ರಣಬೀರ್ ಗಾಸಿಪ್ ಹಬ್ಬಿಸುತ್ತಾರೆ ಅನ್ನೋ ಗಾಳಿಸುದ್ದಿಯ ಬಗ್ಗೆ ನಟಿ ಆಲಿಯಾ ಭಟ್ ಸ್ಪಷ್ಟನೆ ಕೊಟ್ಟಿದ್ದಾರೆ. ರಣಬೀರ್ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದು ನನ್ನ ಜೀವನದಲ್ಲಿ ಕೇಳಿಕೊಂಡಿಲ್ಲ ಅಂತ ಭಾವಿ ಪತಿಯ ಪರವಾಗಿ ಮಾತನಾಡಿದ್ದಾರೆ.
ಆಲಿಯಾಭಟ್ ರಣಬೀರ್ ಸಿಂಗ್ ಕಪೂರ್ ಮದುವೆಯ ಬಗ್ಗೆ ಇತ್ತೀಚೆಗಷ್ಟೇ ದೊಡ್ಡಸುದ್ದಿಯಾಗಿತ್ತು. ಇಬ್ಬರು ಇನ್ನೇನು ಮದೆಯಾಗಿಯೇ ಬಿಟ್ಟರು ಅನ್ನೋ ನಿರೀಕ್ಷೆಗಳು ಎರಡು ವರ್ಷದಿಂದ ಓಡಾಡುತ್ತಲೇ ಇದೆ. ಕಳೆದ ವಾರವಷ್ಟೇ ಆಲಿಯಾ ಭಟ್ ಎಲ್ಲಾ ಸರಿಹೋದರೆ ಈ ವರ್ಷ ಮದುವೆಯಾಗುತ್ತೇವೆ ಅಂತಲೂ, ಈಗಾಗಲೇ ರಣಬೀರ್ ರನ್ನು ನಾನು ಮಾನಸಿಕವಾಗಿ ಮದುವೆಯಾಗಿದ್ದೇನೆ ಅಂತ ಹೇಳುವ ಮೂಲಕ ಇಬ್ಬರ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು ಆಲಿಯಾಭಟ್.
ಈಗ ಮದುವೆ, ಪ್ರೀತಿಯ ಮುಂದುವರಿದ ಭಾಗ ಎನ್ನುವಂತೆ, ರಣಬೀರ್ ತನ್ನ ನಲ್ಲೆಯ ಹೊಸ ಸಿನಿಮಾ ಗಂಗೂಬಾಯಿ ಕಾಥಿಯಾವಾಡಿ ರೀತಿಯೇ ಪಾಪರಾಜಿ (ಫೋಟೋಗ್ರಾಫರ್ ) ಮುಂದೆ ನಟನೆಮಾಡಿ ತೋರಿಸಿದ್ದಾರಂತೆ. ನಾಯಕನಟ ಆರ್.ಜೆ ಸಿದ್ಧಾರ್ಥ್ ಕನ್ನಾನ್ ಅವರ ಜೊತೆ ಗಂಗೂಬಾಯಿಯ ಪ್ರೋಮಷನ್ ನಲ್ಲಿ ತೊಡಗಿರುವ ಆಲಿಯಾ ಭಟ್ಟೇ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
‘ಪ್ರಿಯಕರನಿಗೆ ನನ್ನನ್ನು ಗಂಗೂಬಾಯಿ ಪಾತ್ರದಲ್ಲಿ ನೋಡುವುದು ಎಂದರೆ ಎಲ್ಲಿಲ್ಲದ ಖುಷಿ, ಸಂಭ್ರಮ. ಅದರಲ್ಲೂ ಮನರಂಜನೆ ಕಾಣಲು ಶುರುಮಾಡುತ್ತಾರೆ. ತಾವೇ ಗಂಗೂಬಾಯಿ ರೀತಿ ಫೋಸು ಕೊಟ್ಟಿದ್ದಾರೆ. ಆಗ ರಣಬೀರ್ ಕ್ಯೂಟಾಗಿ ಕಾಣಿಸುತ್ತಿದ್ದರು’ ಎಂದು ಭಾವಿ ಪತಿಯ ಬಗ್ಗೆ ಆಲಿಯಾ ವಿವರಣೆನೀಡಿದ್ದಾರೆ.
ಇತೀಚೆಗೆ ರಣಬೀರ್ ಕಪೂರರ ಗೌರವಕ್ಕೆ ಧಕ್ಕೆ ತರುವಂತ ಗಾಳಿಸುದ್ದಿಯೊಂದು ಹರಿದಾಡುತ್ತಿತ್ತು. ಅದರ ಬಗ್ಗೆಯೂ ಆಲಿಯಾ ಪ್ರತಿಕ್ರಿಯೆ ನೀಡಿದ್ದಾರೆ. ‘ಇಡೀ ನನ್ನ ಜೀವನದಲ್ಲಿ ರಣಬೀರ್ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದು ನಾನು ಕೇಳಲೇ ಇಲ್ಲ. ಈ ಅವರ ಗುಣದಿಂದಲೇ ಅವರನ್ನು ಹೆಚ್ಚು ಪ್ರೀತಿಸಲು ಶುರುಮಾಡಿದೆ. ಒಂದು ಪಕ್ಷ ಯಾರನ್ನಾದರು ವಿಮರ್ಶೆ ಮಾಡಬೇಕಿದ್ದರೂ, ರಣಬೀರ್ ಕೇವಲ ಅವರ ಧನಾತ್ಮಕ ಅಂಶಗಳನ್ನು ಮಾತ್ರ ಎತ್ತಿತೋರಿಸುತ್ತಿದ್ದರು. ಇಲ್ಲದೇ ಇದ್ದರೆ ಸುಮ್ಮನಾಗುತ್ತಿದ್ದರು. ರಣಬೀರ್ ಒಳ್ಳೆತನವನ್ನಷ್ಟೇ ನಂಬುವುದು’ ಎಂದು ಭಾವಿಪತಿಯ ಗುಣಗಾನ ಮಾಡಿದರು.
‘ಇಂಥ ಗುಣಗಳನ್ನು ಹೊಂದಿರಿವುದರಿಂದಲೇ ರಣಬೀರರನ್ನು ಎತ್ತರಕ್ಕೆ ಬೆಳೆಸಿರುವುದು. ಅವರಿಗೆ ಗಾಸಿಪ್ ಅಂದರೆ ಆಗೋಲ್ಲ. ಏಕೆಂದರೆ, ಸ್ವತಃ ರಣಬೀರ್ ಗಾಸಿಪ್ಪಿಗರಲ್ಲ, ಗಾಸಿಪ್ ಗೆ ಒಳಗಾಗುವವರೂ ಅಲ್ಲ. ಅವರು ಯಾವಾಗಲು ಹೇಳುತ್ತಿರುತ್ತಾರೆ, ಯಾರ ಬಗ್ಗೆಯೂ ಗಾಸಿಪ್ ಹರಡಬೇಡಿ ಅಂತ. ಗಾಸಿಪ್ ಹಬ್ಬಿಸುವವರಿಗೆ ಗೌರವ ಸಿಗೋದಿಲ್ಲ’ ಎಂದು ಆಲಿಯಾ ಹೇಳಿದರು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist