ಜಾರ್ಖಂಡ್ ಭೇಟಿ ವೇಳೆ ಮೋದಿ ಕಾರಿನ ಎದುರು ಜಿಗಿದ ಮಹಿಳೆ ; ಮೂವರು ಪೊಲೀಸರು ಅಮಾನತು!
ರಾಂಚಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಯಾವುದೇ ಮೂಲೆಗೆ ಹೋದರೂ ಬಿಗಿಭದ್ರತೆ ಒದಗಿಸಲಾಗುತ್ತದೆ. ಆದರೆ, ನರೇಂದ್ರ ಮೋದಿ ಅವರು ಬುಧವಾರ (ನವೆಂಬರ್ 16) ಜಾರ್ಖಂಡ್‌ನ ರಾಂಚಿಯಲ್ಲಿ ಮೋದಿ ಅವರು ತೆರಳುತ್ತಿದ್ದ ವಾಹನದ ಎದುರು ಮಹಿಳೆಯೊಬ್ಬರು ಅಡ್ಡ ಬಂದು ನಿಂತಿದ್ದಾರೆ. ಆ ಮೂಲಕ ಭದ್ರತಾ (Security Lapse) ಲೋಪವುಂಟಾಗಿದ್ದು, ಮೂವರು ಪೊಲೀಸರು ಅಮಾನತುಗೊಳಿಸಲಾಗಿದೆ.
ನರೇಂದ್ರ ಮೋದಿ ಅವರು ಭಗವಾನ್ ಬಿಸ್ರಾ ಮುಂಡಾ ಮೆಮೋರಿಯಲ್ ಪಾರ್ಕ್‌ಗೆ ತೆರಳುತ್ತಿದ್ದರು. ಇದೇ ವೇಳೆ ಮಹಿಳೆಯೊಬ್ಬರು ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಎದುರು ಬಂದು ನಿಂತಿದ್ದರು. ಜನಜಂಗುಳಿಯಲ್ಲಿಯೇ ಜಿಗಿದು, ಮಹಿಳೆಯು ವಾಹನದ ಎದುರು ಬಂದಿದ್ದರು. ಇದಾದ ಬಳಿಕ ಭದ್ರತಾ ಸಿಬ್ಬಂದಿಯು ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದಿದ್ದರು.
Big berking
— Mαɳιʂԋ Kυɱαɾ αԃʋσƈαƚҽ 🇮🇳🇮🇳 (@Manishkumarttp) November 15, 2023
There was a big lapse in the security of PM Modi in #Ranchi on Wednesday. Suddenly a woman jumped in front of PM Modi's car. The driver saved the accident by applying brakes.#रांची में बुधवार को पीएम मोदी की सुरक्षा में बड़ी चूक हुई। पीएम मोदी की गाड़ी के सामने… pic.twitter.com/EcTM6r1wEj
“ನರೇಂದ್ರ ಮೋದಿ ಅವರ ಭೇಟಿ ವೇಳೆ ಭದ್ರತಾ ಲೋಪ ಎಸಗಿದ ಒಬ್ಬ ಎಎಸ್‌ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಎಎಸ್‌ಐ ಅಬು ಜಾಫರ್, ಪೇದೆಗಳಾದ ಚೋಟೆಲಾಲ್ ಟುಡು ಹಾಗೂ ರಂಜನ್‌ಕುಮಾರ್ ಅವರು ಸಸ್ಪೆಂಡ್ ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ, ಆದಿವಾಸಿಗಳ ನಾಯಕ ಬಿಸ್ರಾ ಮುಂಡಾ ಜಯಂತಿ ಹಿನ್ನೆಲೆಯಲ್ಲಿ ಮೋದಿ ಅವರು ಎರಡು ದಿನ ಜಾರ್ಖಂಡ್ ಪ್ರವಾಸ ಕೈಗೊಂಡಿದ್ದರು. ಮೋದಿ ಅವರು ಇದೇ ವೇಳೆ ರೋಡ್ ಶೋ ಕೂಡ ಕೈಗೊಂಡರು.
ಮಹಿಳೆ ಜಂಪ್ ಮಾಡಿದ್ದೇಕೆ?
ಪತಿಯ ವಿರುದ್ಧವೇ ದೂರು ನೀಡಲು ಮಹಿಳೆಯು ನರೇಂದ್ರ ಮೋದಿ ಅವರ ವಾಹನಕ್ಕೆ ಅಡ್ಡಿಯಾಗಿದ್ದಾರೆ ಎಂದು ತಿಳಿದುಬಂದಿದೆ. “ವಾಹನಕ್ಕೆ ಅಡ್ಡ ಬಂದ ಮಹಿಳೆಯನ್ನು ಕೂಡಲೇ ವಶಪಡಿಸಿಕೊಳ್ಳಲಾಯಿತು. ಮಹಿಳೆಯನ್ನು ಸಂಗೀತಾ ಝಾ ಎಂದು ಗುರುತಿಸಲಾಗಿದೆ. ಪತಿ ಕಿರುಕುಳ ನೀಡುತ್ತಿದ್ದಾನೆ. ಆತನಿಂದ ನನಗೆ ಪರಿಹಾರ ಬೇಕು. ಹಾಗೆಯೇ, ಆತನ ಸಂಬಂಧಿಕರು ಕಿರುಕುಳ ನೀಡಿದ್ದಾರೆ. ಪತಿ ಸೇರಿ ಎಲ್ಲರ ವಿರುದ್ಧ ಕೇಸ್ ದಾಖಲಿಸಲಬೇಕು. ಹಾಗಾಗಿ, ಮೋದಿ ಅವರಿಗೆ ದೂರು ನೀಡಲು ವಾಹನಕ್ಕೆ ಅಡ್ಡ ಬಂದೆ” ಎಂಬುದಾಗಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೋದಿಯನ್ನು ಸಲ್ಮಾನ್ ಖಾನ್‌ಗೆ ಹೋಲಿಸಿದ ಪ್ರಿಯಾಂಕಾ ವಾದ್ರಾ!
ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮೇಲಾಟ, ಟೀಕೆ, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, “ನರೇಂದ್ರ ಮೋದಿ ಅವರು ತೇರೆ ನಾಮ್ (Tere Naam) ಸಿನಿಮಾದ ಸಲ್ಮಾನ್ ಖಾನ್ ಇದ್ದಂತೆ” ಎಂಬುದಾಗಿ ಟೀಕಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಒಂದಷ್ಟು ಕಾಯಂ ನೋವುಗಳನ್ನು ಹೊಂದಿದ್ದಾರೆ. ತಮ್ಮ ಮನಸ್ಸಿನ ನೋವನ್ನು ಅಳುವಿನ ಮೂಲಕ ಜನರ ಎದುರು ಇಡುತ್ತಾರೆ. ಕೆಲ ತಿಂಗಳ ಹಿಂದೆ ಕರ್ನಾಟಕಕ್ಕೆ ಹೋಗಿದ್ದ ನರೇಂದ್ರ ಮೋದಿ ಅವರು, ತಾವು ತಿಂದ ಬೈಗುಳಗಳ ಪಟ್ಟಿಯನ್ನು ಜನರ ಮುಂದೆ ಇಟ್ಟಿದ್ದರು. ಮೋದಿ ಅವರು ತೇರೆ ನಾಮ್ ಸಿನಿಮಾದ ಸಲ್ಮಾನ್ ಖಾನ್ ಇದ್ದಂತೆ. ಅವರು ಯಾವಾಗಲೂ ಅಳುತ್ತಿರುತ್ತಾರೆ. ಹಾಗಾಗಿ ನರೇಂದ್ರ ಮೋದಿ ಅವರು ಕೂಡ ತೇರೆ ನಾಮ್ ಸಿನಿಮಾ ರೀತಿ ಮೇರೆ ನಾಮ್ (Mere Naam) ಎಂಬ ಸಿನಿಮಾ ಮಾಡಬೇಕು” ಎಂದು ಟೀಕಿಸಿದ್ದಾರೆ. ದಾಟಿಯಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಿಯಾಂಕಾ ವಾದ್ರಾ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
#WATCH | Datia, MP: Congress General Secretary Priyanka Gandhi Vadra addresses public rally; says, "He's first such PM of the country who remains upset in his own pain permanently. He went to Karnataka with a long list mentioning abuses he faced...It seems like he keeps crying.… pic.twitter.com/HF7NlGj2aB
— ANI (@ANI) November 15, 2023
“ನರೇಂದ್ರ ಮೋದಿ ಅವರು ದ್ರೋಹಿಗಳು ಹಾಗೂ ವಂಚಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ಸರ್ಕಾರವು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅದಾನಿ ಅವರ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇಶದ ಆಸ್ತಿಯನ್ನು ಅವರಿಗೆ ನೀಡಿದ್ದಾರೆ” ಎಂದು ಆರೋಪಿಸಿದರು. ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.
ಮೋದಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ನೋಟಿಸ್
ನರೇಂದ್ರ ಮೋದಿ ವಿರುದ್ಧ ಸತ್ಯಕ್ಕೆ ದೂರವಾದ ಮತ್ತು ದೃಢೀಕೃತವಲ್ಲದ ಹೇಳಿಕೆಯನ್ನು ನೀಡಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸ್ (Show cause Notice) ಜಾರಿ ಮಾಡಿದೆ. ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಿದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದರು. ಈ ಸಂಬಂಧ ಭಾರತೀಯ ಜನತಾ ಪಾರ್ಟಿ ನಾಯಕರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅನಿಲ್ ಬಲುನಿ, ಓಂ ಪಾಠಕ್ ಅವರು ಚುನಾಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಯೋಗವು ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿದೆ.