ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೈಕ್‌ನಿಂದ ಬಿದ್ದ ಬ್ಯಾಗ್‌ನಲ್ಲಿ ಹೆಣ : ಇಬ್ಬರು ಯುವಕರ ಬಂಧನ

Twitter
Facebook
LinkedIn
WhatsApp
ಬೈಕ್‌ನಿಂದ ಬಿದ್ದ ಬ್ಯಾಗ್‌ನಲ್ಲಿ ಹೆಣ : ಇಬ್ಬರು ಯುವಕರ ಬಂಧನ

ಅಯೋಧ್ಯೆ: ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಬೈಕ್‌ನಲ್ಲಿ ಶವ ಸಾಗಿಸುತ್ತಿದ್ದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಬೈಕ್‌ನಲ್ಲಿ ಶವ ಸಾಗಣೆ ವೇಳೆ ಬೈಕ್ ಸ್ಕಿಡ್ ಆಗಿ ಶವ ರಸ್ತೆಗೆ ಬಿದ್ದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಆಯೋಧ್ಯೆ ಬಳಿ ಈ ಘಟನೆ ನಡೆದಿದ್ದು, ಯುವಕರಿಬ್ಬರು ಶವವನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ತುಂಬಿಸಿ ಇಬ್ಬರ ಮಧ್ಯದಲ್ಲಿ ಇರಿಸಿ ಸಾಗಿಸುತ್ತಿದ್ದರು. 

ಅಯೋಧ್ಯೆಯ(Ayodhya) ಖಂಡಸಾ ಪ್ರದೇಶದಲ್ಲಿನ ಆಜಾದ್‌ನಗರ-ಘಟೌಲಿ (Azadnagar-Ghatauli intersection) ಬಳಿ ರಸ್ತೆ ವಿಭಾಜಕದಲ್ಲಿ ಬೈಕ್ (Motorbike) ಸ್ಕಿಡ್ ಆಗಿ ಪ್ಲಾಸ್ಟಿಕ್ ಬ್ಯಾಗೊಂದು ಕೆಳಗೆ ಬಿದ್ದಿದ್ದು, ಅದರಿಂದ ಮನುಷ್ಯರ ಕೈಯೊಂದು ಹೊರಗೆ ಬಂದಿದೆ.  ಇದನ್ನು ನೋಡಿ ಅಲ್ಲಿದ್ದವರು ಗಾಬರಿಯಾಗಿದ್ದು, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಇನ್ನು ಶವ ಕೆಳಗೆ ಬಿದ್ದು, ಜನರಿಗೆ ಇವರು ಶವ ಸಾಗಿಸುತ್ತಿದ್ದರು ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಶವ ಸಾಗಿಸುತ್ತಿದ್ದ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಆಯೋಧ್ಯೆಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ (Senior Superintendent of Police Ayodhya) ರಾಜ್ ಕರಣ್ ನಯ್ಯರ್ (Raj Karan Nayyar) ಪ್ರತಿಕ್ರಿಯಿಸಿದ್ದು, ಶವ ಬೈಕ್‌ನಿಂದ ಬಿದ್ದ ಬಳಿಕ ಯುವಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಅವರಿಬ್ಬರನ್ನು ಬಂಧಿಸಲಾಗಿದೆ. ಈ ಯುವಕರು ಸಮೀಪದ ಹೊಳೆಯಲ್ಲಿ ಈ ಶವವನ್ನು ಬಿಡಲು ಹೊರಟಿದ್ದರು ಎಂದು ತಿಳಿಸಿದ್ದಾರೆ. 

ಆರೋಪಿಗಳಿಬ್ಬರು ಅಯೋಧ್ಯೆಯ ರುದೌಲಿ ಕೊತ್ವಾಲಿಯ ಪರಸೌಲಿ ಗ್ರಾಮದ ನಿವಾಸಿ 35 ವರ್ಷದ ಶಕೀಬ್ (Shaqib) ಎಂಬಾತನ ಶವವನ್ನು  ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಸುತ್ತಿ ಬೈಕ್‌ನಲ್ಲಿ ಇರಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗಮಧ್ಯೆ ಬೈಕ್ ಸ್ಕಿಡ್ ಆದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಪ್ಲಾಸ್ಟಿಕ್‌ ಬ್ಯಾಗ್‌ನಿಂದ ಕೈ ಹೊರಗೆ ಬಂದಿದ್ದು, ವಿಷಯ ತಿಳಿದು ಅಲ್ಲಿ ಜನ ಜಮಾಯಿಸಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಈ ಯುವಕರು ಶವವಿದ್ದ ಪ್ಲಾಸ್ಟಿಕ್ ಚೀಲವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ನಯ್ಯರ್ ಹೇಳಿದ್ದಾರೆ. 

ಮೃತದೇಹದ ಶವದಲ್ಲಿ ಗಾಯದ ಗುರುತು

ಇನ್ನು ಮೃತ ವ್ಯಕ್ತಿಯ ತಲೆಯಲ್ಲಿ ಗಾಯದ ಗುರುತಿದ್ದು,  ಆರೋಪಿಗಳು ಬಳಸಿದ್ದ ಬೈಕ್ ಕೂಡ ಮೃತನ ಹೆಸರಿನಲ್ಲೇ ನೋಂದಣಿಯಾಗಿತ್ತು, ಮೃತನ ಮೂವರು ಸಹೋದರರು ಈಗಾಗಲೇ ಮೃತಪಟ್ಟಿದ್ದು, ಈತನ ಪತ್ನಿ ಕೆಲ ತಿಂಗಳ ಹಿಂದೆ ಈತನನ್ನು ಬಿಟ್ಟು ಹೋಗಿದ್ದಳು. 

ಪ್ರಾಥಮಿಕ ತನಿಖೆ ವೇಳೆ ಮೃತ ಶಕೀಬ್ ಓರ್ವ ಶಿಶುಕಾಮಿಯಾಗಿದ್ದ ಎಂದು ತಿಳಿದು ಬಂದಿದೆ. ಎರಡು ವರ್ಷಗಳ ಹಿಂದೆ ಅಪ್ರಾಪ್ತರ ಲೈಂಗಿಕವಾಗಿ ಶೋಷಣೆ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಒಂದು ವರ್ಷದ ಹಿಂದೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದೆ. ಈತನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಯುವಕರು ಈತನ ಅನೈತಿಕ ಚಟುವಟಿಕೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳ ಗುರುತನ್ನು ತಿಳಿಸಿಲ್ಲ, ಇತ್ತ ಶಕೀಬ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ