ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

India Tour of England: 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಚೇಂಜ್

Twitter
Facebook
LinkedIn
WhatsApp
India Tour of England: 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಚೇಂಜ್

ಬೆಂಗಳೂರು(ಜೂ.25): 2021ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಟೀಂ ಇಂಡಿಯಾ(Team India), ಇಂಗ್ಲೆಂಡ್ ಟೂರ್​ಗೆ ಹೋಗಿತ್ತು (India Tour of England). ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವರ್ಲ್ಡ್​​ಕಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್​ಗಳ ಸರಣಿ ಆಡಲು ಹೋಗಿದ್ದರು. ಮೊದಲ ನಾಲ್ಕು ಟೆಸ್ಟ್​ಗಳು ಸರಾಗವಾಗಿ ನಡೆಯಿತು. ಭಾರತ 2-1ರಿಂದ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿತ್ತು. ಆದರೆ 5ನೇ ಹಾಗೂ ಕೊನೆ ಟೆಸ್ಟ್ ಆರಂಭಕ್ಕೂ ಮುನ್ನವೇ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆದಿದ್ದರಿಂದ ಆ ಟೆಸ್ಟ್ ಅನ್ನು ಮುಂದೂಡಲಾಯ್ತು. ಈಗ ಅದೇ ಟೆಸ್ಟ್​ ಅನ್ನು ಭಾರತ-ಇಂಗ್ಲೆಂಡ್ ತಂಡಗಳು ಜೂನ್ 1ರಿಂದ ಆಡಲಿವೆ.

ಕೋಚ್​-ಕ್ಯಾಪ್ಟನ್-ವೈಸ್ ಕ್ಯಾಪ್ಟನ್ ಎಲ್ಲರೂ ಚೇಂಜ್:

ಹೌದು, ಅಂದು ಇಂಗ್ಲೆಂಡ್​ ಟೂರ್​ಗೆ ಹೋಗಿದ್ದ ಟೀಂ ಇಂಡಿಯಾಗೆ ರವಿಶಾಸ್ತ್ರಿ (Ravi Shastri) ಕೋಚ್. ವಿರಾಟ್ ಕೊಹ್ಲಿ (Virat Kohli) ಕ್ಯಾಪ್ಟನ್. ಅಜಿಂಕ್ಯ ರಹಾನೆ ವೈಸ್ ಕ್ಯಾಪ್ಟನ್ ಆಗಿದ್ದರು. ಈ ತ್ರಿಮೂರ್ತಿಳ ಮುಂದಾಳತ್ವದಲ್ಲಿ ಭಾರತ ತಂಡ ಎರಡು ಟೆಸ್ಟ್ ಗೆದ್ದು, ಒಂದನ್ನ ಸೋತು, ಮತ್ತೊಂದನ್ನ ಡ್ರಾ ಮಾಡಿಕೊಂಡಿತ್ತು. ಈ ತ್ರಿವಳಿಗಳು 15 ವರ್ಷಗಳ ನಂತರ ಇಂಗ್ಲೆಂಡ್​ನಲ್ಲಿ ಸರಣಿ ಗೆಲ್ಲೋ ಉತ್ಸಾಹದಲ್ಲಿದ್ದರು. ಆದ್ರೆ ಕೊರೊನಾ ವಕ್ಕರಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದರೂ ಟ್ರೋಫಿ ಇಲ್ಲದೆ ಬರಿಗೈಯಲ್ಲಿ ಭಾರತಕ್ಕೆ ವಾಪಾಸ್ ಆಗಿದ್ದರು.

India Tour of England: 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಚೇಂಜ್

9 ತಿಂಗಳ ನಂತರ ಆ ಏಕೈಕ ಟೆಸ್ಟ್​ ಆಡಲು ಟೀಂ ಇಂಡಿಯಾ ಇಂಗ್ಲೆಂಡ್​ಗೆ ಹೋಗಿದೆ. ಈಗ ಭಾರತ ತಂಡ ಸಂಪೂರ್ಣ ಬದಲಾಗಿದೆ. ರಾಹುಲ್ ದ್ರಾವಿಡ್ (Rahul Dravid) ಕೋಚ್. ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್. ರಿಷಭ್ ಪಂತ್ (Rishabh Pant) ವೈಸ್ ಕ್ಯಾಪ್ಟನ್ ಆಗಿದ್ದಾರೆ. ಈ ಮೂವರು ಮುಂದಾಳತ್ವದಲ್ಲಿ ತವರಿನಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿದೆ. ಆದ್ರೆ ವಿದೇಶದಲ್ಲಿ ಗೆದ್ದಿಲ್ಲ. ಈ ಏಕೈಕ ಟೆಸ್ಟ್ ಗೆದ್ದು, ಟ್ರೋಫಿ ಗೆಲ್ಲಿಸೋ ಒತ್ತಡದಲ್ಲಿ ಈ ತ್ರಿಮೂರ್ತಿಗಳಿದ್ದಾರೆ. ಒಂದು ಪಕ್ಷ ಈ ಟೆಸ್ಟ್​ ಸೋತರೆ ಸರಣಿ ಡ್ರಾ ಆಗಲಿದೆ. ಆಗ ರವಿಶಾಸ್ತ್ರಿ & ಟೀಂ ಮಾಡಿದ ಸಾಧನೆ ಮಣ್ಣು ಪಾಲಾಗಲಿದೆ.

ಲಾರ್ಡ್ಸ್ ಟೆಸ್ಟ್ ಗೆಲ್ಲಿಸಿದವರೇ ಟೀಮ್​ನಲ್ಲಿಲ್ಲ:

ಹೌದು, ಲಾರ್ಡ್ಸ್ ಟೆಸ್ಟ್ (Lords Test) ಗೆಲ್ಲಿಸಿ ಸರಣಿ ಮುನ್ನಡೆ ಪಡೆಯಲು ಕಾರಣರಾದ ಆಟಗಾರರೇ ಈ ಸಲದ ಟೂರ್​ನಲ್ಲಿ ಟೀಂ ಇಂಡಿಯಾದಲ್ಲಿಲ್ಲ. ಕೆ ಎಲ್ ರಾಹುಲ್ (KL Rahul) ಸೆಂಚುರಿ ಬಾರಿಸಿದ್ದರು. ರಹಾನೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಅರ್ಧಶತಕ ದಾಖಲಿಸಿದ್ದರು. ಇಶಾಂತ್ ಶರ್ಮಾ (Ishant Sharma) 5 ವಿಕೆಟ್ ಪಡೆದಿದ್ದರು. ಆದರೆ ಈ ತ್ರಿಮೂರ್ತಿಗಳು ಈಗ ಟೀಂ​ನಲ್ಲೇ ಇಲ್ಲ. ರಾಹುಲ್​​ ಗಾಯಾಳುವಾಗಿದ್ದರೆ, ರಹಾನೆ ಹಾಗೂ ಇಶಾಂತ್​​ ಅವರನ್ನ ಡ್ರಾಪ್ ಮಾಡಲಾಗಿದೆ.

ಈ ಮೂವರ ಜೊತೆ ಮಯಾಂಕ್​ ಅಗರ್ವಾಲ್ (Mayank Agarwal)​, ಅಕ್ಷರ್ ಪಟೇಲ್ (Axar Patel), ಅಭಿಮನ್ಯು ಈಶ್ವರನ್, ವೃದ್ಧಿಮಾನ್ ಸಾಹ, ಪೃಥ್ವಿ ಶಾ, ಅವೇಶ್ ಖಾನ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಸಹ ಕಳೆದ ಟೂರ್​ನಲ್ಲಿ ಟೀಂ ಇಂಡಿಯಾದಲ್ಲಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಈ ಸಲ ಇವರು ಟೀಮ್​ನಲ್ಲಿಲ್ಲ. ಒಟ್ನಲ್ಲಿ 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ಆಗಿನ ತಂಡ ಸರಣಿ ಮುನ್ನಡೆ ಪಡೆದುಕೊಟ್ಟಿತ್ತು. ಈಗಿನ ತಂಡ ಸರಣಿ ಗೆಲ್ಲಿಸಿಕೊಡುತ್ತಾ ಅನ್ನೋದು ಇನ್ನು 10 ದಿನಗಳಲ್ಲಿ ಗೊತ್ತಾಗಲಿದೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist