ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಸೋಲು ಕಂಡ ಪಾಕಿಸ್ತಾನ! ಕಣ್ಣೀರು ಹಾಕಿದ ಪಾಕ್ ನಾಯಕ ಬಾಬರ್

Twitter
Facebook
LinkedIn
WhatsApp
ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಸೋಲು ಕಂಡ ಪಾಕಿಸ್ತಾನ! ಕಣ್ಣೀರು ಹಾಕಿದ ಪಾಕ್ ನಾಯಕ ಬಾಬರ್

ಟಿ20 ವಿಶ್ವಕಪ್​ನ 24ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ್ (Pakistan vs Zimbabwe) ತಂಡಕ್ಕೆ ಸೋಲುಣಿಸಿ ಜಿಂಬಾಬ್ವೆ ತಂಡವು ಹೊಸ ಇತಿಹಾಸ ಬರೆದಿದೆ. ಪರ್ತ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರಣರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 1 ರನ್​ಗಳ ರೋಚಕ ಜಯ ಸಾಧಿಸಿತು. ಇತ್ತ ಐತಿಹಾಸಿಕ ಗೆಲುವು ದಕ್ಕುತ್ತಿದ್ದಂತೆ ಜಿಂಬಾಬ್ವೆ ತಂಡದ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಆದರೆ ಅತ್ತ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಡಗೌಟ್​ನಲ್ಲಿ ಭಾವುಕರಾಗಿ ಕಂಡು ಬಂದರು. ಅಲ್ಲದೆ ಪಾಕ್ ನಾಯಕ ಕಣ್ಣು ಒರೆಸುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೊನೇ ಓವರ್‌ನಲ್ಲಿ ಪಾಕಿಸ್ತಾನ ತಂಡದ ಗೆಲುವಿಗೆ 11 ರನ್‌ ಬೇಕಿದ್ದವು. ಆದರೆ, ತಂಡಕ್ಕೆ ಗೆಲುವು ನೀಡಲು ಪಾಕ್‌ ತಂಡದ ಪಾಲಿಗೆ ವಿರಾಟ್‌ ಕೊಹ್ಲಿ ಇದ್ದಿರಲಿಲ್ಲವಷ್ಟೇ. ಮೊಹಮದ್‌ ವಾಸಿಂ ಹಾಗೂ ಟಿ20 ಯಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್‌ ಮಾಡುವ ಮೊಹಮದ್‌ ನವಾಜ್‌ ಕ್ರೀಸ್‌ನಲ್ಲಿದ್ದರು. ಬ್ರಾಡ್‌ ಇವಾನ್ಸ್‌ ಎಸೆದ ಒದಲ ಎಸೆತದಲ್ಲಿ ಮೊಹಮದ್‌ ನವಾಜ್‌, ಮಿಡ್‌ಆಫ್‌ನತ್ತ ಬಾರಿಸಿ ಮೂರು ರನ್‌ ಕದ್ದರು. ಇದರಿಂದಾಗಿ ಕೊನೇ 5 ಎಸೆತಗಳಲ್ಲಿ 8 ರನ್‌ ಬಾರಿಸುವ ತೀರಾ ಸುಲಭದ ಸವಾಲು ಪಾಕ್‌ ಮುಂದೆ ಇತ್ತು. ಮೊಹಮದ್‌ ವಾಸಿಂ 2ನೇ ಎಸೆತದಲ್ಲಿ ಬ್ಯಾಕ್‌ ಕವರ್‌ನಲ್ಲಿ ಆಕರ್ಷಕ ಬೌಂಡರಿ ಕೂಡ ಸಿಡಿಸಿದರು. ಮೂರನೇ ಎಸೆತದಲ್ಲಿ, ವಾಸಿಂ 1 ರನ್‌ ಕದಿದ್ದರು.

ಕೊನೆಯ ಮೂರು ಎಸೆತಗಳಲ್ಲಿ ಪಾಕಿಸ್ತಾನಕ್ಕೆ 3 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮೊಹಮದ್‌ ನವಾಜ್‌ ರನ್‌ ಬಾರಿಸಲು ವಿಫಲರಾದರು. 5ನೇ ಎಸೆತದಲ್ಲಿ ಮೊಹಮದ್‌ ನವಾಜ್‌, ಕ್ರೇಗ್‌ ಇರ್ವಿನ್‌ಗೆ ಕ್ಯಾಚ್‌ ನೀಡಿದಾಗ ಪಾಕಿಸ್ತಾನ ಆಘಾತ ಕಂಡಿತು. ಏಕೆಂದರೆ ಕೊನೇ ಎಸೆತದಲ್ಲಿ ಪಾಕಿಸ್ತಾನಕ್ಕೆ ಮೂರು ರನ್‌ ಬೇಕಿತ್ತು. ಬ್ಯಾಟಿಂಗ್‌ ಮಾಡಲು ಬಂದ ಶಾಹಿನ್‌ ಆಪ್ರಿಧಿ, ಕೊನೇ ಎಸೆತದಲ್ಲಿ ಕೇವಲ 1 ರನ್‌ ಕದ್ದರು. ಕನಿಷ್ಠ ಸ್ಕೋರ್‌ ಟೈ ಮಾಡುವ ಪ್ರಯತ್ನದಲ್ಲಿ ರನ್‌ಔಟ್‌ ಆದಾಗ ಜಿಂಬಾಬ್ವೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಪರವಾಗಿ ಅನುಭವಿ ಸೀನ್‌ ವಿಲಿಯಮ್ಸ್‌ 28 ಎಸೆತಗಳಲ್ಲಿ 31 ರನ್‌ ಬಾರಿಸಿದ್ದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ 20 ರನ್‌ಗಳ ಗಡಿ ದಾಟಿರಲಿಲ್ಲ. ಮೊದಲ ವಿಕೆಟ್‌ಗೆ ಮ್ಯಾಧವೇರ್‌ ಹಾಗೂ ನಾಯಕ ಕ್ರೇಗ್‌ ಇರ್ವಿನ್‌ 42 ರನ್ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಜಿಂಬಾಬ್ವೆ ಪರವಾಗಿ ಉತ್ತಮ ಜೊತೆಯಾಟ ದಾಖಲಾಗಲೇ ಇಲ್ಲ.  ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 42 ರನ್‌ ಬಾರಿಸಿದ್ದ ಜಿಂಬಾಬ್ವೆ ಈ ಮೊತ್ತಕ್ಕೆ 53 ರನ್‌ ಕೂಡಿಸುವ ವೇಳೆಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯಲ್ಲಿ ಬ್ರಾಡ್‌ ಎವಾನ್ಸ್‌ 15 ಎಸೆತಗಳಲ್ಲಿ ಒಂದು ಸಿಕ್ಸರ್‌ನೊಂದಿಗೆ 19 ರನ್‌ ಸಿಡಿಸಿ ತಂಡದ ಮೊತ್ತವನ್ನು130ರ ಗಡಿ ಮುಟ್ಟಿಸಿದ್ದರು.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಚಂಡಮಾರುತದಿಂದ ಹಾನಿಗೀಡಾದ ಮನೆಗಳು- 10,000
ಹಾನಿಗೊಳಗಾದ ಕೃಷಿ ಭೂಮಿ- 6,000 ಹೆಕ್ಟೇರ್‌
ನಾಶವಾದ ಸಿಗಡಿ ಫಾರ್ಮ್- 1,000
ನಿರಾಶ್ರಿತರಾದವರು- 10 ಲಕ್ಷ
ಶಿಬಿರಗಳಲ್ಲಿ ಆಶ್ರಯ ಪಡೆದವರು- 6,925
ಸ್ಥಳಾಂತರಗೊಂಡವರ ಸಂಖ್ಯೆ- 2 ಲಕ್ಷ

ಅಂಕಣ