ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡೆ ; ಸಂದರ್ಶನದಲ್ಲಿ ನೋವು ಹಂಚಿಕೊಂಡ ನಟಿ ಊರ್ವಶಿ!

Twitter
Facebook
LinkedIn
WhatsApp
ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡೆ ; ಸಂದರ್ಶನದಲ್ಲಿ ನೋವು ಹಂಚಿಕೊಂಡ ನಟಿ ಊರ್ವಶಿ!

ರ್ವಶಿ (Urvashi) 80ರ ದಶಕದ ಸ್ಟಾರ್ ನಟಿ. ಪಂಚಭಾಷಾ ತಾರೆ. ಎಲ್ಲಾ ಭಾಷೆ ಸ್ಟಾರ್ಸ್ ಜೊತೆ ನಟಿಸಿದ ಕ್ರೆಡಿಟ್ಟು. ಇಷ್ಟೆಲ್ಲ ಹೆಸರು ಮಾಡಿದ್ದ ಊರ್ವಶಿ ಕೇವಲ ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡರು. ಮಗಳಿಂದ ದೂರವಾದರು. ಏನಾಯಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ನಟಿ ಊರ್ವಶಿ ಅವರೇ ಹೆಳಿದ್ದಾರೆ.

ಡಾ.ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ಸೇರಿದಂತೆ ಅಂದಿನ ಎಲ್ಲಾ ಸ್ಟಾರ್ಸ್ ಜೊತೆ ನಟಿಸಿದ್ದರು ಊರ್ವಶಿ. ಶ್ರಾವಣ ಬಂತು, ನಾನು ನನ್ನ ಹೆಂಡ್ತಿ ಸೂಪರ್ ಹಿಟ್ ಆಗಿದ್ದವು. ಅದೇ ಊರ್ವಶಿ ಬದುಕು ಮೂರಾಬಟ್ಟೆಯಾಗಿದ್ದು ಯಾರಿಗೂ ಗೊತ್ತಿಲ್ಲ. ಎರಡನೇ ಮದುವೆ ಮಾಡಿಕೊಂಡಿದ್ದೂ ಅರಿವಿಲ್ಲ. ಇದನ್ನು ಸ್ವತಃ ಊರ್ವಶಿ ಹೇಳಿಕೊಂಡಿದ್ದಾರೆ. ಕುಡಿತದ ಚಟದಿಂದ ಹೇಗೆ ಸಂಸಾರ ಹಾಳು ಮಾಡಿಕೊಂಡೆ ಎನ್ನುವುದನ್ನು ತಿಳಿಸಿದ್ದಾರೆ. 

ಮಲಯಾಳಂ ನಟ ಮನೋಜ್ (Actor Manoj) ಜೊತೆ ಮದುವೆಯಾಯಿತು. ಅವರ ಮನೆಯಲ್ಲಿ ಎಲ್ಲರಿಗೂ ಕುಡಿತದ ಹವ್ಯಾಸ. ನನಗೂ ಬಲವಂತ ಮಾಡಿದರು. ಮೊದಲು ನಿರಾಕರಿಸಿದೆ. ನಂತರ ಒಗ್ಗಿದೆ. ನಂತರ ಕುಡಿತಕ್ಕೆ ದಾಸಳಾದೆ. ಅದೇ ನಮ್ಮಿಬ್ಬರ ಮನಸ್ತಾಪಕ್ಕೆ ಕಾರಣವಾಯಿತು. ಡಿವೋರ್ಸ್ (Divorce) ಆಯಿತು. ಮಗಳು ತೇಜ ಲಕ್ಷ್ಮಿಯನ್ನು ನನ್ನಿಂದ ದೂರ ಮಾಡಿದರು. ಆರು ವರ್ಷದ ನಂತರ ಶಿವಪ್ರಸಾದ್ (Shivaprasad) ಜೊತೆ ಲಗ್ನವಾಯಿತು. ಇಶಾನ್ ಮಗನಿದ್ದಾನೆ. ಈಗ ಸುಖಿ ಸಂಸಾರ.

ಇದು ನೋಡಿ ಬಣ್ಣದ ಲೋಕದ ಅಸಲಿ ಕಥನ. ಹೊರಗಡೆ ನಮಗೇನೂ ಗೊತ್ತಾಗಲ್ಲ. ಆದರೆ ಒಳಗೆ ನೋಡಿದರೆ ಇನ್ನೇನು ಅನಾಹುತ. ಅದಕ್ಕೆ ಊರ್ವಶಿ ಬದುಕು ಸಾಕ್ಷಿ. 700 ನೂರು ಸಿನಿಮಾ ಮಡಿರುವ ನಟಿ, ಸ್ಟಾರ್‌ ನಟರ ಜೊತೆ ಅಭಿನಯ. ಅನೇಕ ಪ್ರಶಸ್ತಿ. ಎಲ್ಲ ಇದ್ದೂ ಕೇವಲ ಕುಡಿತ ಮೊದಲ ಸಂಸಾರಕ್ಕೆ ಹುಳಿ ಹಿಂಡಿತು. ಈಗಲಾದರೂ ನಗುತ್ತಿದ್ದಾರಲ್ಲ ಅದೇ ನೆಮ್ಮದಿ. ಆದರೆ ಆರದ ಗಾಯ ಆಗಾಗ ಕಾಡುವುದು ಸತ್ಯ.
ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

ಬಿಗ್ ಬಾಸ್ (Bigg Boss) ರಿಯಾಲಿಟಿ ಶೋಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಬಾರಿ ಅದ್ದೂರಿಯಾಗಿ ಟಿವಿ ಪರದೆಗೆ ತರಲು ತಾಲೀಮು ನಡೆಯುತ್ತಿದೆ. ಕನ್ನಡದ ಬಿಗ್ ಬಾಸ್ 10ರ ಸೀಸನ್ ಬರುತ್ತಿರುವ ಹಲವು ವಿಶೇಷಗಳಿದೆ. ಇದರ ಮಧ್ಯೆ ಬಿಗ್ ಬಾಸ್ ಪ್ರೋಮೋ ಶೂಟ್‌ಗೆ ಮತ್ತು ಶೋ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಈ ಸೀಸನ್‌ನಲ್ಲಿ ಒಟಿಟಿಗೆ ಅಂತ್ಯ ಹಾಡಿ ಬಿಗ್ ಬಾಸ್ ಕನ್ನಡದ ಸೀಸನ್ 10ಗೆ ಮಸ್ತ್ ಆಗಿ ಪ್ಲ್ಯಾನ್ ನಡೆಯುತ್ತಿದೆ. ಇದೇ ಸೆಪ್ಟೆಂಬರ್ 10ರಂದು ಬಿಗ್ ಬಾಸ್ ಪ್ರೋಮೋ ಶೂಟ್ ನಡೆಯಲಿದೆ. ಸಿನಿಮಾ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ನಟ, ನಿರೂಪಕ ಸುದೀಪ್(Kichcha Sudeep) ಭಾಗಿಯಾಗ್ತಿದ್ದಾರೆ.‌ 

ವಾಹಿನಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸೆ.15ರಂದು ಬಿಗ್ ಬಾಸ್ ಪ್ರಸಾರ ಯಾವಾಗ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. 10ನೇ ಸೀಸನ್ ಹೊಸ ರೂಪದಲ್ಲಿ ಹೊಸ ವೈಖರಿಯಲ್ಲಿ ಟಿವಿ ಪರದೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.

ಇನ್ನೂ ಈ ಬಾರಿ ಬಿಗ್ ಬಾಸ್ ಮನೆಯ ಆಟದಲ್ಲಿ ನಾಗಿಣಿ 2 ನಟಿ ನಮ್ರತಾ ಗೌಡ(Namratha Gowda), ಸೋಷಿಯಲ್ ಮೀಡಿಯಾ ಸ್ಟಾರ್ ಭೂಮಿಕಾ‌ ಬಸವರಾಜ್, ನಟ ಸುನೀಲ್ ರಾವ್, ಕೆಜಿಎಫ್ ನಟಿ ರೂಪಾ ರಾಯಪ್ಪ (Roopa Rayappa) ಸ್ಪರ್ಧಿಗಳಾಗಿ ಭಾಗವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist