ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಬೆಂಗಳೂರಿನ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಎಂ.ವಿ. ಗಾರ್ಡನ್ ನಿವಾಸಿ ಶಿವಕುಮಾರ್ ಅವರ ಪತ್ನಿ ಲಕ್ಷ್ಮೀ (32) ಮೃತ ಪಟ್ಟವರು.
ಶಿವಕುಮಾರ್ ಅವರು ಪತ್ನಿ, ಮಕ್ಕಳೊಂದಿಗೆ ಸಕಲೇಶಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಲಕ್ಷ್ಮೀ ಹಾಗೂ ಮಕ್ಕಳು ಸಂಬಂಧಿಕರ ಜತೆ ಧರ್ಮಸ್ಥಳಕ್ಕೆ ತೆರಳಿ ರವಿವಾರ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ರಾತ್ರಿ ಲಕ್ಷ್ಮೀ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.
ಕೂಡಲೇ ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರದೊಯ್ದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರರನ್ನು ಎಚ್ಚರಿಸಲು ಹೋಗಿ ಕಾರು ಪಲ್ಟಿ: ಚಾಲಕ ಅಪಾಯದಿಂದ ಪಾರು
ಸುಬ್ರಹ್ಮಣ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯಿಂದ ಕೆಳಕ್ಕೆ ಬಿದ್ದ ಘಟನೆ ನ.28ರಂದು ಬೆಳಿಗ್ಗೆ ಗುತ್ತಿಗಾರು – ಸುಬ್ರಹ್ಮಣ್ಯ ರಸ್ತೆಯ ಬದಿ ಮರಕತ ತಿರುವು ಸಮೀಪ ನಡೆದಿದೆ.
ಬೈಕಲ್ಲಿ ಪ್ರಯಾಣಿಸುತ್ತಿದ್ದವರ ವೇಲ್ ಚಕ್ರಕ್ಕೆ ಸಿಲುಕುವ ಸಾಧ್ಯತೆಯನ್ನು ಕಂಡ ಕಾರು ಚಾಲಕ ಬೈಕ್ ಸವಾರನನ್ನು ಎಚ್ಚರಿಸಿ ಎದುರು ತಿರುಗಿದಾಗ ಕಾರು ನಿಯಂತ್ರಣ ತಪ್ಪಿದೆ.
ಕಾರು ರಸ್ತೆಯ ಬಲಬದಿಗೆ ಹೋಗಿ ನಿಯಂತ್ರಣ ಕಳೆದುಕೊಂಡು ಕೆಳಗುರುಳಿದದೆ . ಕಾರು ಚಲಾಯಿಸುತ್ತಿದ್ದ ಯುವಕ ಗಾಯಗಳಿಲ್ಲದೆ ಪಾರಾಗಿದ್ದು ಕಾರಿಗೆ ಜಖಂ ಆಗಿದೆ.