ಅಕಾಡೆಮಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡದ ಸರಕಾರ. ಲೋಕಸಭೆ ಚುನಾವಣೆ ಬಂದರೆ ಮತ್ತೆ ವಿಳಂಬ?
Twitter
Facebook
LinkedIn
WhatsApp
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆದರೂ ವಿವಿಧ ಅಕಾಡೆಮಿ ಗಳಿಗೆ ಇನ್ನೂ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಕೊನೆಗೊಂಡಿಲ್ಲ.
ರಾಜ್ಯದಲ್ಲಿ 10ಕ್ಕೂ ಅಧಿಕ ಅಕಾಡೆಮಿ ಗಳಿವೆ. ಆದರೆ ಅವುಗಳು ಸಾರ್ವಜನಿಕವಾಗಿ ಕಲೆ ಸಂಸ್ಕೃತಿ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಕೆಲಸ ಮಾಡಬೇಕಾಗಿತ್ತು. ಆದರೆ ಸರಕಾರ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಮಾಡದೆ ಕೇವಲ ಆಡಳಿತ ಅಧಿಕಾರಿಯ ಮೂಲಕ ಕೆಲಸ ನಿರ್ವಹಿಸುತ್ತಿರುವುದು ಎಷ್ಟು ಸರಿ ಎಂಬುದನ್ನು ಹಲವಾರು ಸಾಹಿತಿಗಳು, ತಜ್ಞರು ಪ್ರಶ್ನಿಸುತ್ತಿದ್ದಾರೆ.
ಕರಾವಳಿಯ ಮೂಲಗಳಲ್ಲಿ ಹಲವಾರು ಅಕಾಡೆಮಿ ಗಳಿವೆ. ತುಳು, ಕೊಂಕಣಿ, ಅರೆ ಭಾಷೆ ಸಾಹಿತ್ಯ, ಬ್ಯಾರಿ ಅಕಾಡೆಮಿಗಳಿಗೆ ಇದುವರೆಗೆ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಇನ್ನು ಲೋಕಸಭಾ ಚುನಾವಣೆ ಹತ್ತಿರ ಬಂದರೆ ಮತ್ತೆ ನೇಮಕಗೊಳ್ಳುವ ಪ್ರಕ್ರಿಯೆ ನೆನೆಗುದಿಗೆ ಬೀಳುವ ಸಂಭವ ಅಧಿಕ ಎಂಬ ಮಾಹಿತಿ ಹೊರ ಬಂದಿದೆ