ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಕೀಲನ ಭೀಕರ ಹತ್ಯೆ
ಕಲಬುರಗಿ, (ಡಿಸೆಂಬರ್ 07): ದುಷ್ಕರ್ಮಿಗಳು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ವಕೀಲನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಲಬುರಗಿ ನಗರದ ಸಾಯಿ ಮಂದಿರ ಬಳಿಯಿರುವ ಅಪಾರ್ಟ್ಮೆಂಟ್ ಬಳಿ ಹಾಡುಗಲೇ ವಕೀಲ ಈರಣ್ಣಗೌಡನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈರಣ್ಣಗೌಡ ಬೈಕ್ನಲ್ಲಿ ಕೋರ್ಟ್ಗೆ ಹೋಗುವ ವೇಳೆ ಇಬ್ಬುರ ದುಷ್ಕರ್ಮಿಗಳು ಅಡ್ಡಿಗಟ್ಟಿದ್ದಾರೆ. ಬಳಿಕ ಈರಣ್ಣ ಅವರು ಬೈಕ್ ಬಿಟ್ಟು ವಾಪಸ್ ತಮ್ಮ ಅಪಾಟ್೯ ಮೆಂಟ್ ಕಡೆ ಓಡಿದ್ದಾರೆ. ಅಲ್ಲದೇ ಇನ್ನೇನು ಜೇಬಿನಲ್ಲಿದ್ದ ಗನ್ ತೆಗೆಯುವಷ್ಟರಲ್ಲೇ ಹಂತಕರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮಾಸ್ಕ್ ಧರಿಸಿದ್ದ ಇಬ್ಬರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಈರಣ್ಣನ ಅರ್ಪಾಟ್ ಮೆಂಟ್ನಲೇ ಹತ್ಯೆ ಮಾಡಿದ್ದಾರೆ. ಇನ್ನು ಈರಣ್ಣ ಲೈಸೆನ್ಸ್ ಗನ್ ಹೊಂದಿದ್ದು, ಅದನ್ನು ತೆಗೆಯಬೇಕು ಎನ್ನುವಷ್ಟರಲ್ಲೇ ಕೊಚ್ಚಿ ಕೊಂದಿದ್ದಾರೆ. ಇನ್ನು ಈರಣ್ಣ ಗನ್ ತೆಗೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದ್ರೆ, ಜೀವ ರಕ್ಷಣೆಗಾಗಿ ಗನ್ ಪಡೆದುಕೊಂಡಿದ್ದರೂ ಸಹ ಉಪಯೋಗವಿಲ್ಲದಂತಾಗಿದೆ.
ಹಾಡುಹಗಲೇ ವಕೀಲನ ಭೀಕರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್ ಚೇತನ್ ದೌಡಾಯಿಸಿ ಪರಿಶೀಲನೆ ನಡೆಸಿದರು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಆರ್ ಚೇತನ್ , ವಕೀಲರು ಕೋಟ್೯ ಗೆ ಹೋಗುವಾಗ ಹಂತಕರು ಅಟ್ಯಾಕ್ ಮಾಡಿದ್ದಾರೆ. ಸದ್ಯ ಹಂತಕರ ಬಂಧನಕ್ಕೆ ಎರಡೂ ಟೀಂ ರಚನೆ ಮಾಡಿದ್ದು, ಸ್ಥಳದಲ್ಲಿ ಸಿಕ್ಕ ಕೆಲ ಮಾಹಿತಿ ಮೇರೆಗೆ ನಮ್ಮ ತಂಡ ಹಂತಕರ ಜಾಡು ಹಿಡಿದು ಹೋಗಿದೆ. ಎಲ್ಲಾ ಅಯಾಮಗಳಲ್ಲು ತನಿಖೆ ನಡೆಸುತ್ತಿದ್ದೇವೆ. ಮೃತ ವಕೀಲರ ಮನೆಯವರು ಏನು ದೂರು ನೀಡುತ್ತಾರೋ ಅದರ ಆಧಾರದ ಮೇಲೆಯೂ ತನಿಖೆ ಮಾಡುತ್ತೇವೆ. ಎಷ್ಟು ಜನ ಇದ್ದರು ಎನ್ನುವ ಮಾಹಿತಿ ನಿಖರವಾಗಿ ಗೊತ್ತಾಗಿಲ್ಲ ಎಂದು ತಿಳಿಸಿದರು.
ಬೆಂಗಳೂರು: ಬಾರ್ನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ!
ಬೆಂಗಳೂರು, ಡಿ.7: ನಗರದ ತಲಘಟ್ಟಪುರದ ಬಳಿ ಇರುವ ಕೆರೆಯೊಂದರಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಶವ ಬುಧವಾರ ಸಂಜೆ ಪತ್ತೆಯಾಗಿದೆ. ಮೃತದೇಹದ ಗುರುತು ಪತ್ತೆಯಾಗಿದ್ದು, ಶರತ್ (30) ಎಂದು ಗುರುತಿಸಲಾಗಿದೆ. ಬಾರ್ವೊಂದರಲ್ಲಿ ಮಂಗಳವಾರ ತಡರಾತ್ರಿ ನಡೆದಿದ್ದ ಗಲಾಟೆ ಬಳಿಕ ಶರತ್ನನ್ನು ಕೊಲೆ (Murder) ಮಾಡಲಾಗಿದೆ.
ಹತ್ಯೆ ಬಳಿಕ ಮೃತದೇಹವನ್ನು ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.