ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಶಿಕ್ಷಕನನ್ನು ಅಪಹರಿಸಿ ತನ್ನ ಮಗಳ ಜೊತೆ ಮದುವೆ ಮಾಡಿಸಿದ ಕಿಡ್ನಾಪರ್ ; ಈ ರಾಜ್ಯದಲ್ಲಿ ಇನ್ನೂ ನಡೀತಿದೆ ಪಕಡ್ವಾ ವಿವಾಹ...!

Twitter
Facebook
LinkedIn
WhatsApp
ಶಿಕ್ಷಕನನ್ನು ಅಪಹರಿಸಿ ತನ್ನ ಮಗಳ ಜೊತೆ ಮದುವೆ ಮಾಡಿಸಿದ ಕಿಡ್ನಾಪರ್ ; ಈ ರಾಜ್ಯದಲ್ಲಿ ಇನ್ನೂ ನಡೀತಿದೆ ಪಕಡ್ವಾ ವಿವಾಹ...!

ಪಟನಾ: ಬಿಹಾರದಲ್ಲಿ (Bihar) ಮತ್ತೊಂದು ಪಕಡ್ವಾ ವಿವಾಹ (Pakadwa Vivah) ಬೆಳಕಿಗೆ ಬಂದಿದೆ. ಸರ್ಕಾರಿ ಶಿಕ್ಷಕನಾಗಲು ಇತ್ತೀಚೆಗಷ್ಟೇ ಬಿಹಾರ ಲೋಕಸೇವಾ ಆಯೋಗ ಪರೀಕ್ಷೆಯನ್ನು ಪಾಸು ಮಾಡಿದ್ದ ಗೌತಮ್ ಕುಮಾರ್ (Teacher Gautam Kumar) ಎಂಬಾತನನ್ನು ನಾಲ್ಕಾರು ಜನರಿದ್ದ ತಂಡವು ಅಪಹರಿಸಿಕೊಂಡು ಹೋಗಿದೆ(Teacher Abducted). ಅಲ್ಲದೇ, ಅಪಹರಣಕಾರರ ತಂಡದ ಪೈಕಿ ಒಬ್ಬನ ಮಗಳನ್ನು, ಗನ್‌ಪಾಯಿಂಟ್‌ನಲ್ಲಿ ಈ ಶಿಕ್ಷಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ವರದಿಯಾಗಿದೆ(Forcibly Marriage). ಅಪಹರಣ ಮಾಡಿದ 24 ಗಂಟೆಯಲ್ಲೇ ಈ ಮದುವೆ ನಡೆದಿದೆ! ಬಿಹಾರದಲ್ಲಿ ಇತ್ತೀಚಿನ ಕೆಲವು ದಶಕಗಳಿಂದ ಈ ಮಾದರಿಯ ‘ಪಕಡ್ವಾ ವಿವಾಹ’ಗಳು ಆಗಾಗ ವರದಿಯಾಗುತ್ತಲೇ ಇವೆ.

ಅವಿವಾಹಿತನಿಂದ ಯಾವುದೇ ಯೋಜನೆ ಇಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಡುವ ಗೌತಮ್‌ ಕುಮಾರ್ ಪಯಣವು ಸಾಕಷ್ಟು ತಿರುವುಗಳನ್ನು ಕಂಡಿದೆ. ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವ ಈ ಪಕಡ್ವಾ ವಿವಾಹಕ್ಕೆ ಗೌತಮ್ ಕುಮಾರ್ ಮದುವೆ ಹೊಸ ಸೇರ್ಪಡೆಯಾಗಿದೆ. ಪಕಡ್ವಾ ವಿವಾಹ ಅಥವಾ ವರನ ಅಪಹರಣ ಪದ್ಧತಿಯಲ್ಲಿ, ವರನನ್ನು ಅಪಹರಿಸಿ ಬಲವಂತವಾಗಿ ಆತನಿಗೆ ಮದುವೆ ಮಾಡಿಸುತ್ತಾರೆ.

ಪೊಲೀಸರ ಪ್ರಕಾರ, ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಈ ಅಪಹರಣ ನಡೆದಿದ್ದು, ಪಟೇಪುರ್‌ನ ರೇಪುರಾದಲ್ಲಿರುವ ಉತ್ಕ್ರಮಿತ್ ಮಧ್ಯ ವಿದ್ಯಾಲಯದಲ್ಲಿ ಗೌತಮ್ ಕುಮಾರ್ ಅವರು ಹೊಸದಾಗಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಕಾಣೆಯಾದ ಶಿಕ್ಷಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಕುಮಾರ್ ಅವರ ಕುಟುಂಬವು ಬುಧವಾರ ರಾತ್ರಿ ರಸ್ತೆಯನ್ನು ತಡೆದು ಪ್ರತಿಭಟಿಸಿತು.

ಕುಮಾರ್ ಕುಟುಂಬವು ರಾಜೇಶ್ ರಾಯ್ ಎಂಬ ವ್ಯಕ್ತಿಯ ಮೇಲೆ ಆರೋಪ ಹೊರಿಸಿದೆ. ರಾಯ್ ಕುಟಂಬದ ಸದಸ್ಯರು, ಗೌತಮ್ ಕುಮಾರನನ್ನು ಅಪಹರಿಸಿ, ಬಲವಂತವಾಗಿ ತಮ್ಮ ಮಗಳು ಚಾಂದನಿಯೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೂ ಮೊದಲು ಈ ವಿವಾಹ ಪ್ರಸ್ತಾಪವನ್ನು ಗೌತಮ್ ಕುಮಾರ್ ಒಪ್ಪಿಕೊಂಡಿರಲಿಲ್ಲ. ಆಗ ಜಗಳ ಕೂಡ ನಡೆದಿತ್ತು. ಗೌತಮ್ ಮೇಲೆ ಹಲ್ಲೆ ಕೂಡ ಆಗಿತ್ತು. ಅಲ್ಲದೇ, ನವಡಾ ಸೇನಾಧಿಕಾರಿ ಮತ್ತು ಲಖಿಸರಾಯ್ ಮಹಿಳೆಯ ನಡುವಿನ ಹತ್ತು ವರ್ಷಗಳ ಬಲವಂತದ ಮದುವೆಯನ್ನು ರದ್ದುಗೊಳಿಸಿದ ಇತ್ತೀಚಿನ ಪಾಟ್ನಾ ಹೈಕೋರ್ಟ್ ತೀರ್ಪನ್ನು ಕುಮಾರ್ ಅವರು ಪ್ರಸ್ತಾಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪಹರಣ ಮತ್ತು ಬಲವಂತದ ಮದುವೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ತನಿಖೆಯನ್ನೂ ಕೈಗೊಳ್ಳಲಾಗತ್ತಿದೆ. ಅಪಹರಣಕಾರರ ವಿರುದ್ಧ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಪಕಡವಾ ವಿವಾಹಗಳು ಹೆಚ್ಚುತ್ತಿವೆ. ಕಳೆದ ವರ್ಷ ಇಂಥದ್ದೇ ಘಟನೆ ನಡೆದಿತ್ತು. ಅನಾರೋಗ್ಯಪೀಡಿತ ಪ್ರಾಣಿಯ ಚಿಕಿತ್ಸೆ ಪಶುವೈದ್ಯರನ್ನು ಕರೆಯಿಸಿಕೊಂಡು ಬಳಿಕ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಲ್ಲದೇ, ಬಲವಂತವಾಗಿ ಆತನಿಗೆ ಮದುವೆ ಮಾಡಿಸಲಾಗಿತ್ತು. ಈ ಘಟನೆ ಬೇಗುಸರಾಯ್‌ನಲ್ಲಿ ನಡೆದಿತ್ತು.

ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ ಎಂಜಿನಿಯರ್‌ಗೆ ಸಂಬಂಧಿಸಿದ ಇಂತಹುದೇ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಬೊಕಾರೊ ಸ್ಟೀಲ್ ಪ್ಲಾಂಟ್‌ನಲ್ಲಿ ಜೂನಿಯರ್ ಮ್ಯಾನೇಜರ್ ಆಗಿದ್ದ 29 ವರ್ಷದ ವಿನೋದ್ ಕುಮಾರ್ ಎಂಬಾತನನ್ನು ಥಳಿಸಿ, ಪಾಟ್ನಾದ ಪಂಡರಕ್ ಪ್ರದೇಶದಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು. ಈಗ ಮತ್ತೆ ಅಂಥದ್ದೇ ಪ್ರಕರಣವು ನಡೆದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist