ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಕ್ರೇನ್‌ ದೇಶದ ನಾಲ್ಕು ರಾಜ್ಯ ರಷ್ಯಾಕ್ಕೆ ಸೇರ್ಪಡೆ, ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

Twitter
Facebook
LinkedIn
WhatsApp
ಉಕ್ರೇನ್‌ ದೇಶದ ನಾಲ್ಕು ರಾಜ್ಯ ರಷ್ಯಾಕ್ಕೆ ಸೇರ್ಪಡೆ, ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

ಕ್ರೆಮ್ಲಿನ್‌ (ಸೆ. 30): ರಷ್ಯಾ ಶುಕ್ರವಾರ ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಜಿಯಾ ಆಗಿವೆ. ಕ್ರೆಮ್ಲಿನ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ನಾಲ್ಕು ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಪುಟಿನ್ ಭಾಷಣವನ್ನೂ ಮಾಡಿದರು. ಇದು ರಷ್ಯಾದ ಕೋಟ್ಯಂತರ ಜನರ ಕನಸಾಗಿತ್ತು. ಈ ನಾಲ್ಕು ಭಾಗಗಳಲ್ಲಿ ವಾಸಿಸುವ ಜನರ ಇಚ್ಛೆ ಮತ್ತು ಹಕ್ಕು ಕೂಡ ಆಗಿತ್ತು. ಈ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸಿದ ನಂತರ ರಷ್ಯಾ ಅವರನ್ನು ತನ್ನ ಗಡಿಯಲ್ಲಿ ಸೇರಿಸಿದೆ ಎಂದಿದ್ದಾರೆ. ಇನ್ನು ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ರಷ್ಯಾ ತನ್ನ ಭೂಪ್ರದೇಶಕ್ಕೆ ಸೇರಿಸಿಕೊಂಡಿರುವ ಬಗ್ಗೆ ಯುರೋಪಿಯನ್‌ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಯುರೋಪಿಯನ್‌ ನಾಯಕರು ಎಂದಿಗೂ ಈ ಪ್ರದೇಶಗಳು ರಷ್ಯಾಕ್ಕೆ ಸೇರಿದ್ದು ಎಂದು ಮಾನ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. 27 ಯುರೋಪಿಯನ್‌ ದೇಶಗಳು ಒಳಗೊಂಡ ಯುರೋಪಿಯನ್‌ ಕೌನ್ಸಿಲ್‌ ಈ ಹೇಳಿಕೆಯನ್ನು ತಿಳಿಸಿದೆ. ರಷ್ಯಾ ಇಂಥ ಉದ್ಧಟತನ ಮಾಡುವುದರಿಂದ ಜಾಗತಿಕ ಭದ್ರತೆಯನ್ನು ಅಪಾಯಕ್ಕೆ ಒಡ್ಡುತ್ತಿದೆ ಎಂದಿದ್ದಾರೆ.

ವಿಶೇಷ ದಿನದಂತೆ ಆಚರಣೆ: ಉಕ್ರೇನ್‌ನ ನಾಲ್ಕು ಭಾಗಗಳನ್ನು ತನ್ನ ಗಡಿಯಲ್ಲಿ ಸೇರಿಸುವ ಮೂಲಕ, ಈಗ ಅವರ ಮೇಲಿನ ದಾಳಿಯನ್ನು ರಷ್ಯಾದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ರಷ್ಯಾ ತೋರಿಸಲು ಬಯಸಿದೆ. ಈ ಸಂದರ್ಭವನ್ನು ರಷ್ಯಾದಲ್ಲಿ ವಿಶೇಷ ದಿನದಂತೆ ಆಚರಿಸಲಾಗುತ್ತದೆ. ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ಪುಟಿನ್ (Vladimir Putin ) ಅವರ ಭಾಷಣವನ್ನು ಆಲಿಸಲು ಜಾಹೀರಾತು ಫಲಕಗಳು ಮತ್ತು ದೊಡ್ಡ ವೀಡಿಯೊ ಪರದೆಯನ್ನು ಹಾಕಲಾಯಿತು. ಈ ಅವಧಿಯಲ್ಲಿ ಹಲವು ರಸ್ತೆಗಳು ಮುಚ್ಚಲ್ಪಟ್ಟಿದ್ದವು. ಒಪ್ಪಂದಕ್ಕೆ ಸಹಿ ಹಾಕಿದ ನಂತರ ವಿಶೇಷ ಪ್ರದರ್ಶನವನ್ನು ಮಾಡಲಾಯಿತು.ಪುಟಿನ್‌ ಭಾಷಣದ ಪ್ರಮುಖ ಅಂಶಗಳು:- ಉಕ್ರೇನ್ 2014 ರ ಒಪ್ಪಂದದ ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳುತ್ತದೆ, ಯುದ್ಧವನ್ನು ನಿಲ್ಲಿಸಿ ಮತ್ತು ಮಾತುಕತೆಗಳನ್ನು ಪ್ರಾರಂಭಿಸಬೇಕು.- ಉಕ್ರೇನ್‌ನ ಯಾವುದೇ ಭಾಗವು ರಷ್ಯಾಕ್ಕೆ ಸೇರಲು ಬಯಸಿದರೆ, ನಾವು ಅದಕ್ಕೆ ದ್ರೋಹ ಮಾಡುವುದಿಲ್ಲ.- ಪಾಶ್ಚಿಮಾತ್ಯ ದೇಶಗಳು ಏನೇ ಹೇಳಬಹುದು, ಆದರೆ ಈ ನಾಲ್ಕು ರಾಜ್ಯಗಳ ಜನರು ರಷ್ಯಾವನ್ನು ಸೇರಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಜಗತ್ತು ಮತ್ತು ಉಕ್ರೇನ್, ಇದನ್ನು ಗೌರವಿಸಬೇಕು, ಏಕೆಂದರೆ ಅದು ಇಲ್ಲದೆ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ