ನವದೆಹಲಿ(ಜೂ.02): ಭಾರತ ಪುರುಷರ ಕ್ರಿಕೆಟ್ ತಂಡವು ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆಯಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಖಚಿತಪಡಿಸಿದೆ. ಜುಲೈ 22ರಿಂದ ಆಗಸ್ಟ್ 07ರವರೆಗೆ ಉಭಯ ತಂಡಗಳು ಒಟ್ಟು 8 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಲಿವೆ.
ಭಾರತ ಕ್ರಿಕೆಟ್ ತಂಡವು ಸದ್ಯ ಜೂನ್ 09ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಸಜ್ಜಾಗುತ್ತಿದೆ. ಇದಾದ ಬಳಿಕ ಭಾರತ ತಂಡವು ಇಂಗ್ಲೆಂಡ್ ಹಾಗೂ ಐರ್ಲೆಂಡ್ ಎದುರು ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಸೀಮಿತ ಓವರ್‌ಗಳ ಸರಣಿಯು ಜುಲೈ 17ಕ್ಕೆ ಅಂತ್ಯವಾಗಲಿದೆ. ಇಂಗ್ಲೆಂಡ್‌ನಿಂದ ನೇರವಾಗಿ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್‌ನತ್ತ ಮುಖ ಮಾಡಲಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಗೆ ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೊ, ಸೇಂಟ್ ಕಿಟ್ಸ್&ನೇವಿಸ್ ಆತಿಥ್ಯವನ್ನು ವಹಿಸಲಿದೆ. ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಮೆರಿಕದ ಪ್ಲೋರಿಡಾದಲ್ಲಿರುವ ಪೋರ್ಟ್ ಲೌಡರ್‌ಹಿಲ್ ಸಾಕ್ಷಿಯಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 22, 24 ಮತ್ತು 27ರಂದು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿವೆ. ಇನ್ನು 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜುಲೈ 29ರಂದು ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದರೆ, ಆಗಸ್ಟ್ 01 ಮತ್ತು 2ರಂದು ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಇನ್ನು ಕೊನೆಯ ಎರಡು ಪಂದ್ಯಗಳು ಆಗಸ್ಟ್ 06 ಹಾಗೂ 07ರಂದು ಪ್ಲೋರಿಡಾದಲ್ಲಿ ನಡೆಯಲಿದೆ. ಈ ಸಂಪೂರ್ಣ ಟೂರ್ನಿಯು ಫ್ಯಾನ್‌ಕೋಡ್(FanCode)ನಲ್ಲಿ ಪ್ರಸಾರವಾಗಲಿದೆ.
ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಇತ್ತೀಚೆಗಷ್ಟೇ ನೇಮಕವಾಗಿರುವ ನಿಕೋಲಸ್ ಪೂರನ್, ನಾವು ಯುವ ಆಟಗಾರರನ್ನೊಳಗೊಂಡ ತಂಡವನ್ನು ಹೊಂದಿದ್ದು, ಗತಕಾಲದ ವೈಭವವನ್ನು ಮರುಕಳಿಸುವಂತ ಆಟವನ್ನು ಆಡುವುದಾಗಿ ಪೂರನ್ ತಿಳಿಸಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವೇಳಾಪಟ್ಟಿ ಹೀಗಿದೆ ನೋಡಿ
ಏಕದಿನ ಸರಣಿ ವೇಳಾಪಟ್ಟಿ
1st ODI: ಜುಲೈ 22 (ಪೋರ್ಟ್ ಆಫ್ ಸ್ಪೇನ್)
2nd ODI: ಜುಲೈ 24 (ಪೋರ್ಟ್ ಆಫ್ ಸ್ಪೇನ್)
3rd ODI: ಜುಲೈ 27 (ಪೋರ್ಟ್ ಆಫ್ ಸ್ಪೇನ್)
ಎಲ್ಲಾ ಏಕದಿನ ಸರಣಿಯ ಪಂದ್ಯಗಳ ನೇರಪ್ರಸಾರ 7 pm ಭಾರತೀಯ ಕಾಲಮಾನ ಆರಂಭವಾಗಲಿವೆ
ಏಕದಿನ ಸರಣಿಯ ವೇಳಾಪಟ್ಟಿ
1st T20I: ಜುಲೈ 29: (ಪೋರ್ಟ್ ಆಫ್ ಸ್ಪೇನ್)
2nd T20I: ಆಗಸ್ಟ್ 1 (ಸೇಂಟ್ಸ್ ಕಿಟ್ಸ್& ನೇವಿಸ್)
3rd T20I: ಆಗಸ್ಟ್ 2 (ಸೇಂಟ್ಸ್ ಕಿಟ್ಸ್& ನೇವಿಸ್)
4th T20I: ಆಗಸ್ಟ್ 6 (ಪ್ಲೋರಿಡಾ, USA)
5th T20I: ಆಗಸ್ಟ್ 7 (ಪ್ಲೋರಿಡಾ, USA)
ಎಲ್ಲಾ ಟಿ20 ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ 8 pm ನಿಂದ ಆರಂಭವಾಗಲಿವೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist