ವಾಹನದ ಮೇಲೆ ಅಪ್ಪಳಿಸಿದ ವಿಮಾನ; 10 ಮಂದಿ ಸಾವು, ಭಯಾನಕ ವೀಡಿಯೊ ನೋಡಿ
ಕೌಲಲಾಂಪುರ: ಮಲೇಷ್ಯಾ ರಾಜಧಾನಿ ಕೌಲಲಾಂಪುರದ ಉತ್ತರದ ಹೆದ್ದಾರಿಯಲ್ಲಿ ಲಘು ವಿಮಾನವೊಂದು ಅಪಘಾತಕ್ಕಿಡಾಗಿರುವ ಘಟನೆ ನಡೆದಿದೆ. ಲಂಕಾವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ಸ್‌ಪ್ರೆಸ್‌ವೇಯಲ್ಲಿ ವಿಮಾನ ಪತನಗೊಂಡು ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
ಅಪಘಾತದಲ್ಲಿ ವಿಮಾನದಲ್ಲಿರುವ ಎಂಟು ಮಂದಿ ಮತ್ತು, ವಿಮಾನ ಡಿಕ್ಕಿ ಹೊಡೆದ ಕಾರು ಹಾಗೂ ಬೈಕಿನ ಚಾಲಕರಿಬ್ಬರು ಸಾವನ್ನಪ್ಪಿದ್ದಾರೆ. ಬೀಚ್‌ಕ್ರಾಫ್ಟ್ ಮಾಡೆಲ್ 390 ವಿಮಾನವು ಪತನಗೊಂಡಾಗ ಆರು ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ಅದರಲ್ಲಿದ್ದರು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮೃತಪಟ್ಟವರಲ್ಲಿ ಒಬ್ಬರು ಪಹಾಂಗ್ ರಾಜ್ಯದ ಶಾಸಕ ಜೋಹರಿ ಹರುನ್ ಕೂಡಾ ಸೇರಿದ್ದಾರೆ. ಅವರು 2022 ರ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಬ್ಯಾರಿಸನ್ ನ್ಯಾಷನಲ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
Dashcam footage shows final moments of the private jet crash in Malaysia. https://t.co/1rsoP7ALGx
— Breaking Aviation News & Videos (@aviationbrk) August 17, 2023
Viewer discretion advised. pic.twitter.com/fo4Fqxu319
ಅಪಘಾತಕ್ಕೀಡಾದ ವಿಮಾನವು N28JV ಸಂಖ್ಯೆಯ ಅಡಿಯಲ್ಲಿ ನೋಂದಾಯಿಸಲಾದ ಬೀಚ್‌ಕ್ರಾಫ್ಟ್ 390 ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ. ವಿಶೇಷ ಖಾಸಗಿ ವಿಮಾನ ಸೇವೆಯಾದ ಜೆಟ್ ವ್ಯಾಲೆಟ್ ಇದನ್ನು ನಿರ್ವಹಿಸುತ್ತಿತ್ತು. ಅಪಘಾತದ ಸ್ಥಳದಿಂದ 10 ಕಿಮೀಗಿಂತ ಕಡಿಮೆ ದೂರದಲ್ಲಿರುವ ಸುಬಾಂಗ್ ವಿಮಾನ ನಿಲ್ದಾಣದ ಮಾರ್ಗವಾಗಿ ಮಧ್ಯಾಹ್ನ 2.08 ಕ್ಕೆ ಲಂಕಾವಿಯಿಂದ ಹೊರಟಿತ್ತು.
ಸುಬಾಂಗ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಮಧ್ಯಾಹ್ನ 2.50 ರ ಸುಮಾರಿಗೆ ಎಲ್ಮಿನಾ ಅಪಘಾತದ ಸ್ಥಳದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದೆ. ಆದರೆ ವಿಮಾನದಿಂದ ಯಾವುದೇ ತೊಂದರೆಯ ತುರ್ತು ಕರೆ ಬಂದಿಲ್ಲ ಎಂದು CAAM ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಪ್ಟನ್ ನೊರಾಜ್‌ಮನ್ ಮಹಮೂದ್ ಹೇಳಿದ್ದಾರೆ. ವಿಮಾನ ಲ್ಯಾಂಡ್ ಆಗಲು ತಯಾರಿ ನಡೆಸುತ್ತಿದ್ದಾಗ, ಜೆಟ್ ಟಚ್‌ಡೌನ್‌ಗೆ ಎರಡು ನಿಮಿಷಗಳ ಮೊದಲು ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು. ಕೂಡಲೇ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ 10 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಅಪಘಾತದ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆಟ್ ವ್ಯಾಲೆಟ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.
ಮಲೇಷ್ಯಾದ ರಾಜ ಸುಲ್ತಾನ್ ಅಬ್ದುಲ್ಲಾ ಅಹ್ಮದ್ ಶಾ ಸಂಜೆ 5.30 ರ ಸುಮಾರಿಗೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು. ಅಪಘಾತದಲ್ಲಿ ಸಾವಿಗೀಡಾದವರ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಈ ದುರಂತದ ಸಂದರ್ಭದಲ್ಲಿ ಕುಟುಂಬಗಳು ತಾಳ್ಮೆ ಮತ್ತು ಸಹನೆಯಿಂದ ಇರಬೇಕೆಂದು ಅವರು ಆಶಿಸಿದರು.