ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ವಿಶೇಷ ಪೋಸ್ಟ್ಗಳನ್ನು ಹಂಚಿಕೊಳ್ಳುವ ಅವರು, ಅದಕ್ಕೆ ವಿಭಿನ್ನ ಶೀರ್ಷಿಕೆಗಳನ್ನು ನೀಡಿ ಜನರ ಗಮನ ಸೆಳೆಯುತ್ತಾರೆ. ತಮ್ಮ ಇಲಾಖೆಯ ಕೆಲಸಗಳ ನಡುವೆಯೂ ಅವರು ನೆಟ್ಟಿಗರೊಂದಿಗೆ ಇಂತಹ ಸಂವಾದ ನಡೆಸುವುದು ಮಾಮೂಲು. ವೈರಲ್ ವಿಡಿಯೋಗಳಿಂದ ಹಿಡಿದು, ಪ್ರೇರಣಾದಾಯಿ ಪೋಸ್ಟ್ಗಳವರೆಗೆ ಸ್ಮೃತಿ ಹಲವು ವಿಚಾರಗಳನ್ನು ಶೇರ್ ಮಾಡುತ್ತಾರೆ. ಇತ್ತೀಚೆಗೆ ಅವರು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ (Viral) ಆಗಿದೆ. ಅದಕ್ಕೆ ಅವರು ನೀಡಿದ ಕ್ಯಾಪ್ಶನ್ ಕೂಡ ಗಮನಸೆಳೆದಿದೆ. ‘ಜೀವನದಲ್ಲಿ ಮಜಾ ಅಂದರೆ ಇದು’ ಎಂದು ಶೀರ್ಷಿಕೆ ನೀಡಿ ಮುದ್ದಾದ ವಿಡಿಯೋ ಹಂಚಿಕೊಂಡಿದ್ದಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ.
ಸ್ಮೃತಿ ಇರಾನಿ ಹಂಚಿಕೊಂಡಿರುವ ವಿಡಿಯೋದಲ್ಲಿ ಗುಡ್ಡಗಾಡಿನ ಪ್ರದೇಶದ ಸುಂದರ ಹಳ್ಳಿಯ ನಡುವೆ ವ್ಯಕ್ತಿಯೊಬ್ಬ ಹಸುವೊಂದನ್ನು ನೇವರಿಸುತ್ತಿದ್ದಾನೆ. ಉದ್ದನೆಯ ರೋಮಗಳನ್ನು ಹೊಂದಿರುವ ಆ ಹಸು ತನ್ನ ಒಡೆಯನ ನೇವರಿಸುವಿಕೆಗೆ ಸಂತಸದಿಂದ ಮೈಯೊಡ್ಡಿ ನಿಂತಿದೆ. ಆ ವ್ಯಕ್ತಿ ಮೈಯನ್ನು ತಿಕ್ಕುವುದನ್ನು ನಿಲ್ಲಿಸಿದರೂ ಕೂಡ ಆ ಹಸು ನಿಂತ ಭಂಗಿಯಲ್ಲೇ ನಿಂತಿದೆ. ಹಸುವಿನ ಪ್ರತಿಕ್ರಿಯೆ ನೋಡಲು ಬಹಳ ಸುಂದರವಾಗಿದೆ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist