ಮಲ್ಪೆ ಮೀನುಗಾರಿಕಾ ಬಂದರಲ್ಲಿ ಸ್ಕೂಟಿ ಸಮೇತ ನೀರಿಗೆ ಬಿದ್ದ ಮೀನುಗಾರ ಮೃತ್ಯು..!
ಉಡುಪಿ: ಮಲ್ಪೆ ಬಂದರಲ್ಲಿ (Malpe Beach) ಹೋಗುತ್ತಿದ್ದ ಮೀನುಗಾರ ಸ್ಕೂಟಿ ಸಮೇತ ನೀರಿಗೆ ಬಿದ್ದು ಮೃತಪಟ್ಟಿರುವ (Drowned in sea) ದಾರುಣ ಘಟನೆ ನಡೆದಿದೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ತಮಿಳುನಾಡು ಮೂಲದ ಮೀನುಗಾರ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಮೀನುಗಾರ ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಆತನ ಹೆಸರು ಯಾವುದು ತಿಳಿದು ಬಂದಿಲ್ಲ. ಅಚಾನಕ್ ಆಗಿ ನೀರಿಗೆ ಬಿದ್ದು ಮುಳುಗುತ್ತಿದ್ದ ಮೀನುಗಾರನ ರಕ್ಷಿಸಲು ಮುಳುಗು ತಜ್ಞ ಈಶ್ವರ್ ಮಲ್ಪೆ ಮುಂದಾಗಿದ್ದಾರೆ.
ಆದರೆ ಗಂಟೆಗಳ ಬಳಿಕ ಸ್ಕೂಟಿ ಹಾಗೂ ಮೃತಪಟ್ಟ ಮೀನುಗಾರನ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೇನ್ ಬಳಸಿ ಸ್ಕೂಟಿ ಮತ್ತು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಮಲ್ಪೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ವರ್ಷದ ಕೂಸು!
ಚಿತ್ರದುರ್ಗ: ಆಕಸ್ಮಿಕವಾಗಿ ತೊಟ್ಟಿಗೆ ಬಿದ್ದ ಮಗುವೊಂದು ನೀರಲ್ಲಿ ಮುಳುಗಿ (Drowned in water tank) ಮೃತಪಟ್ಟಿದೆ. ಚಿತ್ರದುರ್ಗ ತಾಲೂಕಿನ ಹಳಿಯಾರು ಗ್ರಾಮದಲ್ಲಿ ನಡೆದಿದೆ. ಒಂದೂವರೆ ವರ್ಷದ ಪಿಯಾ ಮೃತ ದುರ್ದೈವಿ.
ಮಹಾರಾಷ್ಟ್ರ ಮೂಲದ ದತ್ತಾ ಜಾಧವ್ ದಂಪತಿ ಚಿತ್ರದುರ್ಗದ ಹಳಿಯೂರಲ್ಲಿ ವಾಸವಿದ್ದರು. ಜಾಧವ್ ಇದ್ದಿಲು ಸುಡುವ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದರು. ದಂಪತಿಗೆ ಮುದ್ದಾದ ಒಂದೂವರೆ ವರ್ಷದ ಮಗುವಿತ್ತು. ಸುಖಸಂಸಾರಕ್ಕೆ ಕಿಚ್ಚು ಹಚ್ಚುವಂತಿತ್ತು. ಆದರೆ ಮುದ್ದಾದ ಮಗಳು ಆಟವಾಡುತ್ತಾ ತೆರೆದಿದ್ದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆ.
ತುಂಬಾ ಸಮಯ ಪಿಯಾ ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಪಿಯಾಳನ್ನು ಕಂಡಿದ್ದಾರೆ. ಕೂಡಲೇ ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅದಾಗಲೇ ಪಿಯಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.