ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

18 ದಿನದ ಬಾಕಿ ಸಂಬಳ ಕೊಡಿ ಮೇಡಂ ಎಂದು ದಲಿತ ಸೇಲ್ಸ್‌ ಮ್ಯಾನೇಜರ್‌ ಕೇಳಿದ್ದಕ್ಕೆ ತನ್ನ ಬೂಟು ನೆಕ್ಕಿಸಿ ಹಲ್ಲೆ ನಡೆಸಿದ ಮಹಿಳಾ ಉದ್ಯಮಿ !

Twitter
Facebook
LinkedIn
WhatsApp
18 ದಿನದ ಬಾಕಿ ಸಂಬಳ ಕೊಡಿ ಮೇಡಂ ಎಂದು ದಲಿತ ಸೇಲ್ಸ್‌ ಮ್ಯಾನೇಜರ್‌ ಕೇಳಿದ್ದಕ್ಕೆ ತನ್ನ ಬೂಟು ನೆಕ್ಕಿಸಿ ಹಲ್ಲೆ ನಡೆಸಿದ ಮಹಿಳಾ ಉದ್ಯಮಿ !

ಗಾಂಧಿನಗರ: ಒಂದು ಕಂಪನಿಯಲ್ಲಿ ಹಲವು ವರ್ಷದರೆ ಮಾಡಿದರೆ ಆ ಕಂಪನಿಯಲ್ಲಿ ವಿವಿಧ ಭಾವನೆಗಳು ಇರುತ್ತವೆ. ನಾವು ಕೆಲಸ ಮಾಡಿದ ಕಂಪನಿ ಎಂಬ ಭಾವನೆ ಇರುತ್ತದೆ. ಹಾಗೆಯೇ, ಕಂಪನಿ ಬಿಟ್ಟು ಹೋದಾಗ, ಇದುವರೆಗೆ ದುಡಿದಿದ್ದಕ್ಕೆ ಎಲ್ಲ ಹಣ (ಫೈನಲ್‌ ಸೆಟಲ್‌ಮೆಂಟ್)‌ ಬರಲಿ ಎಂಬ ಆಸೆಯೂ ಇರುತ್ತದೆ. ಹೀಗೆ, ಗುಜರಾತ್‌ನಲ್ಲಿ ಸೇಲ್ಸ್‌ ಮ್ಯಾನೇಜರ್‌ ಒಬ್ಬರು ತಾವು ಕೆಲಸ ಮಾಡಿದ ಕಂಪನಿಯ ಬಾಸ್‌ಗೆ, “ಸಂಬಳ ಕೊಡಿ ಮೇಡಂ” ಎಂದು ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳಾ ಉದ್ಯಮಿಯು, ಸೇಲ್ಸ್‌ ಮ್ಯಾನೇಜರ್‌ನಿಂದ ತಮ್ಮ ಬೂಟು ನೆಕ್ಕಿಸಿದ್ದಾರೆ. ಐವರನ್ನು ಛೂಬಿಟ್ಟು ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸೇಲ್ಸ್‌ ಮ್ಯಾನೇಜರ್‌ ದಲಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಗುಜರಾತ್‌ನ ಮೊರ್ಬಿಯಲ್ಲಿರುವ ಸೆರಾಮಿಕ್‌ ಕಂಪನಿಯ ಮುಖ್ಯಸ್ಥೆಯಾಗಿರುವ ವಿಭೂತಿ ಪಟೇಲ್‌ ಎಂಬುವರು ದಲಿತ ಸೇಲ್ಸ್‌ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿಸಿದ್ದಾರೆ. ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ, ನೀಲೇಶ್‌ ದಲ್ಸಾನಿಯಾ ಅವರನ್ನು ವಿಭೂತಿ ಪಟೇಲ್‌ ವಜಾಗೊಳಿಸಿದ್ದಾರೆ. ಇದಾದ ಬಳಿಕ ನೀಲೇಶ್‌ ದಲ್ಸಾನಿಯಾ ಅವರು ಕಂಪನಿಗೆ ಹೋಗಿ, ಕೆಲಸ ಮಾಡಿದ 18 ದಿನದ ಸಂಬಳ ಕೊಡಿ ಮೇಡಂ ಎಂದು ಮನವಿ ಮಾಡಿದ್ದಾರೆ.

ಸಂಬಳ ಕೇಳಿದ ಕಾರಣ ನೀಲೇಶ್‌ ದಲ್ಸಾನಿಯಾ ಅವರಿಂದ ವಿಭೂತಿ ಪಟೇಲ್‌ ಅವರು ತಮ್ಮ ಬೂಟು ನೆಕ್ಕಿಸಿದ್ದಾರೆ. ಅಲ್ಲದೆ, ಐವರು ಸಹಾಯಕರನ್ನು ಕರೆಸಿ, ನೀಲೇಶ್‌ ದಲ್ಸಾನಿಯಾ ಅವರ ಮೇಲೆ ಹಲ್ಲೆ ಮಾಡಿಸಿದ್ದಾರೆ. ಅಲ್ಲದೆ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ, ಅದರ ವಿಡಿಯೊ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ದೌರ್ಜನ್ಯಕ್ಕೀಡಾದ ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಓಂ ಪಟೇಲ್‌, ರಾಜ್‌ ಪಟೇಲ್‌, ಪರಿಕ್ಷಿತ್‌ ಹಾಗೂ ಡಿ.ಡಿ. ರಾಬರಿ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ರಾಣಿಬಾ ಇಂಡಸ್ಟ್ರೀಸ್‌ ಮುಖ್ಯಸ್ಥೆಯಾಗಿರುವ ವಿಭೂತಿ ಪಟೇಲ್‌ ಅವರಿಂದ ನೀಲೇಶ್‌ ದಲ್ಸಾನಿಯಾ ಅವರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ. ಸದ್ಯ, ನೀಲೇಶ್‌ ದಲ್ಸಾನಿಯಾ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್‌ 5ರಂದು ಬಾಕಿ ಇರುವ ಸಂಬಳ ನೀಡಲಾಗುವುದು ಎಂದು ನೀಲೇಶ್‌ ದಲ್ಸಾನಿಯಾ ಅವರಿಗೆ ಹೇಳಲಾಗಿತ್ತು. ಆದರೆ, ದುಡ್ಡು ಜಮೆಯಾಗದ ಕಾರಣ ನೀಲೇಶ್‌ ದಲ್ಸಾನಿಯಾ ಅವರು ವಿಭೂತಿ ಪಟೇಲ್‌ ಅವರಿಗೆ ಮೆಸೇಜ್‌ ಕೂಡ ಮಾಡಿದ್ದರು. ಇದಕ್ಕೆ ವಿಭೂತಿ ಪಟೇಲ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ