ಬುಧವಾರ, ಮೇ 8, 2024
ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!-ನಾಳೆ SSLC ಪಲಿತಾಂಶ ಪ್ರಕಟ ; ಇಲ್ಲಿದೆ ಲಿಂಕ್-ಲಂಚ ಸ್ವೀಕಾರ; ರೆಂಡ್ ಆ್ಯಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO-ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಇನ್ನಿಲ್ಲ-ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ; ಇಲಾಖೆಯಿಂದ ಯಾವುದೇ ವೇತನ ಬಾಕಿ ಇಲ್ಲ - ದಿನೇಶ್‌ ಗುಂಡೂರಾವ್‌-ಡಿಕೆಶಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ : ಎಚ್‌ಡಿ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನೇತ್ರಾವತಿ ನದಿಗೆ ಪುಟ್ಟ ಮಗುವಿನೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ.!

Twitter
Facebook
LinkedIn
WhatsApp
ನೇತ್ರಾವತಿ ನದಿಗೆ ಪುಟ್ಟ ಮಗುವಿನೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ.!

ಮಂಗಳೂರು, ಮಾರ್ಚ್ 30: ನಗರ ಹೊರವಲಯದ ಅಡ್ಯಾರ್ ಪದವು ಸಮೀಪದ 30 ವರ್ಷ ಪ್ರಾಯದ ಮಹಿಳೆಯೊಬ್ಬರು ಒಂದು ವರ್ಷ ಪ್ರಾಯದ ತನ್ನ ಹೆಣ್ಣು ಮಗುವನ್ನು ಸೊಂಟಕ್ಕೆ ಕಟ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ಹರೇಕಳ- ಪಾವೂರು ಕಡವಿನ ಬಳಿ ನಡೆದಿರುವುದಾಗಿ ವರದಿಯಾಗಿದೆ‌‌.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಚೈತ್ರಾ ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಮಧ್ಯಾಹ್ನದ ಬಳಿಕ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ‌. ಶುಕ್ರವಾರ ಸಂಜೆ ಈಕೆ ರಿಕ್ಷಾವೊಂದರಲ್ಲಿ ಅಡ್ಯಾರ್-ಹರೇಕಳ ಸೇತುವೆ ದಾಟಿ ಹರೇಕಳ-ಪಾವೂರು ಕಡವಿನ ಬಳಿ ಜಂಕ್ಷನ್‌ನಲ್ಲಿ ಇಳಿದಿದ್ದರು ಎನ್ನಲಾಗಿದೆ. ನಂತರ‌ ಈಕೆ ನದಿ ತೀರದ ಕಾಲುದಾರಿಯಾಗಿ ಪಾವೂರು ಗಾಡಿಗದ್ದೆ ಕಡೆ ನಡೆದುಕೊಂಡು ಹೋಗಿರುವುದನ್ನು ಸ್ಥಳೀಯರು ಕಂಡಿದ್ದರು ಎಂದು ತಿಳಿದು ಬಂದಿದೆ.

ಚೈತ್ರಾ ತನ್ನ ಮಗುವಿನೊಂದಿಗೆ ಕಾಣೆಯಾದ ಸುದ್ದಿ ಪರಿಸರದಲ್ಲಿ ಹಬ್ಬಿದ್ದು ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.‌ ಈ ಮಧ್ಯೆ ಚೈತ್ರಾ ಅವರ ಮೃತದೇಹ ಹರೇಕಳ ಪಾವೂರು ನದಿ ತೀರದಲ್ಲಿ ಪತ್ತೆಯಾಗಿದೆ. ಚೈತ್ರಾ ಅವರ ಸೊಂಟಕ್ಕೆ ಮಗುವನ್ನು ಕಟ್ಟಿ ಹಾಕಿರುವುದು ಕಂಡು ಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.‌ ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿಡಲಾಗಿದ್ದು, ಪ್ರಕರಣ ದಾಖಲಿಸಿ ಕೊಂಡಿರುವ ಕೊಣಾಜೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

ಬಂಟ್ವಾಳ: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

 ನ್ಯಾಯಾಲಯಕ್ಕೆ ಹಾಜರಾಗದೆ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಮಂಚಿ ಕುಕ್ಕಾಜೆಯ ಅಬುಸಾಲಿ (41) ಬಂಧಿತ ಆರೋಪಿ. ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಮತ್ತು ಎಚ್ ಸಿ ರಾಜೇಶ್ ಎಸ್, ಗಣೇಶ್ ಎನ್ ಅವರುಗಳ ತಂಡ, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕಾರು ಪಲ್ಟಿ, ಓರ್ವ ಮೃತ್ಯು ಇಬ್ಬರು ಗಂಭೀರ..!

ಬೆಳ್ತಂಗಡಿ: ಚಾಲಕನ  ನಿಯಂತ್ರಣ ತಪ್ಪಿದ ಕಾರೊಂದು ತಡೆಗೋಡೆಗೆ ಢಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಂಭಿರಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಗುರುವಾಯನಕೆರೆಯ ಶಕ್ತಿ ನಗರದ ಬಳಿ  ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಬೆಳ್ತಂಗಡಿಯಿಂದ ಮೂಡುಬಿದಿರೆಗೆ ಹೋಗುತ್ತಿದ್ದ ಕಾರು ಶಕ್ತಿನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಾಂಪೌಂಡ್ ಗೆ ಢಿಕ್ಕಿಯಾಗಿದೆ. ಪರಿಣಾಮ ಚಾಲಕ ಲಾಯಿಲ ಮೋರ್ನಿಂಗ್ ಸ್ಟಾರ್ ನಿವಾಸಿ ಪ್ರೈಸ್ ಮ್ಯಾಥ್ಯೂ (32)  ಸ್ಥಳದಲ್ಲೇ ಮೃತಪಟ್ಟರೆ , ಕಾರಿನಲ್ಲಿದ್ದ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಬೆಳ್ತಂಗಡಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ