ಛತ್ತೀಸ್‌ಗಢ ಚುನಾವಣೆಗೂ ಮುನ್ನ ಬಿಜೆಪಿ ನಾಯಕನ ಭೀಕರ ಕೊಲೆ!
ಛತ್ತೀಸ್‌ಗಢ ಚುನಾವಣೆಗೂ ಮುನ್ನ ನಕ್ಸಲೀಯರು ಮತ್ತೊಮ್ಮೆ ದಾಳಿ ಮಾಡುವ ಮೂಲಕ ಭೀತಿ ಹುಟ್ಟಿಸಿದ್ದಾರೆ. ರಾಜ್ಯದಲ್ಲಿ ಎಲ್ಲ ನಿರ್ಬಂಧಗಳ ನಡುವೆಯೂ ನಕ್ಸಲೀಯರು ಬಿಜೆಪಿ ನಾಯಕ ರತನ್ ದುಬೆ ಅವರನ್ನು ಕೊಂದಿದ್ದಾರೆ. ಈ ದಾಳಿಯ ಬಗ್ಗೆ ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಿ ಖಚಿತಪಡಿಸಿದ್ದಾರೆ.
ಮಾಹಿತಿ ಪ್ರಕಾರ ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ರತನ್ ದುಬೆ ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲು ಕೌಶಲನರ್ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಈ ದಾಳಿ ನಡೆದಿದೆ. ಈ ವೇಳೆ ಗಂಭೀರ ಗಾಯಗಳಿಂದ ಅವರು ಸಾವನ್ನಪ್ಪಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಕರಣ ನಾರಾಯಣಪುರದ ಕೌಶಲ್ ನಾರ್ ಗ್ರಾಮದ ಕೊಸಲ್ನಾರ್‌ನಲ್ಲಿ ನಡೆದಿದೆ. ಈ ಘಟನೆಗೆ ಕಾರಣವೇನು ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ರತನ್ ದುಬೆ ಅವರು ಕೌಶಲ್ ನಾರ್ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ನಕ್ಸಲೀಯರು ಅವರನ್ನು ಕೊಂದಿದ್ದಾರೆ. ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ನಡುವೆ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ನಕ್ಸಲೀಯರ ಮೇಲೆ ತೀವ್ರ ನಿಗಾ ಇಡಲಾಗಿದೆ. ಚುನಾವಣಾ ಪ್ರಚಾರದ ವೇಳೆ ನಕ್ಸಲೀಯರು ರಾಜಕೀಯ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕೆಲವು ದಿನಗಳ ಹಿಂದೆ ಮೊಹ್ಲಾ-ಮಾನ್ಪುರ್-ಅಂಬಗಢ ಚೌಕಿ ಜಿಲ್ಲೆಯ ಔಂಧಿ ಪ್ರದೇಶದ ನಕ್ಸಲ್ ಪೀಡಿತ ಗ್ರಾಮ ಸರ್ಖೇಡಾದಲ್ಲಿ ಬಿಜೆಪಿ ಮುಖಂಡ ಬಿರ್ಜುರಾಮ್ ತಾರಾಮ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದುರ್ಗಾಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದಾಳಿ ನಡೆದಿತ್ತು.
ಈ ದಾಳಿಗೆ ಸಂಬಂಧಿಸಿದಂತೆ ಈ ಪ್ರದೇಶದಲ್ಲಿ ದುರ್ಗಾ ಮೂರ್ತಿ ಪ್ರತಿಷ್ಠಾಪನೆಯನ್ನು ನಕ್ಸಲೀಯರು ವಿರೋಧಿಸಿದ್ದರು ಎಂದು ಹೇಳಲಾಗಿದೆ. ಆದರೆ ಬಿರ್ಜುರಾಮ್ ಇದಕ್ಕೆ ಒಪ್ಪಲಿಲ್ಲ, ಅವರು ದುರ್ಗಾ ಪೂಜೆಯನ್ನು ಪ್ರಾರಂಭಿಸಿದರು. ಹೀಗಾಗಿ ಅವರ ಮೇಲೆ ನಕ್ಸಲೀಯರು ದಾಳಿ ಮಾಡಿದರು. ಆಯುಧಗಳೊಂದಿಗೆ ಕೆಲವರು ಮನೆಗೆ ನುಗ್ಗಿ ಈ ಹತ್ಯೆ ನಡೆಸಿದ್ದರು.