ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ ಚಪ್ಪಲಿಯಿಂದ ಥಳಿಸಿದ ಪೋಷಕರು!
ವಿದ್ಯಾರ್ಥಿಗೆ ಹೊಡೆದಿದ್ದಕ್ಕೆ ಪೋಷಕರು ಶಿಕ್ಷಕರನ್ನು ಚಪ್ಪಲಿಯಿಂದ ಥಳಿಸಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿಯ ಪೋಷಕರು ಮತ್ತು ಸಂಬಂಧಿಕರು ಶಿಕ್ಷಕರನ್ನು ಬರ್ಬರವಾಗಿ ಥಳಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ. ವಿದ್ಯಾರ್ಥಿಗೆ ಹೊಡೆದ ಆರೋಪದ ಮೇಲೆ ಶಿಕ್ಷಕನ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಘಟನೆಯನ್ನು ಬಹಿರಂಗಪಡಿಸಿದರೆ ಹೊರಹಾಕುವುದಾಗಿ ಬೆದರಿಕೆ ಹಾಕಲಾಗಿದೆ.
ಗುರುವರಾಜನ ಕಂಡಿಗೈ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಹರಿಹರನ್ ಸೋಮವಾರ ರಾತ್ರಿ 8 ಗಂಟೆಗೆ ಕೈಕಾಲು ಊದಿಕೊಂಡ ಸ್ಥಿತಿಯಲ್ಲಿ ಮನೆಗೆ ಮರಳಿದ್ದ. ವಿದ್ಯಾರ್ಥಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಬದಲು ಅಥವಾ ಮನೆಗೆ ಹೋಗಲು ಬಿಡದೆ ಸಂಜೆಯವರೆಗೂ ಶಾಲೆಯ ಆವರಣದಲ್ಲಿ ಇರಿಸಲಾಗಿತ್ತು ಎಂದು ಅವರು ಆರೋಪಿಸಿದರು.
ಊತಕ್ಕೆ ಐಸ್ ಪ್ಯಾಕ್ ನೀಡಿ ವಿಚಾರಿಸಿದಾಗ ವಿದ್ಯಾರ್ಥಿ ನಡೆದ ವಿಚಾರವನ್ನು ವಿವರಿಸಿದ್ದಾನೆ, ಒಂದೊಮ್ಮೆ ಈ ವಿಚಾರ ಕುರಿತು ಯಾರಿಗಾದರೂ ಮಾಹಿತಿ ನೀಡಿದ್ದಲ್ಲಿ ಶಾಲೆಯಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಶಿಕ್ಷಕ ಮೋಹನ್ ಬಾಬು ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯ ಪ್ರಾಂಶುಪಾಲರು ಮೋಹನ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ವಿದ್ಯಾರ್ಥಿಯ ಸಂಬಂಧಿಕರು ಅವರನ್ನು ಸುತ್ತುವರೆದು, ಅಮಾನುಷವಾಗಿ ಥಳಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೋಹನ್ ಬಾಬು ಅವರನ್ನು ರಕ್ಷಿಸಿ ಜನರನ್ನು ಚದುರಿಸಿದರು. ಈ ಕುರಿತು ತನಿಖೆ ನಡೆಯುತ್ತಿದೆ.
ಕಾಂಗ್ರೆಸ್ಸಿಗರು ವಸೂಲಿ ದಂಧೆಯಲ್ಲಿ 100% ಮುಳುಗಿದ್ದಾರೆ: ವಿಜಯೇಂದ್ರ ಕಿಡಿ
ಬೆಂಗಳೂರು: ಕಾಂಗ್ರೆಸ್ಸಿಗರು (Congress) ಈಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಶಿಕಾರಿಪುರದ ಶಾಸಕ, ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ, ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 1೦೦% ಮುಳುಗಿ ಹೋಗಿದ್ದಾರೆ.
— Vijayendra Yeddyurappa (@BYVijayendra) August 9, 2023
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕರ್ನಾಟಕ (BJP Karnataka) ಟ್ವೀಟ್ ಮಾಡಿ, ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ. ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ. ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. ಇದು #ATMSarkara ದ ನಿತ್ಯಗೀತೆ ಎಂದು ಬರೆದು ಟೀಕಿಸಿದೆ.
#ATMSarkara ದ ನಿತ್ಯಗೀತೆ.
— BJP Karnataka (@BJP4Karnataka) August 9, 2023
ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ.
ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ.
ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. pic.twitter.com/3A2nFOhbko
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಆರೋಪ ಮಾಡಿದ್ದರು. ಈಗ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ 100% ಕಮಿಷನ್ ಆರೋಪ ಮಾಡಲು ಆರಂಭಿಸಿದ್ದಾರೆ.