ಭಾನುವಾರ, ಜೂನ್ 2, 2024
ಬೆಳ್ತಂಗಡಿ: ಬೈಕಿಗೆ ಡಿಕ್ಕಿ ಹೊಡೆದ ಲಾರಿ; ಬೈಕ್ ಸವಾರ ಸಾವು.!-ಇಂಗ್ಲೆಂಡ್ನಿಂದ 1 ಲಕ್ಷ ಕಿಲೋಗ್ರಾಂಗಳಷ್ಟು ಚಿನ್ನ ಭಾರತಕ್ಕೆ ಮರಳಿ ತಂದ ಭಾರತ; ಖಜಾನೆಗೆ ರವಾನಿಸಿದ ಆರ್ಬಿಐ.!-ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ-ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಬೆಲೆ ಇಳಿಕೆ..!-ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸಲು ಜೂನ್ 12 ರವರೆಗೆ ಅವಕಾಶ ನೀಡಿದ ಹೈಕೋರ್ಟ್-ಸುಮಲತಾ ಅಂಬರೀಶ್ ಗೆ ವಿಧಾನ ಪರಿಷತ್‌ ಟಿಕೆಟ್ ಬಹುತೇಕ ಫಿಕ್ಸ್?-Pears: ಪಿಯರ್ಸ್ ಹಣ್ಣು ಮಾರುಕಟ್ಟೆಯಲ್ಲಿ ಎಷ್ಟು ಫೇಮಸೋ ಅಷ್ಟೇ ಆರೋಗ್ಯಕ್ಕೂ; ಇಲ್ಲಿದೆ ಮಾಹಿತಿ-ಗೃಹ ಸಚಿವ ಅಮಿತ್‌ ಶಾ ಪತ್ನಿ ಸೋನಲ್‌ ಶಾ ಜೊತೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ-ಗುದನಾಳದಲ್ಲಿ ಬರೋಬ್ಬರಿ 1kg ಚಿನ್ನ ಬಚ್ಚಿಟ್ಟ ಗಗನಸಖಿ!-ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಘಾಟಿ ರಸ್ತೆಗಳ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ

Twitter
Facebook
LinkedIn
WhatsApp
ಘಾಟಿ ರಸ್ತೆಗಳ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ

ಬೆಂಗಳೂರು: ಶಿರಾಡಿ, ಚಾರ್ಮಡಿ ಮತ್ತು ಆಗುಂಬೆ ಘಾಟಿ ರಸ್ತೆಗಳ ದುರಸ್ತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಸರ್ಕಾರ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಚಿವ ಕೆ.ಗೋಪಾಲಯ್ಯ, ಹಾಸನ ಜಿಲ್ಲಾಧಿಕಾರಿ ಗಿರೀಶ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜತೆೆ ಸಭೆ ನಡೆಸಿದ ಸಚಿವರು, ಎಲ್ಲ ಘಾಟಿಗಳಲ್ಲಿನ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಿದ್ದು, ವಾರದೊಳಗೆ ತುರ್ತು ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಮಡಿಕೇರಿ, ಶಿರಾಡಿ ಘಾಟಿಯ ಎಲ್ಲ ಭಾಗದಲ್ಲೂ ಅತಿವೃಷ್ಟಿ ಹಾನಿಯ ವೀಕ್ಷಣೆ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೂ ಸಭೆ ನಡೆಸಿದ್ದೇನೆ. ಶಿರಾಡಿ, ಚಾಮುಡಿ, ಆಗುಂಬೆ, ಮಾಲಾ, ಕೊಲ್ಲೂರು, ಸಂಪಾಜೆ, ಅರಬೈಲು, ಗೇರುಸೊಪ್ಪ ಘಾಟಿಗಳಲ್ಲಿ 63 ಕಡೆ ಭೂ ಕುಸಿತವಾಗಿತ್ತು. ಅದನ್ನು ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ ಎಂದು ಹೇಳಿದರು.

754 ಕೋಟಿ ರೂ. ಬೇಕು: ಅತಿವೃಷ್ಟಿಯಿಂದಾಗಿ 141 ಕಿ.ಮೀ. ರಾಜ್ಯ ಹೆದ್ದಾರಿ, 924 ಕಿ.ಮೀ. ಮುಖ್ಯ ರಸ್ತೆಗಳು, 357 ಅಡ್ಡ ಮೋರಿಗಳು, ಸಣ್ಣ ಸೇತುವೆಗಳು ಹಾಳಾಗಿವೆ. ಇದೆಲ್ಲವನ್ನೂ ದುರಸ್ತಿ ಮಾಡಲು 740 ಕೋಟಿ ರೂ. ಬೇಕಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯ 200 ಕೋಟಿ ರೂ. ಬಿಡುಗಡೆ ಆಗಿದ್ದು, ಅದರಲ್ಲಿ ಕೆಲಸ ನಡೆಯುತ್ತಿದೆ ಎಂದರು.

617 ಕಾಮಗಾರಿ ಪೂರ್ಣ: 2019ರಿಂದ ಸತತ ವಿಪರೀತ ಮಳೆಯಾಗುತ್ತಿದೆ. ಆಗ 669 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆ ಮೊತ್ತದಲ್ಲಿ ಕೈಗೊಂಡ 1248 ಕಾಮಗಾರಿಗಳಲ್ಲಿ 617 ಕಾಮಗಾರಿ ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.

ಶಿರಾಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆ: ಶಿರಾಡಿ ಘಾಟಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದೇವೆ. ಸಂಚಾರ ಬಂದ್ ಆಗುವುದಕ್ಕೆ ಅವಕಾಶ ಕೊಟ್ಟಿಲ್ಲ. ಕೆಲಸ ಪೂರ್ಣವಾದರೆ ಶಾಶ್ವತ ಪರಿಹಾರ ಸಿಗಲಿದ್ದು, ಮಾರ್ಚ್ ಒಳಗಾಗಿ ಕೆಲಸ ಮುಗಿಯುತ್ತದೆ. ಗುತ್ತಿಗೆದಾರರ ದಿವಾಳಿ ಆಗಿದ್ದಕ್ಕೆ ಅಲ್ಲಿ ಕೆಲಸ ವಿಳಂಬವಾಗಿತ್ತು ಎಂದು ಸಿ.ಸಿ.ಪಾಟೀಲ ಹೇಳಿದರು. ಮಡಿಕೇರಿ ಡಿಸಿ ಕಚೇರಿ ಬಳಿ ರಸ್ತೆಯ ತಡೆಗೋಡೆ ಸಮಸ್ಯೆ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ. ನಾಳೆಯೊಳಗಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಸಂಪಾಜೆ ಘಾಟಿ ರಸ್ತೆ ಬಂದ್ ಮಾಡುವ ಅಗತ್ಯವಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಇಲಾಖಾ ಪ್ರಧಾನ ಕಾರ್ಯದರ್ಶಿ, ಮಡಿಕೇರಿ ಡಿಸಿ ಜತೆ ಮಾತನಾಡುತ್ತಾರೆ. ಬಂದ್ ಮಾಡುವಷ್ಟು ಅಗತ್ಯ ಇದೆಯೋ ಇಲ್ವೋ ನೋಡಿಕೊಂಡು ತೀರ್ಮಾನ ಮಾಡುತ್ತೇವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ತಪ್ಪಿದ ಅನಾಹುತ

ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ತಪ್ಪಿದ ಅನಾಹುತ

ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ತಪ್ಪಿದ ಅನಾಹುತ Twitter Facebook LinkedIn WhatsApp ಬಂಟ್ವಾಳ: ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ರಾ.ಹೆ.75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಮೇ.31ರ ಶುಕ್ರವಾರ ಬೆಳಗ್ಗೆ ನಡೆದಿದೆ.

ಬೆಳ್ತಂಗಡಿ: ಮನೆಯೊಳಗೆ ಮಂಚದಡಿಯಲ್ಲಿತ್ತು12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ..!

ಬೆಳ್ತಂಗಡಿ: ಮನೆಯೊಳಗೆ ಮಂಚದಡಿಯಲ್ಲಿತ್ತು12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ..!

ಬೆಳ್ತಂಗಡಿ: ಮನೆಯೊಳಗೆ ಮಂಚದಡಿಯಲ್ಲಿತ್ತು12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ..! Twitter Facebook LinkedIn WhatsApp ಮಂಗಳೂರು, ಮೇ 28: ಮನೆಯೊಳಗೆ ಬಂದ 12 ಅಡಿ ಉದ್ದದ ಬೃಹತ್ ಗಾತ್ರ ಕಾಳಿಂಗ ಸರ್ಪವೊಂದನ್ನು (King

ಅಂಕಣ