ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರವನ್ನು ಕೊಲೆ ಮಾಡ್ತೀವೆ- ಜೋಗಿ ಪ್ರೇಮ್

Twitter
Facebook
LinkedIn
WhatsApp
ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರವನ್ನು ಕೊಲೆ ಮಾಡ್ತೀವೆ- ಜೋಗಿ ಪ್ರೇಮ್

ಫೆಬ್ರವರಿ 24 ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಬಿಡುಗಡೆಯಾಗುತ್ತದೆ. ಇದಕ್ಕೂ ಮುನ್ನ ಕನ್ನಡ ಸಿನಿಮಾಗಳು ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಗೊಳ್ಳುವಾಗ ಆಗುವ ಯಾತನೆಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯೇ ಕೊನೆ ಹಾಡಬೇಕು ಎಂದು ಪ್ರೇಮ್ ಮನವಿ ಮಾಡಿದ್ದಾರೆ.

‘ಮಲ್ಟಿಪ್ಲೆಕ್ಸ್ ಗಳು ಕನ್ನಡ ಸಿನಿಮಾಗಳನ್ನು ಕ್ಯಾರೇ ಅನ್ನುತ್ತಿಲ್ಲ. ಅವರು ಕನ್ನಡ ಚಿತ್ರಗಳ ಬಗ್ಗೆ ಯಾಕೆ ಈ ರೀತಿ ನಿರ್ಲಕ್ಷ್ಯ ತೋರುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಕನ್ನಡ ಸಿನಿಮಾವನ್ನು ಕೊಲ್ಲುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಗಳಿಗೆ ಸಂಬಂಧಿಸಿದವರನ್ನು ಕರೆದುಕೂಡಲೇ ಮಾತನಾಡಿ, ಕನ್ನಡಚಿತ್ರಗಳ ಕೊಲೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ನಿರ್ದೇಶಕ ಜೋಗಿ ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಅವರು ವಾಣಿಜ್ಯ ಮಂಡಳಿಗೆ ಮನವಿ ಪತ್ರವೊಂದನ್ನು ನೀಡಿ ಮಾತನಾಡಿದರು. ‘ಹಿಂದಿ, ತಮಿಳು, ಇಂಗ್ಲೀಷ್ ಚಿತ್ರಗಳ ಪ್ರದರ್ಶನ ಸಂದರ್ಭದಲ್ಲಿ 7 ಪಾಯಿಂಟ್ ನಷ್ಟು ಸೌಂಡ್ ಇಡುತ್ತಾರೆ. ಆದರೆ ಕನ್ನಡದ ವಿಚಾರಕ್ಕೆ ಬಂದಾಗ 5 ಪಾಯಿಂಟ್ ಇಡೋದು ಕಷ್ಟ. ಕೇಳಿದರೆ, ಇಲ್ಲ ಕರ್ಕಷವಾಗಿ ಕೇಳುತ್ತೆ ಅಂತ ಸಬೂಬು ಹೇಳ್ತಾರೆ. ಒಂದು ಸಿನಿಮಾವನ್ನು ಶಬ್ದ ತಂತ್ರಜ್ಞಾನ ಇಲ್ಲದೇ ನೋಡುವುದಾದರೆ ಹೇಗೆ, ಆಗ ಸಿನಿಮಾ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿದ್ದೋಗುತ್ತದೆ. ಇದು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಕೆಲಸ’ ಎಂದು ಪ್ರೇಮ್ ಗುರುತರವಾಗಿ ಆರೋಪಿಸಿದರು.
‘ಸಿನಿಮಾಗಳನ್ನು ಅಪ್ ಲೋಡ್ ಮಾಡಲು  ಯುಎಫ್ ಒ ಮತ್ತು ಕ್ಯೂಬ್ ಕಂಪನಿಗಳ ಮೊರೆ ಹೋಗಬೇಕು. ಅವು ಚೆನ್ನೈ, ಮುಂಬಯಿಗಳಲ್ಲಿ ಇವೆ. ನಮ್ಮ ಬೆಂಗಳೂರಲ್ಲಿ ಏಕೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿರುವಾಗ ನಾವೆಲ್ಲ ಏಕೆ ಚೆನ್ನೈ ಅನ್ನು ಅವಲಂಬಿಸಬೇಕು. ನನ್ನ ವಿಲನ್ ಚಿತ್ರವನ್ನು ಅಪ್ ಲೋಡ್ ಮಾಡಬೇಕಾದರೆ ಬೆಳಗ್ಗೆಯಿಂದ ಸಂಜೆ ತನಕ ಕಾಯಿಸಿದ್ದಾರೆ. ಈ ಅವಲಂಬನೆ ತಕ್ಷಣ ನಿಲ್ಲಬೇಕು. ನಮ್ಮಲ್ಲಿ ಯುಎಫ್ ಒ ಮತ್ತು ಕ್ಯೂಬ್ ಕಚೇರಿ ಇದ್ದರೆ ನಾವು ಇಲ್ಲಿಂದಲೇ ಅಪ್ ಲೋಡ್ ಮಾಡಬಹುದು. ವಾಣಿಜ್ಯ ಮಂಡಳಿ ಇತ್ತಕಡೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರವು ಫೆಬ್ರವರಿ 24ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರೇಮ್ ಈಗ ದನಿ ಎತ್ತಿದ್ದಾರೆ. ಇಲ್ಲವಾದರೆ ಸುಮ್ಮನೆ ಇರುತ್ತಿದ್ದರು ಎನ್ನುವ ಮಾತು ಬಂತು. ಅದಕ್ಕೆ ಪ್ರೇಮ್, ‘ನಾನು ಈಗ ದನಿ ಎತ್ತಿದ್ದೇನೆ. ನನಗೆ ಬೆಂಬಲ ಕೊಡಿ. ಈ ಮೊದಲು ಯಾರಾದರು ಈ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತಿದ್ದೆ. ಇದು ಕೇವಲ ಪ್ರೇಮ್ ಸಮಸ್ಯೆ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡುವವರ ಎಲ್ಲರ ಸಮಸ್ಯೆ’ ಎಂದು ಪ್ರೇಮ್ ಸಮರ್ಥಿಸಿಕೊಂಡರು

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು