ಹೊಟೇಲ್ನಲ್ಲಿ ಹೊಟ್ಟೆತುಂಬ ತಿಂದ್ಮೇಲೆ ಬಿಲ್ ಕಟ್ಟುವುದನ್ನು ತಪ್ಪಿಸಲು ಹಾರ್ಟ್ ಅಟ್ಯಾಕ್ ನಾಟಕವಾಡಿ ಸಿಕ್ಕಿ ಬಿದ್ದ ವ್ಯಕ್ತಿ!

ನವದೆಹಲಿ: ಹೊಟೇಲ್ನಲ್ಲಿ ಹೊಟ್ಟೆತುಂಬ ತಿಂದ್ಮೇಲೆ ಬಿಲ್ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಹೊಟ್ಟೆ ತುಂಬಾ ತಿಂದ್ಮೇಲೆ ಬಿಲ್ ಪಾವತಿ ತಪ್ಪಿಸಿಕೊಳ್ಳಲು ಬರೋಬ್ಬರಿ 20 ರೆಸ್ಟೋರೆಂಟ್ ಮಾಲೀಕರ ಎದುರು ನಾಟಕವಾಡಿ ಗ್ರಹಚಾರಕ್ಕೆ ಒಮ್ಮೆ ಸಿಕ್ಕಿ ಬಿದ್ದಿದ್ದಾನೆ.
ಸ್ಪ್ಯಾನಿಷ್ ವ್ಯಕ್ತಿಯೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 20 ರೆಸ್ಟೋರೆಂಟ್ ಗೆ ಪಂಗನಾಮ ಹಾಕಿರುವ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?: ಪ್ರತಿ ಬಾರಿ ಹೊಟೇಲ್ಗೆ ಹೋಗಿ, ಕಂಠಪೂರ್ತಿ ತಿಂದು ಬರ್ತಿದ್ದ ವ್ಯಕ್ತಿ ಬಿಲ್ ಮಾತ್ರ ಪಾವತಿ ಮಾಡ್ತಿರಲಿಲ್ಲ. ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಿ ತಿಂದು ತೇಗುತ್ತಿದ್ದ ವ್ಯಕ್ತಿ, ಬಿಲ್ ಪಾವತಿಸುವ ಸಮಯ ಬಂದ ಕೂಡಲೇ ಆಟ ಶುರು ಮಾಡ್ತಿದ್ದ. ಹೃದಯಾಘಾತವಾದಂತೆ ಎದೆಯನ್ನು ಹಿಡಿದುಕೊಂಡು ಇದ್ದಕ್ಕಿದ್ದಂತೆ ಮೂರ್ಛೆ ಹೋದಂತೆ ನಟಿಸುತ್ತಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗ್ತಿತ್ತು. ಇದ್ರಿಂದ ಬಿಲ್ ಪಾವತಿಯನ್ನು ಈತ ತಪ್ಪಿಸಿಕೊಳ್ಳುತ್ತಿದ್ದನು.
ಆದ್ರೆ ಕೊನೆಗೂ ಆತನ ನಾಟಕ ಹೊಟೇಲ್ ಮಾಲೀಕರಿಗೆ ಗೊತ್ತಾಗಿದೆ. ವ್ಯಕ್ತಿ ಹೃದಯಾಘಾತ ಎಂದು ನಟಿಸುವ ಮೂಲಕ ಕನಿಷ್ಠ 20 ಹೊಟೇಲ್ ಗೆ ಟೋಪಿ ಹಾಕಿದ್ದಾನೆ. ಒಂದು ಹೊಟೇಲ್ ಮಾಲಿಕರಿಗೆ ಈತ ನಾಟಕವಾಡ್ತಿದ್ದಾನೆ ಎಂಬ ಅನುಮಾನ ಬಂದಿತ್ತು. ಹಾಗಾಗಿ ಆತನ ಫೋಟೋವನ್ನು ಎಲ್ಲ ರೆಸ್ಟೋರೆಂಟ್ ಮಾಲಿಕರಿಗೆ ನೀಡಿದ್ದಲ್ಲದೆ, ಎಚ್ಚರಿಕೆಯಿಂದ ಇರುವಂತೆ ಹೋಡೆಲ್ ಮಾಲೀಕನೊಬ್ಬ ಹೇಳಿದ್ದ.
ಹಿಂದಿನ ತಿಂಗಳು ವ್ಯಕ್ತಿ ಅಲಿಕಾಂಟೆಯ ಎಲ್ ಬ್ಯೂನ್ ಕಮರ್ ಹೊಟೇಲ್ ಗೆ ಬಂದಿದ್ದಾನೆ. ಅಲ್ಲಿ ಸಮುದ್ರಾಹಾರ ಸೇವಿಸಿದ್ದಲ್ಲದೆ ವಿಸ್ಕಿ ಕುಡಿದಿದ್ದಾನೆ. ಸಿಬ್ಬಂದಿ ಈತನಿಗೆ ಬಿಲ್ ನೀಡಿದ್ದಾರೆ. ಹೊಟೇಲ್ ರೂಮಿನಲ್ಲಿ ಹಣವಿದೆ. ಅಲ್ಲಿಂದ ತರ್ತೇನೆ ಎಂದು ಹೇಳಿದ್ದಾನೆ. ಆದ್ರೆ ಇದನ್ನು ಅವರು ನಿರಾಕರಿಸಿದ್ದಾರೆ. ಸಿಬ್ಬಂದಿ ಮಾತನಾಡ್ತಿರುವಾಗಲೇ ಈತ ಕುರ್ಚಿ ಮೇಲೆ ಕುಸಿದು ಬಿದ್ದಿದ್ದಾನೆ. ಹೃದಯಾಘಾತದ ನಾಟಕವಾಡಿದ್ದಾನೆ. ಈ ವೇಳೆ ಹೊಟೇಲ್ ಸಿಬ್ಬಂದಿ ಪೊಲೀಸ್ ಕರೆಸಿದಾಗ ಈತನ ನಾಟಕ ಬಯಾಲಗಿದೆ. ಎಲ್ಲಾ ಹೊಟೇಲ್ ಮಾಲೀಕರು ಸೇರಿ ಪ್ರಕರಣ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.