ಸೋಮವಾರ, ಮೇ 13, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

40 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕವೂ 5ನೇ ದಿನದ ವಿಚಾರಣೆಗಾಗಿ ರಾಹುಲ್ ಗಾಂಧಿಗೆ ಇಡಿ ಸಮನ್ಸ್!

Twitter
Facebook
LinkedIn
WhatsApp
40 ಗಂಟೆಗಳ ಸುದೀರ್ಘ ವಿಚಾರಣೆ ಬಳಿಕವೂ 5ನೇ ದಿನದ ವಿಚಾರಣೆಗಾಗಿ ರಾಹುಲ್ ಗಾಂಧಿಗೆ ಇಡಿ ಸಮನ್ಸ್!

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂದಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ.

 

ಹೌದು.. ನಾಲ್ಕನೇ ದಿನದ ವಿಚಾರಣೆ ನಂತರವೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೆ ಸಮನ್ಸ್ ನೀಡಿದ್ದು, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅವರನ್ನು ಮತ್ತೆ ವಿಚಾರಣೆಗಾಗಿ ಹಾಜರಾಗಲು ತಿಳಿಸಿದೆ. ರಾಹುಲ್‌ ಗಾಂಧಿ ಅವರನ್ನು 4 ದಿನಗಳಲ್ಲಿ ಸುಮಾರು 40 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಲಾಗಿದ್ದು, ಇಷ್ಟಾದರೂ ಮತ್ತೆ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸತತ ಮೂರು ದಿನಗಳ ವಿಚಾರಣೆಯ ನಂತರ, ಇಡಿ ಸೋಮವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮತ್ತೆ ವಿಚಾರಣೆ ನಡೆಸಿತ್ತು. ಬಳಿಕ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ರಾಹುಲ್ ಗಾಂಧಿ ವಿಚಾರಣೆ ಹಿನ್ನಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯ ಕಚೇರಿಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ. ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಇಡಿ ಕಚೇರಿಯಿಂದ ಊಟಕ್ಕೆ ತೆರಳಿದ ರಾಹುಲ್ ಗಾಂಧಿ, ಸುಮಾರು ಒಂದು ಗಂಟೆಯ ನಂತರ ಮತ್ತೆ ಇಡಿ ವಿಚಾರಣೆಗೆ ಭಾಗಿಯಾದರು.

ದೆಹಲಿ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಪ್ರಧಾನ ಕಚೇರಿಯನ್ನು ಸೋಮವಾರ ಬೆಳಗ್ಗೆ 11:05 ರ ಸುಮಾರಿಗೆ ರಾಹುಲ್ ಗಾಂಧಿ ಅವರು ಸಿಆರ್‌ಪಿಎಫ್ ಸಿಬ್ಬಂದಿಯ “ಝಡ್ ಪ್ಲಸ್” ವರ್ಗದ ಭದ್ರತೆಯೊಂದಿಗೆ ತಲುಪಿದ್ದರು. ಒಂದು ದಿನದ ಹಿಂದೆಯಷ್ಟೇ ರಾಹುಲ್ ಗಾಂಧಿಯವರ 52ನೇ ವರ್ಷದ ಹುಟ್ಟುಹಬ್ಬವಿತ್ತು. ಈ ನಡುವೆ ಇಂದು ಸೋನಿಯಾ ಗಾಂಧಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ ವಾರ ಸೋಮವಾರ, ಮಂಗಳವಾರ ಮತ್ತು ಬುಧವಾರ ಸತತ ಮೂರು ದಿನಗಳ ಕಾಲ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯನ್ನು 30 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಅವರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ