ಮದುವೆಯಾದ ಒಂದೇ ತಿಂಗಳಿಗೆ ಪತ್ನಿ ಬಿಟ್ಟು ಹೋದಳೆಂದು ಮನನೊಂದು ನೇಣಿಗೆ ಶರಣಾದ ನ್ಯಾಷನಲ್ ಕಬಡ್ಡಿ ಆಟಗಾರ..!
Twitter
Facebook
LinkedIn
WhatsApp

ಮದುವೆಯಾದ ಒಂದೇ ತಿಂಗಳಿಗೆ ಪತ್ನಿ ಬಿಟ್ಟಹೋದ ಹಿನ್ನೆಲೆಯಲ್ಲಿ ವಿನೋದ್ ರಾಜ್ ನೊಂದಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ ವಿನೋದ್ ರಾಜ್ ಅರಸ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವಿನೋದ್ ರಾಜ್ 2023ರ ಡಿ.10 ರಂದು ಮದುವೆಯಾಗಿದ್ದರು. ಆದರೆ ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದಳು. ಪ್ರೇಮ ವಿವಾಹವು ಡಿ.31 ನಂತರ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು. ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ.