2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್ಟಿ ಆದಾಯವು 1,33,026 ಕೋಟಿ ರೂ.ಗಳಾಗಿವೆ.
ಜಿಎಸ್ಟಿ ಆದಾಯದಲ್ಲಿ ಸಿಜಿಎಸ್ಟಿ 24,435 ಕೋಟಿ ರೂ.ಗಳು, ಎಸ್ಜಿಎಸ್ಟಿ 30,779 ಕೋಟಿ ರೂ.ಗಳು, ಐಜಿಎಸ್ಟಿ 67,471 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 33,837 ಕೋಟಿ ರೂ.ಗಳೂ ಸೇರಿದಂತೆ) ಮತ್ತು ಸೆಸ್ 10,340 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 638 ಕೋಟಿ ರೂ.ಗಳೂ ಸೇರಿದಂತೆ) ಒಳಗೊಂಡಿದೆ.
ಸರ್ಕಾರವು ಐಜಿಎಸ್ಟಿಯಿಂದ ಸಿಜಿಎಸ್ಟಿಗೆ 26,347 ಕೋಟಿ ರೂ.ಗಳು ಮತ್ತು ಎಸ್ಜಿಎಸ್ಟಿಗೆ 21,909 ಕೋಟಿ ರೂ.ಗಳನ್ನು ಇತ್ಯರ್ಥ ಮಾಡಿದೆ. ನಿಯಮಿತ ಇತ್ಯರ್ಥದ ನಂತರ 2022ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿ ಗಾಗಿ 50,782 ಕೋಟಿ ರೂ.ಗಳು ಮತ್ತು ಎಸ್ಜಿಎಸ್ಟಿಗಾಗಿ 52,688 ಕೋಟಿ ರೂ.ಗಳಾಗಿವೆ. 2022ರ ಫೆಬ್ರವರಿ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ ಶೇ. 18ರಷ್ಟು ಹೆಚ್ಚಾಗಿದೆ ಮತ್ತು 2020ರ ಫೆಬ್ರವರಿಯಲ್ಲಿನ ಜಿಎಸ್ಟಿ ಆದಾಯಕ್ಕಿಂತ ಶೇ.26ರಷ್ಟು ಅಧಿಕವಾಗಿದೆ.
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ
ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?