ಕೆಳಗೆ ನಿಂತು ಟ್ರ್ಯಾಕ್ಟರ್ ಆನ್ ಮಾಡಿದ ರೈತ ; ಮೈಮೇಲೆ ಟ್ರ್ಯಾಕ್ಟರ್ ಹರಿದು ಸಾವು!
ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ (Tractor) ಆನ್ ಮಾಡಿದ ಹಿನ್ನೆಲೆ ಮೈಮೇಲೆ ಟ್ರ್ಯಾಕ್ಟರ್ ಹರಿದು ರೈತ (Farmer) ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ನವೀನ್ ಎಚ್.ಟಿ (41) ಮೃತಪಟ್ಟ ರೈತ. ಇವರು ಅಡಿಕೆ ಸುಲಿಯುವ ಯಂತ್ರಕ್ಕೆ ಹಾಕುವ ಸಲುವಾಗಿ ಟ್ರ್ಯಾಕ್ಟರ್ ನಿಲ್ಲಿಸಿದ್ದರು. ಬಳಿಕ ಕೆಳಗೆ ನಿಂತುಕೊಂಡು ಟ್ರ್ಯಾಕ್ಟರ್ ಆನ್ ಮಾಡಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಮೈಮೇಲೆ ಹರಿದು ರೈತ ಸಾವನ್ನಪ್ಪಿದ್ದಾರೆ.
ಘಟನೆಯಿಂದ ರೈತ ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ರೈತನ ಮೇಲೆ ಟ್ರ್ಯಾಕ್ಟರ್ ಹರಿದ ದೃಶ್ಯ ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು 7 ಲಕ್ಷ ಪಡೆದು ಎಸ್ಕೇಪ್!
ಬೆಂಗಳೂರು: ಬಿಟ್ಟು ಹೋದ ಗಂಡನನ್ನು ಜೊತೆಯಾಗಿರುವಂತೆ ಮಾಡುತ್ತೇನೆ ಎಂದು ಮಹಿಳೆಯೊಬ್ಬರಿಗೆ ವಂಚಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಫಾತಿಮಾ ಎಂಬ ಮಹಿಳೆಗೆ ಹಜರತ್ ನೂರ್ ಮೊಹಮ್ಮದ್ ಎಂಬಾತ ವಂಚಿಸಿರುವುದು ಬಯಲಾಗಿದೆ. ಈತ ಫಾತಿಮಾ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ಹಣ ಪಡೆದು ಸಿನಿಮೀಯ ಶೈಲಿಯಲ್ಲಿ ವಂಚನೆ ಮಾಡಿದ್ದಾನೆ.
ನೀರಾವರಿ ಇಲಾಖೆಯಲ್ಲಿ ಎಫ್‍ಡಿಎ ಅಧಿಕಾರಿಯಾಗಿರೋ ಫಾತಿಮಾ ಪತಿ ಬಿಟ್ಟೋಗಿದ್ದು, ಮೂರು ವರ್ಷದ ಮಗುವಿನ ಕೈಗೆ ಗಾಯದ ಸಮಸ್ಯೆಯಿತ್ತು. ಪಕ್ಕದ ಮನೆಯರ ಮಾತು ಕೇಳಿ ನಾಗಮಂಗಲದಲ್ಲಿರೋ ಹಜರತ್ ನೂರ್ ಸಂಪರ್ಕ ಮಾಡಿ ಔಷಧಿ ಕೊಡಿಸಿದ್ರು. ಕಾಕತಾಳಿಯ ಎಂಬಂತೆ ಮಗುವಿಗೆ ಕೈ ಒಂದು ವಾರದಲ್ಲಿ ಸರಿಹೋಗಿತ್ತು. ಇದರಿಂದ ಹಜರತ್ ನನ್ನ ಸಂಪೂರ್ಣ ನಂಬಿದ್ದ ಫಾತಿಮಾ, ಪತಿಯನ್ನ ತನ್ನ ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದಳು.
ಗಂಡ ನಿನ್ನ ಜೊತೆಗೇ ಇರುವಂತೆ ಮಾಡ್ತೀನಿ ಅಂತ ಹಜರತ್ ನೂರ್ ಒಂದು ಲಕ್ಷ ಹಣ ಪಡೆದಿದ್ದ. ಆ ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಏಳು ಲಕ್ಷ ಪಡೆದಿದ್ದ. ಪ್ರತಿ ತಿಂಗಳು ಇಂತಿಷ್ಟು ಹಣ ಕಟ್ಟುತ್ತೇನೆ ಅಂತೇಳಿ ಹಣ ಕೈಗೆ ಬಂದ ತಕ್ಷಣ ಎಸ್ಕೇಪ್ ಆಗಿದ್ದಾನೆ. ಸದ್ಯ ವಂಚನೆ ಕೇಸ್‍ನಲ್ಲಿ ಶಿರಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhanasoudha Police Station) ಪ್ರಕರಣ ದಾಖಲಾಗಿದೆ.