ಬುಧವಾರ, ಮೇ 1, 2024
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

12 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ 63 ವರ್ಷದ ವ್ಯಕ್ತಿ..!

Twitter
Facebook
LinkedIn
WhatsApp
12 ವರ್ಷದ ಅಪ್ರಾಪ್ತೆಯನ್ನು ಮದುವೆಯಾದ 63 ವರ್ಷದ ವ್ಯಕ್ತಿ..!

ಭಾರತದ ರೀತಿಯಲ್ಲೇ ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಕೂಡ ಹೆಣ್ಣುಮಕ್ಕಳು ಮದುವೆಯಾಗುವ ವಯಸ್ಸು 18 ವರ್ಷ. ಆದರೆ 63 ವರ್ಷದ ಧಾರ್ಮಿಕ ಮುಖಂಡರೊಬ್ಬರು 12 ವರ್ಷದ ಅಪ್ರಾಪ್ತೆಯನ್ನು ವರಿಸಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದು ನಮ್ಮ ಸಂಪ್ರದಾಯ ಎಂದು ಆ ಸಮಯದಾಯದವರು ಹೇಳಿಕೊಂಡಿದ್ದಾರೆ.

ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮದ ಮುಖಂಡರಿಗೆ ಎಲ್ಲರೂ ಗೌರವ ಕೊಡುತ್ತಾರೆ. ಆದರೆ ಈ ನಡೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನುಬದ್ಧವಾಗಿ ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು ಆದರೆ ಆ ಬಾಲಕಿಗೆ ಕೇವಲ 12 ವರ್ಷ ವಯಸ್ಸು. ಈ ಮದುವೆ ತಮ್ಮ ಸಂಪ್ರದಾಯದ ಪದ್ಧತಿಯಂತೆ ನಡೆದಿದೆ ಎಂದು ಹೇಳಿದ್ದಾರೆ. ಆಕೆಗೆ 6 ವರ್ಷವಾಗಿದ್ದಾಗಲೇ  ಆಕೆಯನ್ನು ನೋಡಿದ್ದರು, ಅಂದಿನಿಂದ ಆಕೆಯನ್ನೇ ಮದುವೆಯಾಗಬಯಸಿದ್ದರು.

ಘಾನಾದಲ್ಲಿ ಬಾಲ್ಯ ವಿವಾಹವನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಆಚರಣೆಯನ್ನು ಆಚರಿಸಬಾರದು ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕ್ರೋವರ್‌ನ ನುಂಗುವಾದಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹ ನಡೆಯಿತು. ಟೀಕೆಗಳನ್ನು ಅಜ್ಞಾನ ಎಂದು ತಳ್ಳಿಹಾಕಿದ್ದಾರೆ. ಘಾನಾದಲ್ಲಿ ಸುಮಾರು 19% ಹುಡುಗಿಯರು 18 ನೇ ವಯಸ್ಸನ್ನು ತಲುಪುವ ಮೊದಲು ಮದುವೆಯಾಗಿದ್ದಾರೆ, 5% ರಷ್ಟು ತಮ್ಮ 15 ನೇ ಹುಟ್ಟುಹಬ್ಬದ ಮೊದಲು ಮದುವೆಯಾಗಿದ್ದಾರೆ ಎಂದು NGO ಗರ್ಲ್ಸ್ ನಾಟ್ ಬ್ರೈಡ್ಸ್ ಹೇಳಿದೆ. ಈ ವಿವಾದಿತ ವಿವಾಹದ ಬಗ್ಗೆ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ