ಉದ್ಯಮಿಗೆ ವಂಚನೆ ಆರೋಪ ಪ್ರಕರಣ ; ಚೈತ್ರಾ ಸಹಿತ ಇಬ್ಬರಿಗೆ ಜಾಮೀನು ಮಂಜೂರು..!
ಬೆಂಗಳೂರು: ಬಿಜೆಪಿ ನಾಯಕ ಹಾಗೂ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಸಹಿತ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ. 7ನೇ ಆರೋಪಿ ಶ್ರೀಕಾಂತ್. ಈ ಇಬ್ಬರಿಗೆ 3ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ
ಚಿಕ್ಕೋಡಿ (ಬೆಳಗಾವಿ): ಬಿಜೆಪಿ (BJP) ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಕಾಂಗ್ರೆಸ್ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ (Channaraja Hattiholi) ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ (Belagavi) ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿರುವ ಅವರು, ಈ ಆರೋಪ ಸತ್ಯಕ್ಕೆ ದೂರವಾಗಿದ್ದಾಗಿದೆ. ಸುಳ್ಳು ಆರೋಪ ಎಂದಿದ್ದಾರೆ. ನಾವು ಹಲ್ಲೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ, ಶಿಸ್ತಿನಿಂದ ರಾಜಕೀಯ ಮಾಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು ಸ್ಪಷ್ಟ ಮಾಹಿತಿ ಹೊರಬರಬೇಕು. ಹಲ್ಲೆ ಯಾರು ಮಾಡಿದರೂ ಎನ್ನುವುದರ ಬಗ್ಗೆ ಫಾರೆನ್ಸಿಕ್ ರಿಪೋರ್ಟ್ ಬರಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ ಎಂದಿದ್ದಾರೆ.
ಪೃಥ್ವಿ ಸಿಂಗ್ ಒಬ್ಬ ನಟೋರಿಯಸ್ ಬ್ಲಾಕ್ ಮೇಲ್ ಮನುಷ್ಯ. ಅವನು ಸುಳ್ಳು ಹೇಳುತ್ತಿದ್ದಾನೆ. ನನ್ನ ಆತ್ನೀಯರು ಅವನ ಮನೆಗೆ ಭೇಟಿಗೆ ಹೋಗಿದ್ದು ನಿಜ. ಅವನ ಮನೆಯಲ್ಲಿ ಮೊದಲು ನಮ್ಮ ಕಚೇರಿಯಿತ್ತು. ಆ ರೆಂಟ್ ಅಗ್ರಿಮೆಂಟ್ ವಾಪಸ್ ಕೇಳಲು ನನ್ನ ಆತ್ಮೀಯರು ಹೋಗಿದ್ದರು. ಇದೇ ಸನ್ನಿವೇಶ ಇಟ್ಟುಕೊಂಡು ಆತ ದೃಶ್ಯ ಹೆಣೆದಿದ್ದಾನೆ. ಇದರಲ್ಲಿ ಯಾವುದೇ ರಾಜಕೀಯ ವೈಷಮ್ಯವಿಲ್ಲ. ಅವನಿಗೆ ರಿಕಾರ್ಡಿಂಗ್ ಮಾಡುವ ಹಾಗೂ ವೀಡಿಯೋ ಮಾಡುವ ಚಟ ಇದೆ. ಅವನು ನನಗೆ ಯಾವುದೇ ರೀತಿಯ ಬ್ಲಾಕ್ ಮೇಲ್ ಮಾಡಿಲ್ಲ. ಏನೋ ಮಾಡಲು ಹೋಗಿ ತಾನೇ ಸಿಕ್ಕಾಕಿಕೊಂಡಿದ್ದಾನೆ ಎಂದರು.
ಬಿಜೆಪಿ ಕಾರ್ಯಕರ್ತರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ವಿಪರೀತಕ್ಕೆ ಹೋಗುತ್ತಿದ್ದು,
— Vijayendra Yediyurappa (@BYVijayendra) December 4, 2023
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಅವರ ಗನ್ಮ್ಯಾನ್ ಮತ್ತು ಇತರ ಸಹಚರರಿಂದ ಗಂಭೀರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಎಸ್ಸಿ ಮೋರ್ಚಾ ಮುಖಂಡ ಪೃಥ್ವಿ… pic.twitter.com/0m4c1tCmLO
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೋಗುವುದು ಹೊಸದೇನಲ್ಲ. ಮಾಧ್ಯಮದಲ್ಲಿ ಬಂದಿದ್ದಕ್ಕೆ ಹೋಗಿ ಭೇಟಿ ನೀಡಿದ್ದಾರೆ. ಅವನು ಸುಳ್ಳು ಹೇಳುತ್ತಿದ್ದಾನೆ. ಅವನಿಗೆ ಬೆಂಬಲ ಕೊಡಬೇಡಿ. ತನಿಖೆ ಮಾಹಿತಿ ಬರೋವರೆಗೆ ತಾಳ್ಮೆಯಿಂದ ಇರುವಂತೆ ಬಿಜೆಪಿ ನಾಯಕರಿಗೆ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.