ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪನ್ನೀರ್ ರಾಶಿಯ ಮೇಲೆ ಕುಳಿತ ವ್ಯಕ್ತಿಯ ಫೋಟೋ ವೈರಲ್ ; ಬ್ರ್ಯಾಂಡಿಂಗ್‌ ಇಲ್ಲದ ಪನ್ನೀರ್‌ ಅನ್ನು ಖಂಡಿತ ಖರೀದಿ ಮಾಡ್ಬೇಡಿʼ ಎಂದ ನೆಟ್ಟಿಗರು!

Twitter
Facebook
LinkedIn
WhatsApp
ಪನ್ನೀರ್ ರಾಶಿಯ ಮೇಲೆ ಕುಳಿತ ವ್ಯಕ್ತಿಯ ಫೋಟೋ ವೈರಲ್ ; ಬ್ರ್ಯಾಂಡಿಂಗ್‌ ಇಲ್ಲದ ಪನ್ನೀರ್‌ ಅನ್ನು ಖಂಡಿತ ಖರೀದಿ ಮಾಡ್ಬೇಡಿʼ ಎಂದ ನೆಟ್ಟಿಗರು!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಕೆಲವು ವಿಡಿಯೊಗಳು ನಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುವಂತೆ ಮಾಡುತ್ತವೆ, ಮಾತ್ರವಲ್ಲ ಇದೇನಪ್ಪಾ ಕರ್ಮ ಹೀಗಿದೆ ಅಂತಲೂ ಅನ್ನಿಸುತ್ತದೆ. ಪಾನಿಪೂರಿ ಮಾಡುವವನ ಮೈ ಕೆರೆತ, ಕುಂಕಳಿನ ಮಧ್ಯೆ ಹಿಟ್ಟು ಇರಿಸಿ ಒತ್ತುವುದು, ಇಡ್ಲಿಹಿಟ್ಟಿಗೆ ಉಗಿಯುವುದು ಇಂತಹ ಹಲವು ವಿಡಿಯೊಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ, ಅಲ್ಲದೆ ಇದನ್ನೆಲ್ಲಾ ನೋಡಿ ಇನ್ನು ಮುಂದೆ ಹೊರಗಡೇ ತಿನ್ನೋದೇ ಬೇಡಪ್ಪಾ ಅಂದ್ಕೊಂಡ್‌ ಇರ್ತೀರಾ. ಆದ್ರೇನ್‌ ಮಾಡೋದು, ನಾಲಿಗೆ ಚಪಲ ಕೇಳ್ಬೇಕಲ್ಲ ಸ್ವಾಮಿ. ಮನಸ್ಸು ಬೇಡ ಅಂದ್ರು ನಾಲಿಗೆ ಬಿಡೊಲ್ಲ. ಅದೆಲ್ಲಾ ಸರಿ ಈಗೇನಾಯ್ತು ಅಂತ ಕೇಳ್ತೀರಾ? ಕೇಳೋದೇನು ಬಿಡಿ, ನೀವೂ ನೋಡಿವಿರಂತೆ. ಇದನ್‌ ನೋಡಿದ ಮೇಲೆ ಖಂಡಿತ ಪನ್ನೀರ್‌ ಅಂತು ನೀವ್‌ ಮುಟ್ಟೋದೇ ಇಲ್ಲ. ಪನ್ನೀರ್‌ ಪ್ರೇಮಿಗಳಿಗೆ ಇಲ್ಲಿರುವ ಫೋಟೊ ಕಣ್ಣೀರು ತರಿಸೋದಂತು ಪಕ್ಕಾ.

ಪನ್ನೀರ್‌ ರಾಶಿಯ ಮೇಲೆ ಕುಳಿತಿರುವ ವ್ಯಕ್ತಿಯ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ, ಮಾತ್ರವಲ್ಲ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

@zhr_jafri ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಪನ್ನೀರ್‌ ರಾಶಿಯ ಮೇಲೆ ಕುಳಿತ ವ್ಯಕ್ತಿ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಪನೀರ್‌ ರಾಶಿಯ ಮೇಲೆ ಮರದ ತುಂಡೊಂದನ್ನು ಇರಿಸಿ ಅದರ ಮೇಲೆ ನೀಲಿ ಪಂಚೆ ಉಟ್ಟುಕೊಂಡ, ಶರ್ಟ್‌ ಕೂಡ ಧರಿಸಿಲ್ಲದ ವ್ಯಕ್ತಿಯೊಬ್ಬರು ಕುಳಿತಿದ್ದಾರೆ.

ʼಇದನ್ನು ನೋಡಿದ ಮೇಲೆ ಬ್ರ್ಯಾಂಡಿಂಗ್‌ ಇಲ್ಲದ ಪನ್ನೀರ್‌ ಅನ್ನು ಖಂಡಿತ ಖರೀದಿ ಮಾಡ್ಬೇಡಿʼ ಎಂದು ಶೀರ್ಷಿಕೆ ನೀಡುವ ಜೊತೆಗೆ ಈ ಫೋಟೊವನ್ನು ಹಂಚಿಕೊಳ್ಳಲಾಗಿದೆ.

ಅಕ್ಟೋಬರ್‌ 28 ರಂದು ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 61,000 ಜನ ಇದನ್ನು ವೀಕ್ಷಿಸಿದ್ದಾರೆ. 300 ಮಂದಿ ಪೋಸ್ಟ್‌ಗೆ ಲೈಕ್‌ ಮಾಡಿದ್ದರೆ, ಹಲವರು ಕಾಮೆಂಟ್‌ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ʼಪನ್ನೀರ್‌, ತುಪ್ಪ, ಚೀಸ್‌ ಇಂತಹದ್ದನ್ನೆಲ್ಲಾ ಮನೆಯಲ್ಲೇ ಮಾಡೋಕೆ ಕಡಿಮೆ ಸಮಯ ಬೇಕು. ಹೊರಗಡೆ ಇದನ್ನೆಲ್ಲಾ ತಿನ್ನೋಕೆ ಹೋಗಬೇಡಿʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಬ್ರ್ಯಾಂಡೆಡ್‌ ಅಥವಾ ಬ್ರ್ಯಾಂಡಿಂಗ್‌ ಅಲ್ಲದ್ದು, ಯಾರು ಉತ್ತಮ ಪನೀರ್‌ ಮಾಡ್ತಾರೆ ಅಂತ ಹೇಳೋಕೆ ಆಗೊಲ್ಲ. ಇಲ್ಲಿ ಯಾವುದೂ ಸರಿಯಿಲ್ಲʼ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಔಟ್‌ಸೈಡ್‌ ಫುಡ್‌ ಅವತಾರ ನೋಡಿದ್ರೆ ನೀವು ಹೊರಗಡೆ ತಿನ್ನೋದೇ ಬಿಡೋದು ಖಂಡಿತʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಮುಚ್ಕೊಂಡ್‌ ಮನೇಲೆ ಪನ್ನೀರ್‌ ಮಾಡಿ ಅನ್ನೋದು ಇದಕ್ಕೆʼ ಅಂತ ವ್ಯಕ್ತಿಯೊಬ್ಬರು ಕಾಲೆಳೆಯುವ ಮೂಲಕ ಕಾಮೆಂಟ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅವರೆಲ್ಲರ ಕಥೆ ಬಿಡಿ. ನಿಮ್ಮ ಕಥೆ ಹೇಳಿ? ಬೇಕಾ ಪನ್ನೀರ್‌ ತಿನ್ನೋದು.

ಪೊಲೀಸರು ಬಂಧಿಸಲು ಹೋದಾಗ ನದಿಗೆ ಹಾರಿ ಆರೋಪಿ ಎಸ್ಕೇಪ್

ಭೋಪಾಲ್: ಆರೋಪಿಯೊಬ್ಬ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ನದಿ ಹಾರಿದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ (Madhyapradesh)  ನಡೆದಿದೆ.

ಈ ಘಟನೆ ಮಧ್ಯಪ್ರದೇಶದ ಶಿಯೋಪುರ್ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಆರೋಪಿಯನ್ನು ಖಾನ್ ಎಂದು ಗುರುತಿಸಲಾಗಿದೆ. 

ಖಾನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರ ಮಧ್ಯಾಹ್ನದ ಬಳಿಕ ಆತನನ್ನು ಭಮದಿಸಲೆಂದು ತೆರಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖಾನ್ ನೇರವಾಗಿ ನದಿಗೆ ಜಿಗಿದಿದ್ದಾನೆ. ಅಲ್ಲದೆ ಬೇರೆಕಡೆ ಈಜುತ್ತಾ ತೆರಳಿದ್ದಾನೆ. ಈ ಮೂಲಕ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಸದ್ಯ ಆರೋಪಿ ನದಿಗೆ ಜಿಗಿದು ಈಜುತ್ತಾ ತಪ್ಪಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಪದೇ ಪದೇ ಮನವಿ ಮಾಡಿದರೂ ಆರೋಪಿ ನದಿಯಿಂದ ಹೊರಬರಲು ನಿರಾಕರಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

ಖಾನ್, ಮಾದಕವಸ್ತು ಮಾರಾಟದ ಆರೋಪ ಹೊತ್ತಿದ್ದಾನೆ. ಅಲ್ಲದೆ ಈತನ ಮೇಲೆ ಸೆಕ್ಷನ್ 110 (ಪ್ರಚೋದನೆಯ ಶಿಕ್ಷೆ) ಸೇರಿದಂತೆ ಹಲವಾರು ಇತರ ಕೆಸ್‍ಗಳು ದಾಖಲಾಗಿವೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್‍ಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಖಾನ್‍ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ