ಹೆಲ್ಮೆಟ್ ನೊಳಗೆ ನಾಗರ ಹಾವಿನ ಮರಿ ಪತ್ತೆ ; ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ!
Twitter
Facebook
LinkedIn
WhatsApp

ಕೇರಳ: ತನ್ನ ಹೆಲ್ಮೆಟ್‌ನೊಳಗೆ ವಿಷಪೂರಿತ ನಾಗರಹಾವಿನ ಮರಿಯನ್ನು ಪತ್ತೆಹಚ್ಚಿದ ವ್ಯಕ್ತಿಯೊಬ್ಬ ಪ್ರಾಣಪಾಯದಿಂದ ಪಾರಾದ ಸಂಗತಿ ಇದೀಗ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಈ ಘಟನೆ ಕೇರಳದಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿ ಸೋಜನ್ ಎಂಬ ವ್ಯಕ್ತಿ, ಎಂದಿನಂತೆ ತನ್ನ ಕೆಲಸದ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಿ, ಅದರ ಮೇಲೆಯೇ ಹೆಲ್ಮೆಟ್ ಅನ್ನು ಇರಿಸಿದ್ದನ್ನು. ಕೆಲಸ ಮುಗಿಸಿ ಸಂಜೆ ವೇಳೆಗೆ ಹಿಂದಿರುಗಿದಾಗ, ಹೆಲ್ಮೆಟ್‌ನೊಳಗೆ ಏನೋ ಇರುವುದು ಕಂಡುಬಂದಿದೆ. ಕೂಡಲೇ ಸೂಕ್ಷ್ಮವಾಗಿ ಗಮನಿಸಿದ ಆತನಿಗೆ ಅದರೊಳಗೆ ಹಾವಿನ ಮರಿ ಇರುವುದು ದೃಢವಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸೋಜನ್, ಸ್ನೇಕ್ ಸ್ವಯಂಸೇವಕ ಲಿಜೋ ಅವರನ್ನು ಸ್ಥಳಕ್ಕೆ ಹಾಜಾರಾಗುವಂತೆ ತಿಳಿಸಿದ್ದಾರೆ. ಹೆಲ್ಮೆಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಅದರೊಳಗೆ ಅಡಗಿರುವ ಸಣ್ಣ ನಾಗರಹಾವನ್ನು ಕಂಡು ಹಿಡಿದಿದ್ದಾರೆ. ಎರಡು ತಿಂಗಳ ವಯಸ್ಸಿನ ನಾಗರಹಾವು ಅತ್ಯಂತ ವಿಷಕಾರಿ ಜಾತಿಯಾಗಿದ್ದು, ಲಿಜೋ ಹೆಲ್ಮಟ್ನಿಂದ ಹಾವಿನ ಮರಿಯನ್ನು ಸುರಕ್ಷಿತವಾಗಿ ಹೊರೆತೆಗೆದಿದ್ದಾರೆ,