ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯಲ್ಲಿ ಅಂತ್ಯ...!
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ಸಾಜಿದ್ (22) ಕೊಲೆಯಾದ ಯುವಕನಾಗಿದ್ದಾನೆ. ಮೈಸೂರು ರಸ್ತೆಯಲ್ಲಿರುವ ಸಾಜಿದ್ ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್ಗೆ ಬೈಕ್ ಸರ್ವಿಸ್ ಮಾಡಲೆಂದು ಸಾಜೀದ್ ಆಗಮಿಸಿದ್ದನು. ಈ ವೇಳೆ ಇಬ್ಬರ ನುಡವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.
ಜಗಳದ ವೇಳೆ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜಿದ್ಗೆ ಇರಿದಿದ್ದಾನೆ. ಕೂಡಲೇ ಸಾಜಿದ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕೃತ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿನನ್ನು ಬಂಧಿಸಿದ್ದಾರೆ.
ಮಲಗಿದ್ದವರ ಮೇಲೆ ಹರಿದ ಬೊಲೆರೋ; ಒಬ್ಬ ಸಾವು, ಮತ್ತೊಬ್ಬ ಗಂಭೀರ…!
ಚಿಕ್ಕಬಳ್ಳಾಪುರ: ಮಲಗಿದ್ದವರ ಮೇಲೆ ಬೊಲೆರೋ ವಾಹನ ಹರಿದಿದೆ. ಪರಿಣಾಮ ಸ್ಥಳದಲ್ಲೇ ಒಬ್ಬ ಮೃತಪಟ್ಟರೆ, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ನೆಂಟಕುಂಟಪಲ್ಲಿ ಗ್ರಾಮದಲ್ಲಿ ಈ ಘಟನೆ (Road Accident) ನಡೆದಿದೆ. ಆರೀಫುಲ್ಲಾ ಮೃತ ದುರ್ದೈವಿ. ನರಸಿಂಹಪ್ಪ ಎಂಬುವವರ ಕಾಲು ಮುರಿದಿದೆ.
ಆರೀಫುಲ್ಲಾ ಮತ್ತು ನರಸಿಂಹಪ್ಪ ಹಸು ಕರು ಹಾಕುತ್ತದೆ ಎಂದು ರಸ್ತೆ ಬದಿಯಲ್ಲಿ ಕಾದು ಕುಳಿತಿದ್ದರು. ಈ ವೇಳೆ ಹಾಗೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಬಂದ ಚಾಲಕ ಏಕಾಏಕಿ ಮಲಗಿದ್ದವರ ಮೇಲೆ ಹತ್ತಿಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಆರೀಫುಲ್ಲಾ ಮೃತಪಟ್ಟರೆ, ನರಸಿಂಹಪ್ಪ ಗಾಯಗೊಂಡಿದ್ದಾರೆ. ಗಾಯಾಳು ನರಸಿಂಹಪ್ಪನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಾಲಕ ಗಂಗರಾಜು ಬುಲೆರೋ ವಾಹನ ಬಿಟ್ಟು ಪರಾರಿ ಆಗಿದ್ದಾನೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದ್ದು, ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.