ಹೋಟೆಲಿನಿಂದ ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದ ಆಹಾರದಲ್ಲಿ ಸತ್ತ ಇಲಿ ಪತ್ತೆ...!
ಉತ್ತರಪ್ರದೇಶದ ವಕೀಲ ರಾಜೀವ್ ಶುಕ್ಲಾ(35) ಕೆಲಸದ ವಿಚಾರವಾಗಿ ಮುಂಬೈಗೆ ಬಂದಿದ್ದರು. ಶುದ್ಧ ಸಸ್ಯಹಾರಿಯಾಗಿದ್ದರಿಂದ ಮುಂಬೈನ ಬಾರ್ಬೆಕ್ಯು ನೇಷನ್ ಹೋಟೆಲಿನಿಂದ ಆನ್ಲೈನ್ ಮೂಲಕ ಪುಡ್ ಆರ್ಡರ್ ಮಾಡಿದ್ದಾರೆ. ತುಂಬಾ ಹಸಿವಾಗಿದ್ದರಿಂದ ಆಹಾರ ಬಂದ ಕೂಡಲೇ ಎರಡು ತುತ್ತು ಸವಿದ್ದಿದ್ದಾರೆ. ಇನ್ನೇನು ದಾಲ್ ಬಡಿಸುವಷ್ಟರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಜನವರಿ 8, ರಂದು ಸಂಭವಿಸಿದ ಈ ಭಯಾನಕ ಘಟನೆಯನ್ನು ರಾಜೀವ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗುತ್ತಿದ್ದಂತೆ ತಕ್ಷಣವೇ ಬಾರ್ಬೆಕ್ಯು ನೇಷನ್ ಅವರಿಗೆ ಇಮೇಲ್ ಮೂಲಕ ಸೂಚನೆ ನೀಡಿದ್ದಾರೆ. ಇದಲ್ಲದೇ ಈಗಾಗಲೇ ಎರಡು ತುತ್ತು ಅಹಾರ ಸೇವಿಸಿದ್ದರಿಂದ ವಾಂತಿ ವಾಕರಿಕೆ ಪ್ರಾರಂಭವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
I Rajeev shukla (pure vegetarian) from prayagraj visited Mumbai, on 8th Jan'24 night ordered veg meal box from BARBEQUE NATION, worli outlet that a contained dead mouse, hospitalised for 75 plus hours. complaint has not been lodged at nagpada police station yet.
— rajeev shukla (@shukraj) January 14, 2024
Please help pic.twitter.com/7iaZmkkfRf
ಸದ್ಯ ತನ್ನ ಭಯಾನಕ ಅನುಭವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಹೋಟೆಲ್ ,ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
500 Rupee Note: 500ರ ನೋಟಿನಲ್ಲಿ ಗಾಂಧಿ ಬದಲು ಶ್ರೀರಾಮನ ಫೋಟೋ; ಪೋಸ್ಟ್ ವೈರಲ್
ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ದಿನ ಸಮೀಪಿಸುತ್ತಿದ್ದಂತೆ ಗಾಂಧಿ ಬದಲು ಶ್ರೀರಾಮನ ಫೋಟೋ ಇರುವ 500 ರೂ ಮುಖ ಬೆಲೆಯ ನೋಟುಗಳು ಎಲ್ಲೆಡೆ ವೈರಲ್ ಆಗಿವೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ. 500 ನೋಟುಗಳಲ್ಲಿ ಗಾಂಧೀಜಿಯ ಬದಲು ಶ್ರೀರಾಮನ ಚಿತ್ರ ಮುದ್ರಿಸಲಾಗುವುದು ಎಂಬ ಪ್ರಚಾರ ಜೋರಾಗಿದೆ.ಇದಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದ್ದು, ಗಾಂಧೀಜಿಯವರ ‘ಸ್ವಚ್ಛ ಭಾರತ’, ಬದಲಿಗೆ ಭಗವಾನ್ ರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿರುವುದನ್ನು ಕಾಣಬಹುದು.
500ರ ನೋಟಿನಲ್ಲಿ ಗಾಂಧಿ ಬದಲು ಶ್ರೀರಾಮನ ಫೋಟೋ ಹಾಕಿರುವ ನೋಟಿನ ಪೋಟೋವನ್ನು ‘X’ಬಳಕೆದಾರರಾದ @TenthPlanet1 ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಈ ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಆರ್‌ಬಿಐ ಯಾವುದೇ ಮಾಹಿತಿ ಪ್ರಕಟಿಸಿಲ್ಲರುವುದರಿಂದ ಇದು ಫೇಕ್ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದು ಎಡಿಟ್ ಮಾಡಲಾಗುರುವ ಫೋಟೋ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಬರೆದುಕೊಂಡಿದ್ದಾರೆ.
NEW 500 NOTES WILL BE ISSUED ON 22/01/2024
— 😇 ✍lαthα αѕhσkrαj 🇮🇳 (@TenthPlanet1) January 16, 2024
நிஜமா? 🤔🤔🤔🤔 pic.twitter.com/peiCwlr9oZ