ನವದೆಹಲಿ: ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರುವ ವಿಚಾರದಿಂದ ಹಿಂದೆ ಸರಿದಿದ್ದು, ಕೈ ಪಾಳಯದಿಂದ ಹೊರಬಂದ ಸುಮಾರು ವಾರಗಳ ನಂತರ ನಾನು “ಎಂದಿಗೂ ಕಾಂಗ್ರೆಸ್ ಪಕ್ಷದೊಂದಿಗೆ ಹೋಗುವುದಿಲ್ಲ” ಎಂದು ಮಂಗಳವಾರ ಘೋಷಿಸಿದರು ಮತ್ತು ಕಾಂಗ್ರೆಸ್ ವಿಚಾರಕ್ಕೆ ಕೈ ಮುಗಿದಿದ್ದಾರೆ.
“2015ರಲ್ಲಿ ಬಿಹಾರ ಗೆದ್ದೆವು. 2017ರಲ್ಲಿ ಪಂಜಾಬ್ ಗೆದ್ದೆವು. 2019ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯನ್ನು ಗೆಲ್ಲಿಸಿದ್ದೆವು. ತಮಿಳುನಾಡು ಮತ್ತು ಬಂಗಾಳದಲ್ಲಿ ಗೆದ್ದೆವು. 11 ವರ್ಷಗಳಲ್ಲಿ ನಾವು ಸೋತಿದ್ದು ಒಂದೇ ಒಂದು ಚುನಾವಣೆ… 2017ರ ಉತ್ತರ ಪ್ರದೇಶ ಚುನಾವಣೆ. ಅದಕ್ಕಾಗಿಯೇ ನಾನು ಎಂದಿಗೂ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಬಾರದು ಎಂದು ನಿರ್ಧರಿಸಿದ್ದೇನೆ” ಎಂದು ಪ್ರಶಾಂತ್ ಕಿಶೋರ್ ಕೈಮುಗಿದು ಹೇಳಿದ್ದಾರೆ.
ಕಾಂಗ್ರೆಸ್ ಎಂದಿಗೂ ಒಗ್ಗಟ್ಟಾಗದ ಪಕ್ಷ ಎಂದ ಅವರು, ಈಗಿನ ಕಾಂಗ್ರೆಸ್ ಮುಖ್ಯಸ್ಥರು ಕೆಳಗಿಳಿದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಾನು ಹೋದರೆ ನಾನೂ ಮುಳುಗುತ್ತೇನೆ ಎಂದರು. ಮಾಜಿ ಕೇಂದ್ರ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ವೈಶೈಲಿಯಲ್ಲಿ ನಡೆದ ಸಭೆಯಲ್ಲಿ ಪ್ರಶಾಂತ್ ಕಿಶೋರ್ ಮಾತನಾಡುತ್ತಿದ್ದರು.
ಇದಕ್ಕೂ ಮೊದಲು, ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ “ಚಿಂತನ್ ಶಿಬಿರ” ಅಥವಾ ಕಾರ್ಯತಂತ್ರದ ಸಭೆಯನ್ನು ವೈಫಲ್ಯ ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದರು. ಮತ್ತು ಈ ವರ್ಷದ ಕೊನೆಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಪಕ್ಷಕ್ಕೆ ಅವನತಿಯ ಭವಿಷ್ಯ ನುಡಿದಿದ್ದರು.
ಪಕ್ಷದಲ್ಲಿ ಪ್ರಶಾಂತ್ ಕಿಶೋರ್ ಅವರ ಪಾತ್ರದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಒಂದು ವರ್ಷದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ನೊಂದಿಗೆ ಹೋಗುವ ಮಾತುಕತೆ ವಿಫಲವಾಯಿತು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist