ಮಂಗಳೂರಿನ ರಸ್ತೆಯಲ್ಲಿನ ಗುಂಡಿಗೆ ಬೈಕ್ ಸಮೇತ ಬಿದ್ದ ಸವಾರ ; ಸಣ್ಣಪುಟ್ಟ ಗಾಯಗಳೊಂದಿಗೆ ಪಾರು.!
ಮಂಗಳೂರು ಡಿಸೆಂಬರ್ : ಮಂಗಳೂರಿನ ಪ್ರಮುಖ ರಸ್ತೆಯಾದ ಕೆಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಸಮೀಪ ಭೂಗತ ಕೆಬಲ್ ಆಳಡಿಸಲು ತೋಡಿದ್ದ ಗುಂಡಿಗೆ ಬೈಕ್ ಸವಾರನೊಬ್ಬ ಬೈಕ್ ಸಮೇತ ಬಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.
ಸ್ಮಾರ್ಟ್ ಸಿಟಿಯಾದ ಮಂಗಳೂರಿನಲ್ಲಿ ರೋಡ್ ಗಳು ಸ್ಮಾರ್ಟ್ ಆದರೂ ಇನ್ನೂ ಕಾಂಕ್ರಿಟ್ ರಸ್ತೆ ಅಗೆದು ಕೇಬಲ್ ಆಳವಡಿಸುವ ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಅವರ ಭೂಗತ ಕೇಬಲ್ ಆಳವಡಿಸುವ ಕಾರ್ಯ ನಗರಾದ್ಯಂತ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದು ಯಾವುದೇ ಸುರಕ್ಷತೆ ಇಲ್ಲದೆ ಹಾಗೆ ಬಿಟ್ಟಿದ್ದಾರೆ.
ಅಂತಹುದೇ ಒಂದು ಗುಂಡಿ ಮಂಗಳೂರಿನ ಸಿಟಿ ಸೆಂಟರ್ ಬಳಿ ಇದ್ದು, ಈ ಗುಂಡಿಗೆ ಬೈಕ್ ಸವಾರನೊಬ್ಬ ಬೈಕ್ ಸಮೇತ ಬಿದ್ದಿದ್ದಾನೆ. ಅದೃಷ್ಠವಶಾತ್ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ನಗರದ ಜನನಿಬಿಡ ರಸ್ತೆಯಲ್ಲೇ ಈ ರೀತಿ ಅವೈಜ್ಞಾನಿಕವಾಗಿ ಗುಂಡಿ ತೋಡಿದ್ದು, ರಾತ್ರಿ ಸರಿಯಾಗಿ ಕಾಣೆದೆ ವಾಹನ ಸವಾರರು ಹೊಂಡಕ್ಕೆ ಬೀಳುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಅದರ ಕಡೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಉಡುಪಿ ಮಲ್ಪೆಯ ಮೀನಿಗಾರರ ಬಲೆಗೆ ಬಿತ್ತು ದೈತ್ಯ ಮೀನು..!
ಉಡುಪಿ : ಉಡುಪಿ ಮಲ್ಪೆಯ ಮೀನಿಗಾರರ ಬಲೆಗೆ ಬೃಹತ್ ಗಾತ್ರದ ಮೀನೊಂದು ಬಿದ್ದಿದ್ದು ಬರೋಬ್ಬರಿ 400 ಕೆ ಜಿ ತೂಕ ಹೊಂದಿದೆ. ಮಲ್ಪೆಯ ಬಲರಾಂ ಪರ್ಸೀನ್ ಬೋಟಿನವರಿಗೆ ಈ ಬೃಹತ್ ಗಾತ್ರದ ಮೀನು ದೊರೆತಿದೆ.
ಈ ಮೀನಿನ ಸಾಮಾನ್ಯ ಹೆಸರು ಬಿಲ್‌ಫಿಶ್ ಆಗಿದ್ದು ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂಬುದಾಗಿ ಕರೆಯಲಾಗುತ್ತದೆ.
ಇದು ಗಿಲ್‌ನೆಟ್‌ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪದಲ್ಲಿ ಅಪರೂಪವಾಗಿದೆ ಎನ್ನಲಾಗಿದೆ. ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ಮಾಹಿತಿ ನೀಡಿದ್ದಾರೆ.