ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಕ್ಕೆ ತಾಯಿಯನ್ನು ಹತ್ಯೆಗೈದ ಕೇಸ್‍ಗೆ ಟ್ವಿಸ್ಟ್; ಕೊಲೆ ಮಾಡಿದ್ದು ಮಗನಲ್ಲ, ಗಂಡನಿಂದಲೇ ಕೃತ್ಯ..!

Twitter
Facebook
LinkedIn
WhatsApp
ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಕ್ಕೆ ತಾಯಿಯನ್ನು ಹತ್ಯೆಗೈದ ಕೇಸ್‍ಗೆ ಟ್ವಿಸ್ಟ್; ಕೊಲೆ ಮಾಡಿದ್ದು ಮಗನಲ್ಲ, ಗಂಡನಿಂದಲೇ ಕೃತ್ಯ..!

ಇಲ್ಲಿನ ಕೆಆರ್‌ಪುರ  ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಯ್ಯ ಲೇಔಟ್‍ನಲ್ಲಿ ಇತ್ತೀಚೆಗೆ ಮಗನೇ ತಾಯಿಯನ್ನು  ಹತ್ಯೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನು ಆಕೆಯ ಪತಿ ಹತ್ಯೆಗೈದಿದ್ದು, ತಂದೆಯನ್ನು ಪೊಲೀಸರಿಂದ ರಕ್ಷಿಸಲು ಅಪ್ರಾಪ್ತ ಮಗ ತಾಯಿಯನ್ನು ಕೊಲೆಗೈದ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ

ಪೊಲೀಸರ ವಿಚಾರಣೆ ವೇಳೆ ಮಹಿಳೆ ನೇತ್ರಾಳ ಹತ್ಯೆ ವೇಳೆ ಆಕೆಯ ಪತಿ ಚಂದ್ರಪ್ಪ ಕೂಡ ಅದೇ ಮನೆಯಲ್ಲಿದ್ದ ಎಂಬುದು ತಿಳಿದು ಬಂದಿದೆ. ಬಳಿಕ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ಚಂದ್ರಪ್ಪನ ಮಾತಿನಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದು ಮಗನಲ್ಲ ನಾನೇ ಎಂದು ಚಂದ್ರಪ್ಪ ಒಪ್ಪಿಕೊಂಡಿದ್ದಾನೆ. ಚಂದ್ರಪ್ಪನಿಗೆ ಪತ್ನಿ ನೇತ್ರಾಳ ಶೀಲದ ಮೇಲೆ ಅನುಮಾನ ಇತ್ತು, ಇದೇ ವಿಚಾರಕ್ಕೆ ಸಾಕಷ್ಟು ಬಾರಿ ಜಗಳ ಸಹ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ

ಮಹಿಳೆ ಹತ್ಯೆಯಾದ ದಿನ, ಮುಳುಬಾಗಿಲಿನಲ್ಲಿ ಓದುತ್ತಿದ್ದ ಆಕೆಯ ಹದಿನೇಳು ವರ್ಷದ ಮಗ ಮನೆಗೆ ಬಂದಿದ್ದ. ಆ ದಿನ ತಿಂಡಿ ಮಾಡಿಕೊಡುವ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಮೊದಲಿಗೆ ಅಪ್ತಾಪ್ತ ಮಗನೇ ದೊಣ್ಣೆಯಿಂದ ತಾಯಿಗೆ ಹಲ್ಲೆ ಮಾಡಿದ್ದಾನೆ. ಈ ವೇಳೆ ದೊಣ್ಣೆ ಕಿತ್ತುಕೊಂಡ ಚಂದ್ರಪ್ಪ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಈ ವೇಳೆ ಪ್ಲ್ಯಾನ್ ಮಾಡಿದ ಚಂದ್ರಪ್ಪ, ನಿನಗೆ ಹದಿನೇಳು ವರ್ಷ, ಕೊಲೆ ಮಾಡಿದ್ರೂ ಜೈಲು ಶಿಕ್ಷೆ ಆಗಲ್ಲ. ನಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುವಂತೆ ಹೇಳಿದ್ದ.

 

ತಂದೆಯ ಮಾತನ್ನು ಕೇಳಿ ಮಗ ಪೊಲೀಸರಿಗೆ ಕರೆ ಮಾಡಿ ತಾಯಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದ. ಪೊಲೀಸರು ಯಾಕಪ್ಪ ಕೊಲೆ ಮಾಡಿದೆ ಎಂದು ವಿಚಾರಿಸಿದಾಗ, ಕಾಲೇಜ್‍ಗೆ ಹೋಗಲು ತಿಂಡಿ ಮಾಡಿ ಕೊಡು ಎಂದು ತಾಯಿಯ ಬಳಿ ಹೇಳಿದ್ದೆ. ತಾಯಿ ತಿಂಡಿ ಮಾಡಿಕೊಡದೆ, ಕೆಟ್ಟದಾಗಿ ನನ್ನನ್ನೇ ಬೈದಿದ್ದಕ್ಕಾಗಿ ಕೋಪದಲ್ಲಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿಬಿಟ್ಟೆ ಎಂದಿದ್ದ. ಇದೀಗ ಪೊಲಿಸರ ತನಿಖೆ ವೇಳೆ ಸತ್ಯ ಬಯಲಾಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist