ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪಪ್ಪಾಯ ಗಿಡಗಳನ್ನು ಬೆಳೆಸುವ ವಿಧಾನ; ಅಧಿಕ ಇಳುವರಿ

Twitter
Facebook
LinkedIn
WhatsApp
ಪಪ್ಪಾಯ ಗಿಡಗಳನ್ನು ಬೆಳೆಸುವ ವಿಧಾನ; ಅಧಿಕ ಇಳುವರಿ

ಭಾರತ ದೇಶವು ಒಂದು ಕೃಷಿ ಪ್ರಧಾನ ದೇಶವಾಗಿದೆ .ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ.ಅಂತಹ ಒಂದು ಬೆಳೆಗಳಲ್ಲಿ ಪಪ್ಪಾಯವೂ ಒಂದು. ಇದರಿಂದ ನೀವು ಕಡಿಮೆ ವೆಚ್ಚದಲ್ಲಿ ಉತ್ತಮ ಉತ್ಪಾದನೆಯನ್ನು ಪಡೆಯಬಹುದು. ಪಪ್ಪಾಯ ಬೆಳೆಯನ್ನು ಹಣ್ಣಾಗುವ ಮೊದಲು ಹಾಗೂ ಮಾಗಿದ ನಂತರ ಬಳಸಬಹುದು. ಪಪ್ಪಾಯವನ್ನು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ನೆಡಲಾಗುತ್ತದೆ. ಈಗ ಗ್ರಾಮೀಣ ಭಾಗದ ರೈತರು ಪಪ್ಪಾಯಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಪಪ್ಪಾಯ ಗಿಡಗಳನ್ನು ಬೆಳೆಸುವ ವಿಧಾನ; ಅಧಿಕ ಇಳುವರಿ

ಪಪ್ಪಾಯ ಮರಗಳನ್ನು ಸಣ್ಣ ಗುಂಡಿಗಳನ್ನು ಮಾಡುವ ಮೂಲಕ ನೆಡಲಾಗುತ್ತದೆ. ಬೀಜಗಳನ್ನು ಬಿತ್ತಿದ 10 ರಿಂದ 12 ದಿನಗಳ ನಂತರ ಅವು ಮೊಳಕೆಯೊಡೆಯುತ್ತವೆ. ಪಪ್ಪಾಯಿ ಮರಕ್ಕೆ ಹೆಚ್ಚು ನೀರು ಮತ್ತು ಸೂರ್ಯನ ಬೆಳಕು ಬೇಕು. ಆದ್ದರಿಂದ, ನೀರು ಮತ್ತು ಸೂರ್ಯನ ಬೆಳಕು ಎರಡನ್ನೂ ಸುಲಭವಾಗಿ ಸಿಗುವ ಪ್ರದೇಶದಲ್ಲಿ ಅದನ್ನು ನೆಡಬೇಕು. ಇದಕ್ಕಾಗಿ ಗರಿಷ್ಠ ತಾಪಮಾನವು 38 ಡಿಗ್ರಿಯಿಂದ 44 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಈ ಬೆಳೆ ಶಾಖ ಮತ್ತು ಹಿಮದಿಂದ ಹಾನಿಗೊಳಗಾಗುತ್ತದೆ.

ಪಪಾಯ ಬೆಳೆ ಗಂಡು, ಹೆಣ್ಣು ಮತ್ತು ದ್ವಿಲಿಂಗ ಜಾತಿಯ ಹೂಗಳನ್ನು ಮತ್ತು ಸಂಯುಕ್ತ ಜಾತಿಯ ಗಿಡಗಳನ್ನು ಹೊಂದಿದೆ. ಗಂಡು ಜಾತಿಯ ಗಿಡಗಳು ಹೂ ಬಿಡಲಾರವು, ಹೆಣ್ಣು ಜಾತಿಯಿಂದ ಬಿಡುವ ಹಣ್ಣುಗಳು ಸಣ್ಣದಾಗಿರುತ್ತವೆ ಮತ್ತು ದ್ವಿಲಿಂಗ ಜಾತಿಯಿಂದ ಉತ್ಪತ್ತಿಯಾದ ಹಣ್ಣುಗಳು ಉದ್ದವಾಗಿರುತ್ತದೆ. ನೀರು ನಿಲುಗಡೆಯಾಗುವ ಮತ್ತು ಜೋರು ಗಾಳಿ ಬಿಸುವ ಪ್ರದೇಶಗಳು ಹೊಂದಿಕೆಯಾಗುವುದಿಲ್ಲ ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ. ಪಪಾಯ ಹಣ್ಣನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು .
ಚೆನ್ನಾಗಿ ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮಣ್ಣಿನಿಂದ ಹಿಡಿದು ಕೆಂಪುಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ . ನೀರು ನಿಲ್ಲುವಂತಹ ತಗ್ಗು ಕೆಳ ಪ್ರದೇಶಗಳು ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ.

ಪಪಾಯ ಬೀಜಗಳನ್ನು ಬಿತ್ತುವ ಪೂರ್ವದಲ್ಲಿ ರಾತ್ರಿಯಿಡಿ ಬೀಜಗಳನ್ನು ಗೋಮೂತ್ರದಲ್ಲಿ ನೆನೆಸಿ ನಂತರ ಬಿತ್ತನೆ ಮಾಡುವುದರಿಂದ ಬೀಜಗಳು ಸಮನಾಗಿ ಹಾಗೂ ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಮಾರ್ಚ-ಏಪ್ರೀಲ್ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳಿತು. ಇದರಿಂದ ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ. ಸಸಿ ಮಡಿಗಳಿಗೆ ನಿಯಮಿತವಾಗಿ ನೀರು ಒದಗಿಸಿ. ಚಿಕ್ಕ ಸಸಿಗಳಿಗೆ ಬೇಸಿಗೆಯಲ್ಲಿ ನೆರಳು ಒದಗಿಸಬೇಕು. ಗಿಡ ನೆಟ್ಟು ಹಣ್ಣು ಬಿಡುವ ಮೊದಲ ತಿಂಗಳಿಂದ ಹಿಡಿದು ಆರು ತಿಂಗಳ ತನಕ ತೋಟದಲ್ಲಿ ಅಂತರ್ ಬೆಳೆಯಾಗಿ ಅಲ್ಪಾವಧಿ ತರಕಾರಿ (ಕುಂಬಳ ಜಾತಿಗೆ ಸೇರಿದ ತರಕಾರಿ ಹೊರತುಪಡಿಸಿ) ಬೆಳೆಗಳನ್ನು ಬೆಳೆಯಬಹುದು. ಒಮ್ಮೆ ಪಪಾಯ ಫಸಲು ಕೊಡಲು ಪ್ರಾರಂಭಿಸಿದ ಬಳಿಕ ಗಿಡದ ನೆರಳಿನಿಂದಾಗಿ ಅಂತರ ಬೆಳೆಯನ್ನು ಬೆಳೆಯುವುದು ಕಷ್ಟವಾಗುತ್ತದೆ. ಪಪಾಯವನ್ನು ಮಾವು, ಚಿಕ್ಕು ಇತ್ಯಾದಿ ತೋಟಗಳಲ್ಲಿ ಅಂತರ ಬೆಳೆಯಾಗಿ ಕೂಡ ಬೆಳೆಯಬಹುದು.

ವೇಗವಾಗಿ ಹಣ್ಣುಗಳ ಬೆಳವಣಿಗೆಗೆ ಮತ್ತು ಉತ್ತಮ ಫಸಲಿಗಾಗಿ ಪಪಾಯ ಗಿಡಕ್ಕೆ ನಿರಂತರ ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ ವಾರಕೊಮ್ಮೆ ಮತ್ತು ಚಳಿಗಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಒದಗಿಸಬೇಕಾಗಿರುವುದು ಅವಶ್ಯಕ. ರಿಂಗ್ ಮತ್ತು ಹನಿ ನೀರಾವರಿ ವಿಧಾನಗಳು ಇದರ ನೀರಾವರಿಗೆ ಅತೀ ಯೋಗ್ಯವೆಂದು ಪರಿಗಣಿಸಲ್ಪಟ್ಟಿವೆ. ಪ್ರತಿ ಗಿಡಕ್ಕೆ ಪ್ರತಿ ದಿನಕ್ಕೆ ಹನಿ ನೀರಾವರಿ ಮೂಲಕ 6-8 ಲೀಟರ್ ನೀಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ವಾತಾವರಣದಲ್ಲಿ ವಿಶೇಷವಾಗಿ ಗಿಡದ ಹಾಗೂ ಹೂವಿನ ಸುತ್ತಮುತ್ತಲಿನ ತಾಪಮಾನವು ಶೇ. 20- 30 ಡಿಗ್ರಿ ಹಾಗೂ ಸಾಪೇಕ್ಷ ಆದ್ರ್ರತೆ 70-85 % ಇರಬೇಕು. ಇದಕ್ಕಿಂತ ಹೆಚ್ಚಿ ಅಥವಾ ಕಡಿಮೆ ಇದ್ದಾಗ, ಇದು ಹೂವುಗಳ ಪರಾಗಸ್ಪರ್ಶದ (ಪೊಲಿನೇಶನ್) ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹಣ್ಣು ಕಟ್ಟದೆ ಹೂವುಗಳು ಉದಿರಿಹೊಗುತ್ತವೆ.

ಪಪ್ಪಾಯ ಗಿಡಗಳನ್ನು ಬೆಳೆಸುವ ವಿಧಾನ; ಅಧಿಕ ಇಳುವರಿ

ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ, ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ. ಪರಂಗಿ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚು ಸಿಗುವುದರಿಂದ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ತಿನ್ನಬೇಕು ಎನ್ನುವ ನಿಮ್ಮ ಭಾವನೆಗಳಿಗೆ ಕಡಿವಾಣ ಹಾಕಿ ನಿಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುತ್ತದೆ. ಹಾಗಾಗಿ ದಪ್ಪ ಇರುವವರು ಸಣ್ಣ ಆಗಲು ಪರಂಗಿಹಣ್ಣನ್ನು ಪ್ರತಿದಿನ ಮಧ್ಯಾಹ್ನ ಊಟ ಆದ ಮೇಲೆ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.

ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಮಾಡುವ ಗುಣ ಪರಂಗಿ ಹಣ್ಣಿನಲ್ಲಿ ಕಂಡು ಬರುತ್ತದೆ. ವಯಸ್ಸಾದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಪರಂಗಿ ಹಣ್ಣು ಬರಲು ಬಿಡುವುದಿಲ್ಲ.

ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. 

ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಉತ್ತಮ ಜೀರ್ಣ ಶಕ್ತಿಯನ್ನು ಮತ್ತು ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

Prathima ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು! Twitter Facebook LinkedIn WhatsApp ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ