ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡೆ ; ಸಂದರ್ಶನದಲ್ಲಿ ನೋವು ಹಂಚಿಕೊಂಡ ನಟಿ ಊರ್ವಶಿ!
ಊರ್ವಶಿ (Urvashi) 80ರ ದಶಕದ ಸ್ಟಾರ್ ನಟಿ. ಪಂಚಭಾಷಾ ತಾರೆ. ಎಲ್ಲಾ ಭಾಷೆ ಸ್ಟಾರ್ಸ್ ಜೊತೆ ನಟಿಸಿದ ಕ್ರೆಡಿಟ್ಟು. ಇಷ್ಟೆಲ್ಲ ಹೆಸರು ಮಾಡಿದ್ದ ಊರ್ವಶಿ ಕೇವಲ ಕುಡಿತದ ಚಟದಿಂದ ಸಂಸಾರವನ್ನೇ ಹಾಳು ಮಾಡಿಕೊಂಡರು. ಮಗಳಿಂದ ದೂರವಾದರು. ಏನಾಯಿತು ಎಂದು ಇತ್ತೀಚಿನ ಸಂದರ್ಶನದಲ್ಲಿ ನಟಿ ಊರ್ವಶಿ ಅವರೇ ಹೆಳಿದ್ದಾರೆ.
ಡಾ.ರಾಜ್, ವಿಷ್ಣು, ಅಂಬರೀಶ್, ರವಿಚಂದ್ರನ್ ಸೇರಿದಂತೆ ಅಂದಿನ ಎಲ್ಲಾ ಸ್ಟಾರ್ಸ್ ಜೊತೆ ನಟಿಸಿದ್ದರು ಊರ್ವಶಿ. ಶ್ರಾವಣ ಬಂತು, ನಾನು ನನ್ನ ಹೆಂಡ್ತಿ ಸೂಪರ್ ಹಿಟ್ ಆಗಿದ್ದವು. ಅದೇ ಊರ್ವಶಿ ಬದುಕು ಮೂರಾಬಟ್ಟೆಯಾಗಿದ್ದು ಯಾರಿಗೂ ಗೊತ್ತಿಲ್ಲ. ಎರಡನೇ ಮದುವೆ ಮಾಡಿಕೊಂಡಿದ್ದೂ ಅರಿವಿಲ್ಲ. ಇದನ್ನು ಸ್ವತಃ ಊರ್ವಶಿ ಹೇಳಿಕೊಂಡಿದ್ದಾರೆ. ಕುಡಿತದ ಚಟದಿಂದ ಹೇಗೆ ಸಂಸಾರ ಹಾಳು ಮಾಡಿಕೊಂಡೆ ಎನ್ನುವುದನ್ನು ತಿಳಿಸಿದ್ದಾರೆ.
ಮಲಯಾಳಂ ನಟ ಮನೋಜ್ (Actor Manoj) ಜೊತೆ ಮದುವೆಯಾಯಿತು. ಅವರ ಮನೆಯಲ್ಲಿ ಎಲ್ಲರಿಗೂ ಕುಡಿತದ ಹವ್ಯಾಸ. ನನಗೂ ಬಲವಂತ ಮಾಡಿದರು. ಮೊದಲು ನಿರಾಕರಿಸಿದೆ. ನಂತರ ಒಗ್ಗಿದೆ. ನಂತರ ಕುಡಿತಕ್ಕೆ ದಾಸಳಾದೆ. ಅದೇ ನಮ್ಮಿಬ್ಬರ ಮನಸ್ತಾಪಕ್ಕೆ ಕಾರಣವಾಯಿತು. ಡಿವೋರ್ಸ್ (Divorce) ಆಯಿತು. ಮಗಳು ತೇಜ ಲಕ್ಷ್ಮಿಯನ್ನು ನನ್ನಿಂದ ದೂರ ಮಾಡಿದರು. ಆರು ವರ್ಷದ ನಂತರ ಶಿವಪ್ರಸಾದ್ (Shivaprasad) ಜೊತೆ ಲಗ್ನವಾಯಿತು. ಇಶಾನ್ ಮಗನಿದ್ದಾನೆ. ಈಗ ಸುಖಿ ಸಂಸಾರ.
ಬಿಗ್ ಬಾಸ್ ಫ್ಯಾನ್ಸ್ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್
ಬಿಗ್ ಬಾಸ್ (Bigg Boss) ರಿಯಾಲಿಟಿ ಶೋಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಬಾರಿ ಅದ್ದೂರಿಯಾಗಿ ಟಿವಿ ಪರದೆಗೆ ತರಲು ತಾಲೀಮು ನಡೆಯುತ್ತಿದೆ. ಕನ್ನಡದ ಬಿಗ್ ಬಾಸ್ 10ರ ಸೀಸನ್ ಬರುತ್ತಿರುವ ಹಲವು ವಿಶೇಷಗಳಿದೆ. ಇದರ ಮಧ್ಯೆ ಬಿಗ್ ಬಾಸ್ ಪ್ರೋಮೋ ಶೂಟ್ಗೆ ಮತ್ತು ಶೋ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಈ ಸೀಸನ್ನಲ್ಲಿ ಒಟಿಟಿಗೆ ಅಂತ್ಯ ಹಾಡಿ ಬಿಗ್ ಬಾಸ್ ಕನ್ನಡದ ಸೀಸನ್ 10ಗೆ ಮಸ್ತ್ ಆಗಿ ಪ್ಲ್ಯಾನ್ ನಡೆಯುತ್ತಿದೆ. ಇದೇ ಸೆಪ್ಟೆಂಬರ್ 10ರಂದು ಬಿಗ್ ಬಾಸ್ ಪ್ರೋಮೋ ಶೂಟ್ ನಡೆಯಲಿದೆ. ಸಿನಿಮಾ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ನಟ, ನಿರೂಪಕ ಸುದೀಪ್(Kichcha Sudeep) ಭಾಗಿಯಾಗ್ತಿದ್ದಾರೆ.
ವಾಹಿನಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸೆ.15ರಂದು ಬಿಗ್ ಬಾಸ್ ಪ್ರಸಾರ ಯಾವಾಗ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. 10ನೇ ಸೀಸನ್ ಹೊಸ ರೂಪದಲ್ಲಿ ಹೊಸ ವೈಖರಿಯಲ್ಲಿ ಟಿವಿ ಪರದೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.