ಅಪರೂಪದ ಘಟನೆ ; ಎರಡೂ ಕೈಗಳನ್ನು ಕಳೆದುಕೊಂಡ ಪುರುಷ ರೋಗಿಗೆ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಯ ಕೈ ಜೋಡಿಸಿದ ವೈದ್ಯರು..!
ದೆಹಲಿಯ 45 ವರ್ಷದ ವ್ಯಕ್ತಿಯೊಬ್ಬರು 2020ರಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಆದ್ದರಿಂದ ಆತ ತನ್ನ ಕೈಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ವೈದ್ಯರ ಮೊರೆ ಹೋಗಿದ್ದರು. ಮತ್ತೊಂದೆಡೆ, ಇತ್ತೀಚೆಗಷ್ಟೇ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೊಬ್ಬರ ಅಂಗಾಂಗ ದಾನಗಳಿಗೆ ಕುಟುಂಬಸ್ಥರು ನಿರ್ಧರಿಸಿದ್ದರು. ಅಂತೆಯೇ, ಈ ಮಹಿಳೆಯ ಎರಡೂ ಕೈಗಳನ್ನು ಪುರುಷ ರೋಗಿಗೆ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಅಲ್ಲದೇ, ಈಕೆಯ ಎರಡು ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ಬೇರೆಯವರಿಗೆ ಕಸಿ ಮಾಡಲಾಗಿದೆ.
ಸದ್ಯ ಪುರುಷ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಕೈ ಮತ್ತು ಬೆರಳುಗಳನ್ನು ಚಲಿಸಲು ಸಮರ್ಥರಾಗಿದ್ದಾರೆ. ಭವಿಷ್ಯದಲ್ಲಿ ರಕ್ತ ಪೂರೈಕೆಯೂ ಸುಗಮವಾಗಲಿದೆ. ಡಾ.ನಿಖಿಲ್ ಜುಂಜುನ್ವಾಲಾ ನೇತೃತ್ವದ ವೈದ್ಯರ ತಂಡ ಸುಮಾರು 12 ಗಂಟೆಗಳ ಕಾಲ ಶ್ರಮಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ರೋಗಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರೈಲು ಅಪಘಾತದಲ್ಲಿ ಸಂತ್ರಸ್ತ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ. ಆದ್ದರಿಂದ ಆತನಿಗೆ ಮೊದಲಿಗೆ ಒಂದು ಶಸ್ತ್ರಚಿಕಿತ್ಸೆ ಮಾಡಿ ಎರಡೂ ಕೈಗಳ ತುದಿಗಳನ್ನು ಮುಚ್ಚಲಾಯಿತು. ಇತ್ತೀಚೆಗಷ್ಟೇ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಹೊಸ ಕೈಗಳಿಗೆ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆ ಸಮಯದಲ್ಲಿ ನರಗಳು ಕತ್ತರಿಸಿ, ಮೂಳೆಗಳನ್ನು ಒಂದೊಂದಾಗಿ ಎಚ್ಚರಿಕೆಯಿಂದ ಜೋಡಿಸಲಾಯಿತು. ನರಗಳನ್ನು ಮರಳಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈಗ ತನ್ನ ಮೊಣಕೈ ಚಲಿಸುತ್ತಿದೆ. ಕೆಲವು ದಿನಗಳ ನಂತರ ನಿಮ್ಮ ಕೈಗಳನ್ನು ಮತ್ತು ಮಣಿಕಟ್ಟುಗಳನ್ನು ಚಲಿಸಬಹುದು. ನೋವು ಮತ್ತು ಶಾಖದಂತಹ ಸ್ಪರ್ಶವನ್ನು ತಿಳಿದುಕೊಳ್ಳಲು ಸುಮಾರು ಏಳು ತಿಂಗಳುಗಳು ಬೇಕಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ನನಗೆ ಬೇರೆಯವರ ಮೇಲೆ ಅವಲಂಬಿತವಾಗಿ ಬದುಕಲು ಇಷ್ಟವಿಲ್ಲ. ಅದಕ್ಕಾಗಿಯೇ ಅಪಾಯ ಅಂತಾ ಗೊತ್ತಿದ್ದರೂ ಆಪರೇಷನ್ ಮಾಡಿಸಿಕೊಳ್ಳಲು ತಯಾರಿ ನಡೆಸಿದ್ದೆ. ಮತ್ತೆ ಸಾಮಾನ್ಯ ಜೀವನ ನಡೆಸುವುದು ನನ್ನ ಗುರಿ. ಕಷ್ಟದ ಸಮಯದಲ್ಲಿ ನನ್ನ ಹೆಂಡತಿ ನನ್ನ ಬೆಂಬಲಕ್ಕೆ ನಿಂತಳು. ನನ್ನ ಮಗ ದುಡಿದು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾನೆ. ನನಗೆ ತನ್ನ ಕೈಗಳನ್ನು ದಾನ ಮಾಡಿದ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ನಾನು ಋಣಿಯಾಗಿದ್ದೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಧನ್ಯವಾದಗಳು ಎಂದು ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ತಿಳಿಸಿದ್ದಾರೆ.