
ವಾಷಿಂಗ್ಟನ್ (ಏ. 08) ಉದ್ಯೋಗ ಆಧರಿತ ವಲಸಿಗರಿಗೆ ಗ್ರೀನ್ ಕಾರ್ಡ್ (Green Card) ವಿತರಣೆ ವೇಳೆ ಇದುವರೆಗೆ ಜಾರಿಯಲ್ಲಿದ್ದ ದೇಶವಾರು ಮಿತಿಯನ್ನು ತೆಗೆದು ಹಾಕಲು ಮತ್ತು ಕುಟುಂಬ ಆಧರಿತ ವಲಸಿಗರಿಗೆ ನೀಡುವ ದೇಶವಾರು ಗ್ರೀನ್‌ಕಾರ್ಡ್ ಮಿತಿಯನ್ನು ಶೇ.7ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ಮಸೂದೆಯನ್ನು ಅಮೆರಿಕದ (USA) ಪ್ರಮುಖ ಸಂಸದೀಯ ಸಮಿತಿಯೊಂದು ಅನುಮೋದಿಸಿದೆ.ಅನುಮೋದನೆಗೊಂಡ ಮಸೂದೆ ಕಾಯ್ದೆ ರೂಪ ಪಡೆದುಕೊಂಡರೆ, ಅಮೆರಿಕದ ಗ್ರೀನ್‌ಕಾರ್ಡ್ ಪಡೆಯಲು ಸರದಿಯಲ್ಲಿರುವ ಲಕ್ಷಾಂತರ (India) ಭಾರತೀಯ ಟೆಕ್ಕಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಲಾಭವಾಗಲಿದೆ.ಸದನದ ನ್ಯಾಯಾಂಗ ಸಮಿತಿಯು ಬುಧವಾರ ರಾತ್ರಿ ಕಾನೂನುಬದ್ಧ ಉದ್ಯೋಗಕ್ಕಾಗಿ ಗ್ರೀನ್‌ಕಾರ್ಡ್‌ಗಳ ಸಮಾನ ಲಭ್ಯತೆ (ಈಗಲ್)ಕಾಯ್ದೆಯನ್ನು 22-14 ಮತಗಳ ಅಂತರದಿಂದ ಅಂಗೀಕಾರ ಮಾಡಿದೆ. ಇದರಿಂದಾಗಿ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿ ಗ್ರೀನ್ ಕಾರ್ಡ್ ಮೂಲಕ ಶಾಶ್ವತ ಕಾನೂನುಬದ್ಧ ನಿವಾಸಕ್ಕಾಗಿ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಲಕ್ಷಾಂತರ ವಲಸಿಗ ಭಾರತೀಯರಿಗೆ ಶೀಘ್ರವೇ ಗ್ರೀನ್‌ಕಾರ್ಡ್ ಸಿಗುವ ಸುಳಿವು ಲಭ್ಯವಾಗಿದೆ. ಮಸೂದೆಯನ್ನು ಶೀಘ್ರ ಸದನದಲ್ಲಿ ಚರ್ಚೆ ಹಾಗೂ ಮತಕ್ಕಾಗಿ ಕಳುಹಿಸಲಾಗುತ್ತಿದ್ದು, ಅಮೆರಿಕದ ಮೇಲ್ಮನೆ ಸೆನೆಟ್ ಇದನ್ನು ಅಂಗೀಕಾರಗೊಳಿಸಿದ ನಂತರ ರಾಷ್ಟಾ್ರಧ್ಯಕ್ಷರ ಅಂಕಿತಕ್ಕಾಗಿ ಕಳುಹಿಸಲಾಗುವುದು. ನಂತರವೇ ಇದು ಅಧಿಕೃತ ಕಾಯ್ದೆಯಾಗಿ ಜಾರಿಗೆ ಬರಲಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist