್ಲರಿಗೂ ಸಮಾನ ಹಕ್ಕುಗಳು ಎನ್ನುವ ಗುರಿಯನ್ನು ಸಾಧಿಸಲಿರುವ ದಿಟ್ಟ ಹೆಜ್ಜೆ ಎಂದೇ ಪರಿಗಣಿಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist