ಗುಡಿಸಲಿಗೆ ಬೆಂಕಿ ಬಿದ್ದು ನಾಲ್ವರು ಬಾಲಕಿಯರ ಸಜೀವ ದಹನ.!
Twitter
Facebook
LinkedIn
WhatsApp
ಗುಡಿಸಲಿಗೆ ಬೆಂಕಿ (Fire Accident) ಬಿದ್ದ ಪರಿಣಾಮ ನಾಲ್ವರು ಬಾಲಕಿಯರು ಸಜೀವ ದಹನಗೊಂಡ ದಾರುಣ ಘಟನೆ ಉತ್ತರಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ.
ಅಗ್ನಿ ಅವಘಡದಲ್ಲಿ ಪ್ರಿಯಾಂಶಿ (3), ಮಾನ್ವಿ (6) ಮತ್ತು ನೈನಾ (5) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನೀತು (6) ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ