ಗುರುವಾರ, ಅಕ್ಟೋಬರ್ 10, 2024
Ratan Tata: ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ ಇನ್ನಿಲ್ಲ-ಇಂದು ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ; ಮತ ಎಣಿಕೆ ಶುರು-ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ-ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.-30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?-ಮುಡಾ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ!-Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು-Udayanidhi Stalin: ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ!-CM Siddaramaiah: ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಅಲ್ಲವೇ?-MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ

ಭಿವಾನಿ: ಹರ್ಯಾಣದ (Haryana State) ಭಿವಾನಿಯ (Bhiwani) ಡಾಲರ್ ಕಾಲೋನಿಯಲ್ಲಿ ವಾಸವಾಗಿರುವ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಗುಂಡಿನ ಮಳೆಗರೆಯುತ್ತಿದ್ದರೆ, ಅವರನ್ನು ಮಹಿಳೆಯೊಬ್ಬಳು (Bhiwani woman) ಉದ್ದನೆಯ ಪೊರಕೆ (broom) ಹಿಡಿದುಕೊಂಡಿದ್ದು ಓಡಿಸಿದ್ದಾರೆ. ಈ ಕುರಿತಾದ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗಿದೆ(Viral Video). ಈ ಮಹಿಳೆಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಂಗಿನ ಪೊರಕೆಯಿಂದೇ ಪಿಸ್ತೂಲ್‌ ಹಿಡಿದಿದ್ದ ಗೂಂಡಾಗಳನ್ನು (Shooters) ಬೆನ್ನಟ್ಟಿ ಓಡಿಸಿರುವುದು ಸಾಮಾನ್ಯ ಮಾತಲ್ಲ.

ಗುಂಡೇಟು ತಿಂದ ವ್ಯಕ್ತಿಯನ್ನು ಹರಿಕಿಶನ್ ಎಂದು ಗುರುತಿಸಲಾಗಿದೆ. ರವಿ ಬಾಕ್ಸರ್ ಹತ್ಯೆ ಪ್ರಕರಣದ ಆರೋಪಿ ಹರಿಕಿಶನ್ ಎಂಬಾತನಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆ ಸಂಪರ್ಕವಿದೆ ಎಂದು ಶಂಕಿಸಲಾಗಿದೆ. ಹರಿಕಿಶನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಭಿವಾನಿ ಪೊಲೀಸರು ಹರಿಕಿಶನ್ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ ಶಂಕಿತ ಐವರನ್ನು ಬಂಧಿಸಿದ್ದರು.

ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶೂಟರ್‌ಗಳು ಒಂಬತ್ತು ಸುತ್ತು ಗುಂಡು ಹಾರಿಸಿದ್ದಾರೆ. ಹರಿಕಿಶನ್‌ಗೆ ನಾಲ್ಕು ಬುಲೆಟ್‌ ತಗುಲಿವೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದು, ಶೂಟರ್‌ಗಳು ಮತ್ತು ಅವರೊಂದಿಗೆ ಬಂದ ಇಬ್ಬರು ಸವಾರರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಹರಿಕಿಶನ್ ತನ್ನ ಮನೆಗೆ ಹೋಗುವ ಗೇಟಿನ ಪಕ್ಕದಲ್ಲಿ ನಿಂತಿದ್ದಾನೆ. ಅಷ್ಟರಲ್ಲಾಗಲೇ ಎರಡು ಬೈಕ್‌ಗಳು ಅವನ ಬಳಿ ಬಂದು ನಿಲ್ಲುತ್ತವೆ. ಬೈಕ್‌ನ ಹಿಂಬದಿ ಸವಾರರು ಇಳಿದು ಹರಿಕಿಶನ್ ಕಡೆಗೆ ಪಿಸ್ತೂಲ್‌ ಹಿಡಿಯುತ್ತಾರೆ. ಆಗ ಹರಿಕಿಶನ್ ಗೇಟಿನತ್ತಿ ಓಡಲಾರಂಭಿಸುತ್ತಾನೆ. ಅಷ್ಟರಲ್ಲಾಗಲೇ ಅವರಿಬ್ಬರು ಫೈರಿಂಗ್ ಶುರು ಮಾಡುತ್ತಾರೆ ಮತ್ತು ಹರಿಕಿಶಿನ್ ಕುಸಿದು ಬೀಳುತ್ತಾನೆ. ಹಾಗಿದ್ದೂ, ಆತ ಗೇಟ್‌ ಹಿಂದೆ ಹೋಗುವಲ್ಲಿ ಯಸ್ವಿಯಾಗುತ್ತಾನೆ. ಬಳಿಕ ಗೇಟ್ ಮುಚ್ಚುವ ದೃಶ್ಯಗಳನ್ನು ವೈರಲ್ ವಿಡಿಯೋದಲ್ಲ ಕಾಣಬಹುದು.

ಶೂಟರ್ಸ್ ಗೇಟ್‌ ಎದುರಿಗೆ ಬಂದು ಫೈರಿಂಗ್ ಮಾಡುತ್ತಾರೆ. ಅಲ್ಲದೇ ಗೇಟ್ ತೆಗೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ಗುಂಡಿನ ಸದ್ದು ಕೇಳಿ ಮಹಿಳೆಯೊಬ್ಬಳು ತನ್ನ ಕೈಯಲ್ಲಿ ಉದ್ದನೆಯ ತೆಂಗಿನ ಪೊರಕೆಯನ್ನು ಹಿಡಿದುಕೊಂಡು ಶೂಟರ್ಸ್‌ಗಳತ್ತ ನುಗ್ಗುತ್ತಾಳೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಗೊಂದಲಕ್ಕೀಡಾಗುವ ಶೂಟರ್ಸ್, ಹಿಂದಕ್ಕೆ ಸರಿಯುತ್ತಾರೆ. ಹಾಗೆಯೇ ಅವರತ್ತ ಹೋಗುತ್ತಿದ್ದಂತೆ ಶೂಟರ್ಸ್ ಪೈಕಿ ಒಬ್ಬ ಆಕೆಯತ್ತಲೂ ಗುಂಡು ಹಾರಿಸುತ್ತಾನೆ. ಆದರೆ, ಗುಂಡು ಆಕೆಗೆ ತಾಗುವುದಿಲ್ಲ. ಅಂತಿಮವಾಗಿ ಇಬ್ಬರು ಶೂಟರ್ಸ್ ಸೇರಿ ನಾಲ್ವರು ಅಲ್ಲಿಂದ ಕಾಳು ಕೀಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಶೂಟರ್ಸ್‌ನ್ನು ಧೈರ್ಯದಿಂದ ಎದುರಿಸಿದ ಮಹಿಳೆಯು ಹರಿಕಿಶನ್ ಅವರ ಮನೆಯ ಸದಸ್ಯೆಯೋ ಅಥವಾ ನೆರೆ ಹೊರೆಯವರು ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ತನ್ನ ಪೊರಕೆಯಿಂದಲೇ ಹರಿಕಿಶನ್ ಅವರನ್ನು ರಕ್ಷಿಸಿರುವ ಈ ಮಹಿಳೆಯ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ